SportsKannada | ಸ್ಪೋರ್ಟ್ಸ್ ಕನ್ನಡ

ವಿಪ್ರ ಟ್ರೋಫಿ 2024-ತಾಲೂಕು ಮಟ್ಟದಲ್ಲಿ ಕುಂದಾಪುರ-ರಾಜ್ಯ ಮಟ್ಟದಲ್ಲಿ ಅಯೋಧ್ಯಾ ಇಲೆವೆನ್ ಕುಂದಾಪುರ ಚಾಂಪಿಯನ್ಸ್.

ಕುಂದಾಪುರ ತಾಲ್ಲೂಕು ದ್ರಾವಿಡ ಬ್ರಾಹ್ಮಣ ಪರಿಷತ್(ರಿ) ಕುಂದಾಪುರ ಇವರ ಆಶ್ರಯದಲ್ಲಿ ತಾಲೂಕು ಯುವ ವಿಪ್ರ ವೇದಿಕೆ ವತಿಯಿಂದ ಮಾ,9/10ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ವಿಪ್ರ ಟ್ರೋಫಿ-2024 ಅದ್ಧೂರಿಯಾಗಿ ಜರುಗಿತು.
ಶನಿವಾರ ನಡೆದ ಕುಂದಾಪುರ/ಬೈಂದೂರು
ತಾಲೂಕು ಮಟ್ಟದ ಪಂದ್ಯಾಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು ಫೈನಲ್ ನಲ್ಲಿ ಕುಂದಾಪುರ ವಲಯ-ಮಾರಣಕಟ್ಟೆ ವಲಯದ ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಎರಡು ಟ್ರೋಪಿಯ ಪ್ರಾಯೋಜಕತ್ವವನ್ನು
ವಹಿಸಿದ್ದ ಹೆದ್ದಾರಿ ಮಠ ಶ್ರೀ ಗುರುಮೂರ್ತಿ ಅಡಿಗ ರವರು ವಿಜೇತರಿಗೆ ವಿತರಿಸಿದರು.
ರವಿವಾರ ರಾಜ್ಯ ಮಟ್ಟದ ಒಟ್ಟು 12 ತಂಡಗಳು ಭಾಗವಹಿಸಿದ್ದು,ಅಂತಿಮವಾಗಿ ಅಯೋಧ್ಯಾ ಇಲೆವೆನ್ ಕುಂದಾಪುರ ತಂಡ ಶಂಕರನಾರಾಯಣ ತಂಡವನ್ನು ಸೋಲಿಸಿ ವಿಪ್ರ ಟ್ರೋಫಿ-2024 ಆಕರ್ಷಕ ಪಾರಿತೋಷಕದ  ಸಹಿತ 44444 ಸಾವಿರ ರೂ ನಗದು ಹಾೂ ದ್ವಿತೀಯ ಸ್ಥಾನ ಶಂಕರನಾರಾಯಣ ತಂಡ  22222 ಸಾವಿರ ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕ ತಮ್ಮದಾಗಿಸಿಕೊಂಡರು.
ಪಂದ್ಯಾಟದ ಬೆಸ್ಟ್ ಬೌಲರ್ ಅಶ್ವಿನ್ ಕುಂದಾಪುರ ಅಯೋಧ್ಯಾ ಇಲೆವೆನ್,ಬೆಸ್ಟ್ ಬ್ಯಾಟರ್ ಚರಣ್ ಶಂಕರನಾರಾಯಣ,ಫೈನಲ್ ನ‌ ಪಂದ್ಯಶ್ರೇಷ್ಟ ಮತ್ತು ಸರಣಿಶ್ರೇಷ್ಟ ಪ್ರಶಸ್ತಿ ಅಯೋಧ್ಯಾ ಇಲೆವೆನ್ ತಂಡದ ವೆಂಕಟ್ ಭಟ್ ಪಡೆದುಕೊಂಡರು.
ತಾಲೂಕು ಮಟ್ಟದ ಮಹಿಳಾ ತ್ರೋಬಾಲ್ ಪಂದ್ಯಾಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು,ಕುಂದಾಪುರ ವಲಯ ಪ್ರಥಮ ಹಾಗೂ ಶಂಕರನಾರಾಯಣ ದ್ವಿತೀಯ ಪ್ರಶಸ್ತಿ ಪಡೆದರು.
ಸಮಾರೋಪ‌ ಸಮಾರಂಭದ ವೇದಿಕೆಯಲ್ಲಿ ಮಾತನಾಡಿದ ಕ್ರೀಡೋತ್ಸವ ಸಮಿತಿ ಅಧ್ಯಕ್ಷರಾದ ಮಾರಣಕಟ್ಟೆ ಶ್ರೀ ಕೃಷ್ಣಮೂರ್ತಿ ಮಂಜರು “ವಿಪ್ರ ಸಮಾಜದ ಯುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆ ವಿಪ್ರ ಟ್ರೋಫಿ ಸೃಷ್ಟಿಸಿದೆ. ಸಮಾಜದ ಒಗ್ಗಟ್ಟಿಗೆ ಇಂತಹ ಕ್ರೀಡಾಕೂಟಗಳಿಂದ ಸಹಕಾರಿಯಾಗಿದೆ.ಮುಂದಿನ ವರ್ಷ ಇನ್ನೂ ಅದ್ಧೂರಿಯಾಗಿ ಕ್ರಿಕೆಟ್ ಪಂದ್ಯಾಟ ನಡೆಸಲಿದ್ದೇವೆ” ಎಂದರು.
ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಕ್ರೀಡಾ ಪ್ರೋತ್ಸಾಹಕರಿಗೆ ಹಾಗೂ ಕ್ರೀಡಾಪಟುಗಳಿಗೆ ಕುಂದಾಪುರ ತಾಲೂಕು ಯುವ ವಿಪ್ರ ವೇದಿಕೆ ಅಧ್ಯಕ್ಷ ಶ್ರೀ ಅವನೀಶ ಹೊಳ್ಳ ಧನ್ಯವಾದ ಸಮರ್ಪಿಸಿದರು.
ಅಭಿನಂಧನ್ ಭಟ್ ಕಮಲಶಿಲೆ ಎರಡು ದಿನಗಳ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾದ ಹೆಚ್.ಎಸ್.ಹತ್ವಾರ್, ಕಾರ್ಯದರ್ಶಿ ರತ್ನಾಕರ ಉಡುಪ,ಖಜಾಂಚಿ ರಘುರಾಮ್ ರಾವ್ ಮಹಿಳಾ ವೇದಿಕೆ ಅಧ್ಯಕ್ಷ ಸಂಧ್ಯಾ ಉಡುಪ,ಲಕ್ಷ್ಮೀಶ್ ಮಂಜ ಕೋಟೇಶ್ವರ,ವಾಸುದೇವ ಬಾಯರಿ ಬೆಳ್ವೆ,ಸತ್ಯಮೂರ್ತಿ ಹೆಮ್ಮಣ್ಣ,ಯೋಗೀಶ್ ಯಡಿಯಾಳ್,ವಾದಿರಾಜ್ ಉಪಾಧ್ಯಾಯ ಹಾಗೂ ಯುವ ವಿಪ್ರ ವೇದಿಕೆ ಸಂಚಾಲಕರು ಮತ್ತು ವಲಯಗಳ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಂದ್ಯಾಟದ ನೇರ ಪ್ರಸಾರ ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಂಡಿತು.
Exit mobile version