SportsKannada | ಸ್ಪೋರ್ಟ್ಸ್ ಕನ್ನಡ

ಯುನೈಟೆಡ್ ಕ್ರಿಕೆಟ್ ಲೀಗ್ ನಲ್ಲಿ ಕ್ಲಾಸಿಕ್ ಸಾಲ್ಮಾರ್ ಕಾರ್ಕಳಕ್ಕೆ ಭರ್ಜರಿ ಗೆಲುವು

ಮಂಗಳೂರು-ಅಂಡರ್ ಆರ್ಮ್ ಟೆನಿಸ್ ಬಾಲ್ ಕ್ರಿಕೆಟ್  ಮಂಗಳೂರು ಮತ್ತು ಕಾರ್ಕಳ ಆಟಗಾರರಿಗೆ ವಿಭಿನ್ನ ರೀತಿಯ ಸಂತೋಷವನ್ನು ನೀಡುತ್ತದೆ. ಇದು ತನ್ನ ಅರ್ಹ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಹೊಂದಿದೆ. ಋತುವಿನ GSB ಯ ಅತಿ ದೊಡ್ಡ ಅಂಡರ್ ಆರ್ಮ್ ಫ್ಲಡ್ ಲೈಟ್ ಕ್ರಿಕೆಟ್ ಪಂದ್ಯಾವಳಿಯನ್ನು ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿತ್ತು. ಈ ಪ್ರತಿಷ್ಠಿತ ಪಂದ್ಯಾಕೂಟದಲ್ಲಿ ಹತ್ತು  ಫ್ರ್ಯಾಂಚೈಸ್ ತಂಡಗಳು ಭಾಗವಹಿಸಿದ್ದವು. ಡೆಡ್ಲಿ ಪ್ಯಾಂಥರ್ಸ್ ವಿರುದ್ಧ ನಡೆದ ಫೈನಲ್ ಸೆಣಸಾಟದಲ್ಲಿ ಕ್ಲಾಸಿಕ್ ಸಾಲ್ಮಾರ್ ಕಾರ್ಕಳ 6 ವಿಕೆಟ್ ಗಳ ಭರ್ಜರಿ ಗೆಲುವು ಪಡೆದು ಪ್ರಶಸ್ತಿ ಗೆದ್ದಿದೆ.
ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಂಗಳೂರಿನ ಉರ್ವಾ ಮೈದಾನದ ಆವರಣದಲ್ಲಿ ಈ ಟೆನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವಾರಾಂತ್ಯವನ್ನು GSB ಕ್ರಿಕೆಟ್ ಅಭಿಮಾನಿಗಳು ಮಂಗಳೂರು ಉರ್ವಾ ಮೈದಾನದಲ್ಲಿ ಆನಂದಿಸಿದರು. V4 News ನಲ್ಲಿ ಟೂರ್ನಮೆಂಟ್ ನ ನೇರ ಪ್ರಸಾರ ಬಿತ್ತರಿಸಲಾಯಿತು.
ಕಾರ್ಕಳದ  ತಂಡ ‘ ಕ್ಲಾಸಿಕ್ ಸಾಲ್ಮಾರ್  ‘ ಪ್ರಥಮ ಬಹುಮಾನ ಐವತ್ತು  ಸಾವಿರದ ಏಳು ರೂ. ನಗದು ಹಾಗೂ ಟ್ರೋಫಿ ಗಳಿಸಿತು.   ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್  ತಂಡ ಎರಡನೇ ಬಹುಮಾನ ಮೂವತ್ತು ಸಾವಿರದ ಏಳು ರೂ. ಹಾಗೂ ಟ್ರೋಫಿ ಪಡೆಯಿತು. ಮೂರನೇ ಸ್ಥಾನ ಪಡೆದ ಜೈಕಾರ್ ಸ್ಟ್ರೈಕರ್ಸ್ ತಂಡಕ್ಕೆ  ಟ್ರೋಫಿ ವಿತರಿಸಲಾಯಿತು.
ಫೈನಲ್ ಪಂದ್ಯ ದ ಮ್ಯಾನ್ ಆಪ್ ದಿ ಮ್ಯಾಚ್ – ರಾಧಾ ಕೃಷ್ಣ ಕ್ಲಾಸಿಕ್ ಸಾಲ್ಮಾರ್ ಕಾರ್ಕಳ
ಮ್ಯಾನ್ಆಫ್ ದಿ ಸೀರೀಸ್:  ಮಹೇಶ್ ನಾಯಕ್  ಕ್ಲಾಸಿಕ್ ಸಾಲ್ಮಾರ್ ಕಾರ್ಕಳ
ಬೆಸ್ಟ್ ಬ್ಯಾಟರ್ – ಜೈಕಾರ್ ಸ್ಟ್ರೈಕರ್ಸ್ ತಂಡದ ಶಿವ ಪ್ರಸಾದ್
ಬೆಸ್ಟ್ ಬೌಲರ್ -ವರುಣ್ ಕಿಣಿ ಡೆಡ್ಲಿ ಪ್ಯಾಂಥರ್ಸ್
ಬೆಸ್ಟ್ ಫೀಲ್ಡರ್-ಕಾರ್ತಿಕ್ ಪ್ರಭು ಡೆಡ್ಲಿ ಪ್ಯಾಂಥರ್ಸ್
ಎಮರ್ಜಿಂಗ್ ಪ್ಲೇಯರ್-ಕ್ಲಾಸಿಕ್ ಸಾಲ್ಮಾರ್ ಕಾರ್ಕಳದ  ಪ್ರತೀಕ್ ಪ್ರಭು
ಮಂಗಳೂರಿನ ಗೋಪಿ ಭಟ್ರು ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರೂಪಣೆ ಮಾಡಿದರು.
ಅದ್ದೂರಿಯಾಗಿ ಪಂದ್ಯಾವಳಿ ಆಯೋಜಿಸಿ ಯಶಸ್ವಿಗೆ  ಕಾರಣರಾದ ಕೊಂಚಾಡಿ ನರಸಿಂಹ ಶೆಣೈ , ನಾಗೇಶ್,  ಕಾರ್ತಿಕ್ ಪ್ರಭು, ವಿವೇಕ್ ಹೆಗ್ಡೆ, ಸಂದೀಪ್ ಮತ್ತು ಎಲ್ಲಾ ಸನ್ಮಿತ್ರರಿಗೂ, ವಿಜೇತ ತಂಡಗಳಿಗೂ ಅಭಿನಂದನೆಗಳು.
ಶುಭ ಕೋರುವ,
ಸುರೇಶ ಭಟ್ ಮೂಲ್ಕಿ &
ಟೀಮ್ ಸ್ಪೋರ್ಟ್ಸ್ ಕನ್ನಡ
Exit mobile version