SportsKannada | ಸ್ಪೋರ್ಟ್ಸ್ ಕನ್ನಡ

ಪ್ರಚಂಡ ಆಟದ ಹೊರತಾಗಿಯೂ, 2018 ರಂತೆಯೇ, ಈ ಬಾರಿಯೂ ವಿಶ್ವಕಪ್‌ನಿಂದ ಹೊರಗುಳಿದ ಜಿಂಬಾಬ್ವೆ

ವಿಶ್ವಕಪ್‌ನಿಂದ ಹೊರಗುಳಿದಿರುವುದು ಖಂಡಿತವಾಗಿಯೂ ಜಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಜಿಂಬಾಬ್ವೆ ತಮ್ಮ ನೆಲದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ 2023 ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಅಬ್ಬರದ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನೂ ಆಕರ್ಷಿಸಿತ್ತು.
ಸೀನ್ ವಿಲಿಯಮ್ಸ್ ಮತ್ತು ಸಿಕಂದರ್ ರಝಾ ಈ ಭಾಗದಲ್ಲಿ ಅಸಾಧಾರಣ ಆಟಗಾರರಾಗಿದ್ದರು ಮತ್ತು ಜಿಂಬಾಬ್ವೆ ಅಭಿಮಾನಿಗಳ ಬಳಗವನ್ನು ಮತ್ತಷ್ಟು ವಿಸ್ತರಿಸಲು ಅವರು ಅತ್ಯುತ್ತಮ ಪ್ರದರ್ಶನವನ್ನು ತೋರಿಸಿದರು. ಆದರೆ ಜಿಂಬಾಬ್ವೆ ಗೆಲುವಿನ ಗೆರೆ ದಾಟುತ್ತದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾಗಲೇ ಆಫ್ರಿಕನ್ ತಂಡ ನೆಲಕಚ್ಚಿತು.
ಸೂಪರ್ 6ರಲ್ಲಿ ಓಮನ್ ವಿರುದ್ಧ ನೀರಸ ಗೆಲುವಿನ ನಂತರ, ಜಿಂಬಾಬ್ವೆ ಶ್ರೀಲಂಕಾದಿಂದ ಮತ್ತು ನಂತರ ಸ್ಕಾಟ್ಲೆಂಡ್ನಿಂದ ವಾಶ್ ಔಟ್ ಆಯಿತು.ಖಂಡಿತವಾಗಿಯೂ ವೆಸ್ಟ್ ಇಂಡೀಸ್ ನಂತರ ಮತ್ತೊಂದು ಹೃದಯವಿದ್ರಾವಕ ವಿದಾಯ.
ಲೀಗ್ ಹಂತದಲ್ಲಿ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದ ಜಿಂಬಾಬ್ವೆ ಪಂದ್ಯಾವಳಿಯನ್ನು ಅಬ್ಬರದಿಂದ ಆರಂಭಿಸಿತು.ಆದರೆ ಸೂಪರ್ 6ರ ಸೋಲು ನಿರ್ಣಾಯಕವಾಗಿತ್ತು. ಜಿಂಬಾಬ್ವೆ ಟೂರ್ನಿಯ ಕೊನೆಯ ಎರಡು ಪಂದ್ಯಗಳಲ್ಲಿ ಸೋಲಿನಿಂದ ಕಂಗೆಟ್ಟಿತ್ತು.2018ರ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಾವಳಿಯ ಸಮಯದಲ್ಲೂ ಇದೇ ರೀತಿ ಸಂಭವಿಸಿತ್ತು.ಆ ಟೂರ್ನಿಯಲ್ಲಿನ ಜಿಂಬಾಬ್ವೆ ಪ್ರದರ್ಶನಕ್ಕೂ ಪ್ರಸಕ್ತ ಅರ್ಹತಾ ಸುತ್ತಿನ ಜಿಂಬಾಬ್ವೆ ಪ್ರದರ್ಶನಕ್ಕೂ ಗಮನಾರ್ಹ ಸಾಮ್ಯತೆ ಇದೆ.ಆದ್ದರಿಂದ ಒಂದೇ ರೀತಿ,ಎರಡೂ ಬಾರಿ ಔಟ್ ಆಗುವ ಮಾದರಿ ಕಂಡು ಬಂತು.
2018 ರ ಅರ್ಹತಾ ಪಂದ್ಯಗಳಲ್ಲಿ, ಜಿಂಬಾಬ್ವೆ ತನ್ನ ಮೊದಲ ಐದು ಪಂದ್ಯಗಳಲ್ಲಿ ಅಜೇಯವಾಗಿತ್ತು ಆದರೆ ಕೊನೆಯ ಎರಡು ಸೋಲುಗಳು ಎಲ್ಲವನ್ನೂ ಹಾಳುಮಾಡಿದವು. ಅದೇ ರೀತಿ ಈ ಬಾರಿಯೂ ನಡೆದಿದೆ. ಒಂದೇ ವ್ಯತ್ಯಾಸವೆಂದರೆ ವಿಶ್ವಕಪ್ 2018 ರ ಅರ್ಹತಾ ಸುತ್ತಿನಲ್ಲಿ ಜಿಂಬಾಬ್ವೆ ನಾಲ್ಕನೇ ಪಂದ್ಯವನ್ನು ಟೈ ಮಾಡಿಕೊಂಡಿತು. ಆದರೆ ಈ ಬಾರಿ ಅದನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಎರಡು ಪಂದ್ಯಗಳ ಸೋಲು ಅವರನ್ನು ವರ್ಷಗಳ ಕಾಲ ಕುಟುಕುತ್ತದೆ.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ
Exit mobile version