SportsKannada | ಸ್ಪೋರ್ಟ್ಸ್ ಕನ್ನಡ

ಎರಡನೇ ಆವೃತ್ತಿಯ ಕೋಲಾರ ಪ್ರೀಮಿಯರ್‌ ಲೀಗ್-2020

ಕೋಲಾರ ಅಟ್ಯಾಕರ್ಸ್ ತಂಡದ ವತಿಯಿಂದ ಜನವರಿ 11,12 ಹಾಗೂ 13 ರ ತನಕ ಕೋಲಾರದ ಸರ್.ಎಮ್‌‌.ವಿಶ್ವೇಶ್ವರಯ್ಯ ಸ್ಟೇಡಿಯಂ ನಲ್ಲಿ ಹಗಲಿನ 3 ದಿನಗಳ  ಎರಡನೇ ಆವೃತ್ತಿಯ “ಕೋಲಾರ ಪ್ರೀಮಿಯರ್‌ ಲೀಗ್-2020” ನಡೆಯಲಿದೆ.

ಕೋಲಾರ ಪರಿಸರದ 16 ಫ್ರಾಂಚೈಸಿಗಳಾದ
ಸೈ ಬಾಯ್ಸ್ ಮುಳಬಾಗಿಲು
ಫಿಟ್ ವರ್ಲ್ಡ್
ಎಮ್‌.ಸಿ‌.ಸಿ
ಆರ್.ಆರ್.ಸ್ಪೋರ್ಟ್ಸ್
ಎಸ್.ಪಿ.ಸಿ‌‌ ಕ್ರಿಕೆಟರ್ಸ್

ಸಿ‌.ಸಿ‌.ಸಿ‌ ಕ್ರಿಕೆಟರ್ಸ್
ಅವೆಂಜರ್ಸ್ ಕೋಲಾರ
ವಿಚಿಯೋ ವಾರಿಯರ್ಸ್
ವಿಲಾಸ್ ಕ್ರಿಕೆಟರ್ಸ್
ಎಫ್.ಸಿ.ಸಿ ಕ್ರಿಕೆಟರ್ಸ್
ವಾಯ್ಸ್ ಆಫ್ ಕೋಲಾರ
ಸುಲಿಕುಂಟೆ

ಎಮ್.ಎಸ್.ಎ ಕ್ರಿಕೆಟರ್ಸ್
ಎ.ಸಿ.ಸಿ‌ ಕ್ರಿಕೆಟರ್ಸ್
ಪಿ.ಆರ್.ಡಿ ಸ್ಟಾರ್ಸ್

ಫ್ರೆಂಡ್ಸ್ ಇಲೆವೆನ್ ಪ್ರತಿಷ್ಟಿತ ಟ್ರೋಫಿಗಾಗಿ ಸೆಣಸಾಡಲಿದ್ದು, ವಿಜೇತ ತಂಡ 1 ಲಕ್ಷ ಹಾಗೂ ರನ್ನರ್ಸ್ ತಂಡ 50 ಸಾವಿರ ನಗದು ಸಹಿತ ಅತ್ಯಾಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರಿದ ಆಟಗಾರರಿಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.

M.Sports ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಿದರೆ,ಪ್ರಸಿದ್ಧ ವೀಕ್ಷಕ ವಿವರಣೆಕಾರ ಪ್ರಶಾಂತ್ ಅಂಬಲಪಾಡಿ ಹಾಗೂ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಪಂದ್ಯಾವಳಿಯ ಮೆರುಗನ್ನು ಹೆಚ್ಚಿಸಲಿದ್ದಾರೆ.

ಆರ್.ಕೆ‌.ಆಚಾರ್ಯ ಕೋಟ

Exit mobile version