SportsKannada | ಸ್ಪೋರ್ಟ್ಸ್ ಕನ್ನಡ

“ಡೈಮಂಡ್ ಜ್ಯುಬಿಲಿ ಕಪ್-2019” ವಿಜಯಾ ಹೈಸ್ಕೂಲ್ ಜಯನಗರ ಹಾಗೂ CIMS ಕಾಲೇಜಿಗೆ ಪ್ರಶಸ್ತಿ.

“ಡೈಮಂಡ್ ಜ್ಯುಬಿಲಿ ಕಪ್-2019”
ಅಂತರ್ ಶಾಲಾ,ಕಾಲೇಜು ಕ್ರಿಕೆಟ್ ಪಂದ್ಯಾವಳಿ
ವಿಜಯಾ ಹೈಸ್ಕೂಲ್ ಜಯನಗರ ಹಾಗೂ CIMS ಕಾಲೇಜಿಗೆ ಪ್ರಶಸ್ತಿ.

ದಿ ಕಮ್ಯೂನಿಟಿ ಸೆಂಟರ್ ಸಮೂಹ ವಿದ್ಯಾಸಂಸ್ಥೆಗಳ ವಜ್ರ ಮಹೋತ್ಸವ ಆಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಅಂತರ್ ಶಾಲಾ,ಕಾಲೇಜು ಮಟ್ಟದ ಪಂದ್ಯಾವಳಿಯ ವಿಜೇತರು.

ಅಂತರ್ ಶಾಲಾ ವಿಭಾಗ

ಪ್ರೌಢಶಾಲಾ ವಿಭಾಗದಲ್ಲಿ 12 ತಂಡಗಳು ಭಾಗವಹಿಸಿದ್ದು ಜಯನಗರದ ವಿಜಯಾ ಹೈಸ್ಕೂಲ್ ಫೈನಲ್ ನಲ್ಲಿ ಶಂಕರಪುರಂ ನ ವುಮೆನ್ ಪೀಸ್ ಹೈಸ್ಕೂಲ್ ನ್ನು ಸೋಲಿಸಿ ಪ್ರಥಮ ಪ್ರಶಸ್ತಿ ಜಯಿಸಿತು.
ವಿಜೇತ ತಂಡದ ಭಾಸ್ಕರ್ ಫೈನಲ್ ನಲ್ಲಿ ಅಮೂಲ್ಯ 13 ರನ್ ಹಾಗೂ 1 ವಿಕೆಟ್ ಉರುಳಿಸಿ ಪಂದ್ಯಶ್ರೇಷ್ಟ ಪ್ರಶಸ್ತಿ ಹಾಗೂ ರನ್ನರ್ಸ್ ತಂಡದ ಸುನಿಲ್ ಸರಣಿಯುದ್ದಕ್ಕೂ ಸರ್ವಾಂಗೀಣ ಪ್ರದರ್ಶನ ನೀಡಿ 116 ರನ್ ಹಾಗೂ 3 ವಿಕೆಟ್ ಪಡೆದು ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರು.

ಅಂತರ್ ಕಾಲೇಜು ವಿಭಾಗ

2 ದಿನಗಳ ಕಾಲ ಜರುಗಿದ್ದು,
24 ಕಾಲೇಜು ತಂಡಗಳು ಭಾಗವಹಿಸಿದ್ದು,ಅಂತಿಮವಾಗಿ ಫೈನಲ್ ನಲ್ಲಿ CIMS (ಕಮ್ಯೂನಿಟಿ ಸೆಂಟರ್)ಕಾಲೇಜ್ ಜಯನಗರ ತಂಡ ಬಗಲಗುಂಟೆಯ ಸೌಂದರ್ಯ ಕಾಲೇಜ್ ನ್ನು ಸೋಲಿಸಿ ಪ್ರಶಸ್ತಿ ಜಯಿಸಿದೆ.


ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ CIMS 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿತ್ತು.
ಚೇಸಿಂಗ್ ವೇಳೆ ಎಡವಿದ ಸೌಂದರ್ಯ ಕಾಲೇಜ್ 5 ವಿಕೆಟ್ ನಷ್ಟಕ್ಕೆ 48 ರನ್ ಗಳಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.

ಫೈನಲ್ ನಲ್ಲಿ 31 ರನ್ ಗಳಿಸಿ,
ಸರಣಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ
ಕಮ್ಯೂನಿಟಿ ವಿದ್ಯಾಸಂಸ್ಥೆಯ ಯಶವಂತ್ ಪಂದ್ಯಶ್ರೇಷ್ಟ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.


ಲೊಯೋಲಾ ಕಾಲೇಜಿನ ರಾಕೇಶ್
(5 ಪಂದ್ಯಗಳಲ್ಲಿ 66 ರನ್) ಬೆಸ್ಟ್ ಬ್ಯಾಟ್ಸ್‌ಮನ್,
CIMS (ಕಮ್ಯೂನಿಟಿ ಸೆಂಟರ್)ನ ಶ್ರೇಯಸ್ 5 ಪಂದ್ಯಗಳಲ್ಲಿ 6 ಓವರ್ ಎಸೆದು 21 ರನ್ ನೀಡಿ 8 ವಿಕೆಟ್ ಗಳಿಸಿ ಬೆಸ್ಟ್ ಬೌಲರ್ ಗೌರವಕ್ಕೆ ಪಾತ್ರರಾದರು.

ಕಮ್ಯೂನಿಟಿ ಸಮೂಹ ವಿದ್ಯಾಸಂಸ್ಥೆಗಳ ಛೇರ್ಮನ್ ಹಾಗೂ ಸಂಸ್ಥೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಲಾಗಿದ್ದು,
ಕ್ರಿಕ್ ಸೇ ಈ ಪಂದ್ಯಾವಳಿಯ ನೇರ ಪ್ರಸಾರ ಬಿತ್ತರಿಸಿದ್ದು,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ,ವೀಕ್ಷಕ ವಿವರಣೆಯಲ್ಲಿ ಗಿರಿಧರ್ ಸಹಕರಿಸಿದ್ದು,
ರಾಜ್ಯದ ಪ್ರತಿಷ್ಟಿತ ಟೆನ್ನಿಸ್ ಕ್ರಿಕೆಟ್ ತಂಡ M.B.C.C ಯ ಮಾಲೀಕರು ಹಾಗೂ ಕಮ್ಯೂನಿಟಿ ಸಮೂಹ ವಿದ್ಯಾಸಂಸ್ಥೆಗಳ ಕ್ರೀಡಾ ಸಂಘಟಕ ಹರೀಶ್.ಎಂ.ನಾಗರಾಜ್ ರವರ ಉಸ್ತುವಾರಿಯಲ್ಲಿ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.


‌‌‌‌‌ ಆರ್.ಕೆ.ಆಚಾರ್ಯ ಕೋಟ.

Exit mobile version