SportsKannada | ಸ್ಪೋರ್ಟ್ಸ್ ಕನ್ನಡ

ತುಮಕೂರಿನಲ್ಲಿ ವಾಸು”ಪ್ರಕಾಶ”-ಫ್ರೆಂಡ್ಸ್ ಬೆಂಗಳೂರಿಗೆ ಋತುವಿನ 4 ನೇ ಚಾಂಪಿಯನ್ಸ್ ಪಟ್ಟ

ತುಮಕೂರು-ಚಕ್ರವರ್ತಿ ಗೆಳೆಯರ ಬಳಗ ತುಮಕೂರು ಇವರ ಆಶ್ರಯದಲ್ಲಿ,ತುಮಕೂರಿನ ಕ್ರೀಡಾಪಟು ಹಾಗೂ ಕ್ರೀಡಾ ಸಂಘಟಕ ಪ್ರಕಾಶ್ ಟಿ.ಸಿ ಸಾರಥ್ಯದಲ್ಲಿ,ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ರವರ ಸವಿನೆನಪಿಗಾಗಿ,ತುಮಕೂರಿನಲ್ಲಿ ಆಯೋಜಿಸಲಾದ 5 ನೇ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ರೋಚಕ ಫೈನಲ್ ನಲ್ಲಿ ಕೊನೆಯ ಎರಡು ಎಸೆತಗಳಲ್ಲಿ 7 ರನ್ ಅಗತ್ಯತೆಯ ಸಂಧರ್ಭದಲ್ಲಿ ಫ್ರೆಂಡ್ಸ್ ಬೆಂಗಳೂರಿನ‌ ಆಪತ್ಬಾಂಧವ ವಾಸು ಪ್ರಕಾಶ್ ಐದನೇ ಎಸೆತದಲ್ಲಿ ಸಿಕ್ಸರ್ ಸಿಡಿಸುವುದರ ಮೂಲಕ ಪಂದ್ಯ ಟೈ ನಲ್ಲಿ ಅಂತ್ಯಗೊಂಡಿತ್ತು.
ಸೂಪರ್ ಓವರ್ ನಲ್ಲಿ ಸಿಡಿದ ಸಾಗರ್ ಭಂಡಾರಿ ಮತ್ತು ನವೀನ್ ಎದುರಾಳಿಯ ಗೆಲುವಿನ‌ ಕನಸನ್ನು ಭಗ್ನಗೊಳಿಸಿದರು.ಈ ಮೂಲಕ ಫ್ರೆಂಡ್ಸ್ ಬೆಂಗಳೂರು 2022-23 ಋತುವಿನ 4 ನೇ ಚಾಂಪಿಯನ್ ಮತ್ತು 2 ಬಾರಿ ರನ್ನರ್ಸ್  ಗೌರವಕ್ಕೆ ಪಾತ್ರರಾದರು.
ಇದಕ್ಕೂ ಮುನ್ನ ಸೆಮಿಫೈನಲ್ ನಲ್ಲಿ ಫ್ರೆಂಡ್ಸ್ ಬೆಂಗಳೂರು-ಚಕ್ರವರ್ತಿ ತುಮಕೂರು ತಂಡವನ್ನು ಹಾಗೂ ನ್ಯಾಶ್ ಬೆಂಗಳೂರು-ಮೈಟಿ ಬೆಂಗಳೂರು ತಂಡವನ್ನು ಸೋಲಿಸಿ‌‌ ಫೈನಲ್ ಪ್ರವೇಶಿಸಿದ್ದರು.
ಚಾಂಪಿಯನ್ಸ್ ಫ್ರೆಂಡ್ಸ್ ಬೆಂಗಳೂರು 3 ಲಕ್ಷ ನಗದು ಮತ್ತು ದ್ವಿತೀಯ ಸ್ಥಾನಿ ನ್ಯಾಶ್ ಬೆಂಗಳೂರು 1.5 ಲಕ್ಷ ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆದುಕೊಂಡರು.
ಫೈನಲ್ ಹೀರೋ ವಾಸು ಪ್ರಕಾಶ್ ತಿಪಟೂರು ಪಂದ್ಯಶ್ರೇಷ್ಟ,ಟೂರ್ನಮೆಂಟ್ ನ ಬೆಸ್ಟ್ ಬ್ಯಾಟರ್ ಫ್ರೆಂಡ್ಸ್ ನ‌ ನವೀನ್ ರಾಕರ್ಸ್,ಬೆಸ್ಟ್ ಬೌಲರ್ ನ್ಯಾಶ್ ಪುರುಷಿ ಹಾಗೂ ಪಂದ್ಯಾಟದುದ್ದಕ್ಕೂ ಶ್ರೇಷ್ಠ ಆಲ್ರೌಂಡರ್ ಪ್ರದರ್ಶನ ನೀಡಿದ ಸಾಗರ್ ಭಂಡಾರಿ‌ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಮಾರೋಪ ಸಮಾರಂಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು,
ಕ್ರೀಡಾಪಟು ಮತ್ತು ಕ್ರೀಡಾಪ್ರೋತ್ಸಾಹಕರು,
ಪ್ರಥಮ‌ಪ್ರಶಸ್ತಿ ಪ್ರಾಯೋಜಕರಾದ ಶ್ರೀಯುತ ಪಿ.ಎನ್.ಕೃಷ್ಣಮೂರ್ತಿಯವರು ಬಹುಮಾನವನ್ನು ವಿತರಿಸಿದರು.ಕುಟುಂಬ ಸಮೇತರಾಗಿ ಆಗಮಿಸಿದ್ದ ಪಿ.ಎನ್.ಕೆ ಯವರು ಬೆಳಿಗ್ಗೆ 2.30 ಗಂಟೆಯ ವರೆಗೂ ಪಂದ್ಯಾಟದ ಸವಿಯನ್ನು ಸವಿದರು.ಈ ಸಂದರ್ಭ ತುಮಕೂರು ಗ್ರಾಮಾಂತರ ಶಾಸಕರಾದ ಗೌರಿಶಂಕರ್,ಧನಿಯ ಕುಮಾರ್,ಶ್ರೀಧರ್,
ಪ್ರೊ.ಕಿರಣ್,ಚಕ್ರವರ್ತಿ ಗೆಳೆಯರ ಬಳಗದ ನಾಯಕ ಪ್ರಕಾಶ್.ಟಿ‌.ಸಿ ಮತ್ತು ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವೀಕ್ಷಕ ವಿವರಣೆಯಲ್ಲಿ ರಾಜ್ಯಮಟ್ಟದ ವೀಕ್ಷಕ ವಿವರಣೆಕಾರರಾದ ರಾಘು ಮಟಪಾಡಿ ಮತ್ತು ಕುಣಿಗಲ್ ಮಂಜು ಸಹಕರಿಸಿದರು.
Exit mobile version