SportsKannada ಸ್ಪೋರ್ಟ್ಸ್ ಕನ್ನಡ

ಈವ್ನಿಂಗ್ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಆಶ್ರಯದಲ್ಲಿ ವಿದ್ವಾರ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್

ಈವ್ನಿಂಗ್ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಆಶ್ರಯದಲ್ಲಿ ವಿದ್ವಾರ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್

ಈವಿನಿಂಗ್ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಸಂಘದ ಆಶ್ರಯದಲ್ಲಿ ವಿದ್ವಾರ್ ಟ್ರೋಫಿ 2025 ನಾನ್‌ಸ್ಟೇಟ್ ಹಾಗೂ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಅಕ್ಟೋಬರ್ 25 ಮತ್ತು 26ರಂದು ನಡೆಯಲಿದೆ.

ಅಕ್ಟೋಬರ್ 25, ಶನಿವಾರದಂದು ನಾನ್‌ಸ್ಟೇಟ್ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು, ಪ್ರವೇಶ ಶುಲ್ಕ ರೂ.3000 ಆಗಿದೆ.

ಅಕ್ಟೋಬರ್ 26, ಭಾನುವಾರ ಆಹ್ವಾನಿತ ಆರು ತಂಡಗಳ ಲೀಗ್ ಪಂದ್ಯಾವಳಿ ನಡೆಯಲಿದ್ದು, ಪ್ರವೇಶ ಶುಲ್ಕ ರೂ.5000 ಎಂದು ಆಯೋಜಕರು ತಿಳಿಸಿದ್ದಾರೆ.

ವಿಜೇತರಿಗೆ ರೂ.30,000 ನಗದು ಬಹುಮಾನ ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ರೂ.20,000 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತದೆ. ಅಲ್ಲದೇ, ಅತ್ಯುತ್ತಮ ಬ್ಯಾಟ್ಸ್‌ಮನ್, ಬೆಸ್ಟ್ ಬೌಲರ್ ಮತ್ತು ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗಳನ್ನೂ ವಿತರಿಸಲಾಗುವುದು.

ಆಟಗಾರರ ನೋಂದಣಿ ಶುಲ್ಕ ರೂ.250 ನಿಗದಿಯಾಗಿದೆ. ಪಂದ್ಯಾವಳಿ ದೊಡ್ಡಣ್ಣಗುಡ್ಡೆ ಮೈದಾನದಲ್ಲಿ ನಡೆಯಲಿದ್ದು, 72 ಯಾರ್ಡ್ ಮೈದಾನ ಮತ್ತು ರಾಜ್ಯಮಟ್ಟದ ಅಂಪೈರ್‌ಗಳ ಸೇವೆ ಲಭ್ಯವಿರಲಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಂದ್ಯಾವಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು:

ರೋಹಿತ್ – 7975728548

ಪ್ರಶಾಂತ್ (ಪಚ್ಚು) – 7892595104

ಈ ಪಂದ್ಯಾವಳಿಯ ಲೈವ್ ಪ್ರಸಾರವನ್ನು “Sports Kannada” ಯೂಟ್ಯೂಬ್ ಚಾನೆಲ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.