SportsKannada | ಸ್ಪೋರ್ಟ್ಸ್ ಕನ್ನಡ

ಶಿರ್ವ-ಹೆಚ್.ಜೆ‌.ಸಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಅಂಡರ್-18 ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ.

ಡಿ.29 ರಂದು ಶಿರ್ವ ಹಿಂದೂ ಜೂ. ಕಾಲೇಜಿನ ಕ್ರೀಡಾಂಗಣದಲ್ಲಿ ಹೆಚ್.ಜೆ.ಸಿ ಕ್ರಿಕೆಟ್ ಅಕಾಡೆಮಿ ಹಾಗೂ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ,
ಶಿರ್ವದ ಶಾಮ್ಸ್ ಸ್ಕ್ವೇರ್ ಹಾಗೂ ಕಿನ್ನಿಮೂಲ್ಕಿಯ ಆಲ್ ರಾಯನ್ ಸೈಕಲ್ಸ್ ಸಂಸ್ಥೆಯ ಸಹಯೋಗದೊಂದಿಗೆ ಡಿಸೆಂಬರ್ 29 ರಿಂದ ಜನವರಿ 5 ರ ವರೆಗೆ ನಡೆಯಲಿರುವ ಸೀಸನ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಪು ಪೋಲಿಸ್ ವೃತ್ತ ನಿರೀಕ್ಷಕರಾದ ಪ್ರಕಾಶ್ ರವರು ಮಾತನಾಡಿ
“ವ್ಯಾಯಾಮ ಮತ್ತು ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಗ್ರಾಮೀಣ ಪ್ರತಿಭೆಗಳು ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದರೆ ಸ್ಪೋರ್ಟ್ಸ್ ಕೋಟಾದಲ್ಲಿ ಸರಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ ಎಂದು ಹೇಳಿದರು.
ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ ಪಂದ್ಯಾಕೂಟಕ್ಕೆ ಶುಭಾಶಯ ತಿಳಿಸಿ ಮಾತನಾಡಿದರು.
ಈ ಸಂದರ್ಭ ಶಿರ್ವ ಶಾಮ್ಸ್ ಸ್ಕ್ವೇರ್ ನ ಸುಧೀರ್ ಶೆಟ್ಟಿ ಅಟ್ಟಿಂಜೆ,ಸಿಯೇಸ್ ಇಂಜಿನಿಯರಿಂಗ್ ಇಂಡಸ್ಟ್ರೀಸ್ ನ ಮಾರ್ಕೆಟಿಂಗ್ ಮುಖ್ಯಸ್ಥ ಎಸ್.ವೆಂಕಟೇಶಲು ಶೇಷ,ಕಿನ್ನಿಮೂಲ್ಕಿ ಆಲ್ ರಾಯನ್ ಬಯೋಸೈಕಲ್ಸ್ ಸಂಸ್ಥೆಯ ಮೊಹಮ್ಮದ್ ಆರಿಫ್,ಶಿರ್ವ ಹಿಂದೂ ಜೂ.ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ,ನಿವೃತ್ತ ಪ್ರಾಂಶುಪಾಲ ರಾಜ್ ಗೋಪಾಲ್,ಹಿಂದೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್,
ಎಂ.ಎಸ್.ಆರ್.ಎಸ್ ಕಾಲೇಜಿನ ಪ್ರಾಂಶುಪಾಲೆ ಡಾ.ನಯನಾ.ಎಂ.ಪಕ್ಕಳ,ಸಚ್ಚಿದಾನಂದ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಹೆಚ್.ಜೆ.ಸಿ ಮುಖ್ಯ ತರಬೇತುದಾರರಾದ ಸದಾನಂದ ಶಿರ್ವ ಸ್ವಾಗತಿಸಿದರು,ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,ತರಬೇತುದಾರ ರೆನ್ ಟ್ರೆವರ್ ಡಯಾಸ್ ವಂದಿಸಿದರು…
Exit mobile version