SportsKannada | ಸ್ಪೋರ್ಟ್ಸ್ ಕನ್ನಡ

ಕುಂದಾಪುರ-ವಕ್ವಾಡಿಯಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಪ್ರಸಾದ್ ನೇತ್ರಾಲಯ ಸೂಪರ್ ಸ್ಫೆಷಾಲಿಟಿ ಹಾಸ್ಪಿಟಲ್ ಉಡುಪಿ, ಫಾರ್ಚೂನ್ ಗ್ರೂಫ್ ಆಫ್ ಹೋಟೇಲ್ಸ್,ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಕಾರ್ಲ್ ಜೈಸ್ ಇಂಡಿಯಾ ಫ್ರೈವೆಟ್ ಲಿಮಿಟೆಡ್, ಅಲೋಕಾ ವಿಷನ್ ಪ್ರೋಗ್ರಾಂ ಇವರ ಜಂಟಿ ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವು ವಕ್ವಾಡಿ ಫಾರ್ಚೂನ್ ವಿಲೇಜ್ ಹೋಟೆಲ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಸಾಂಕೇತಿಕವಾಗಿ ಕನ್ನಡಕ ವಿತರಿಸಿ ಮಾತನಾಡಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಣ ಇದ್ದವರಲ್ಲಿ ದಾನ ಮಾಡುವ ಗುಣಗಳು ಕಮ್ಮಿ ಇರುವುದು ದೇಶದ ದೌರ್ಭಾಗ್ಯ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬಹಳಷ್ಟು ಹಣವಂತರಿದ್ದು ಅವರ ಪೈಕಿ ಒಂದಷ್ಟು ಮಂದಿಗಾದರೂ ಪ್ರವೀಣ್ ಶೆಟ್ಟಿಯವರಂತೆ ದಾನ ಮಾಡಿದರೆ ಆತ್ಮತ್ರಪ್ತಿ ಸಿಗುತ್ತದೆ ಎಂದರು.
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, “ಊರಿನಲ್ಲಿ ಯಾವುದೇ ರಾಜಕೀಯ ಮಾಡದೇ ಅಭಿವೃದ್ದಿಯಲ್ಲಿ ಒಗ್ಗೂಡಿ ಮುನ್ನೆಡೆಯೋಣ” ಎಂದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉಡುಪಿ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ. ಕೃಷ್ಣಪ್ರಸಾದ್, ಕಾಳಾವರ ಗ್ರಾ.ಪಂ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ , ಪ್ರವೀಣ್ ಕುಮಾರ್ ಶೆಟ್ಟಿ ಅವರ ತಂದೆ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ 464 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಮಿಕಾ‌ ಶೆಟ್ಟಿ ಪ್ರಾರ್ಥಿಸಿ, ಆರ್.ದಿನಕರ ಶೆಟ್ಟಿ ನಿರೂಪಿಸಿ, ವೇಣುಗೋಪಾಲ‌ ಹೆಗ್ಡೆ ಪ್ರಸ್ತಾವನೆಗೈದರು.
Exit mobile version