SportsKannada | ಸ್ಪೋರ್ಟ್ಸ್ ಕನ್ನಡ

ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್-ತಾಲ್ಲೂಕು ಮಟ್ಟದ ಪಂದ್ಯಾಟ ನಡೆಸುವ ಬಗ್ಗೆ ಸಾಮಾನ್ಯ ಸಭೆ

ಉಡುಪಿ ಜಿಲ್ಲೆಯ ಟೆನ್ನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಸಮಾನ‌ ಮನಸ್ಕ ಹಿರಿಯ ಆಟಗಾರರ ಒಗ್ಗೂಡುವಿಕೆಯಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ 4 ನೇ ಸಾಮಾನ್ಯಸಭೆ ಇಂದು (22-10-2021) ಶುಕ್ರವಾರ ಸಂಜೆ 5.30 ಗಂಟೆಗೆ ಕುಂಭಾಶಿ ಕೊರವಡಿಯ ಬೇ ನೆಸ್ಟ್ ಬೀಚ್ ಹೌಸ್ ನಲ್ಲಿ ನಡೆಯಲಿದೆ.

ಈಗಾಗಲೇ 7 ತಾಲೂಕುಗಳಲ್ಲಿ ಕುಂದಾಪುರ-223,
ಹೆಬ್ರಿ-67,ಕಾರ್ಕಳ-100,ಬೈಂದೂರು-79,
ಬ್ರಹ್ಮಾವರ-154,ಉಡುಪಿ-200,ಕಾಪು-285
ಒಟ್ಟು 1000 ಆಟಗಾರರು ನೊಂದಣಿ ಮಾಡಿರುತ್ತಾರೆ.

ಇಂದಿನ ಸಭೆಯಲ್ಲಿ ತಾಲ್ಲೂಕು ಮಟ್ಟದ ಪಂದ್ಯಾಕೂಟದ ಆಯೋಜನೆ ಮತ್ತು ದಿನಾಂಕ ನಿಗದಿ ಪಡಿಸುವ ಬಗ್ಗೆ,ಪಂದ್ಯಾಕೂಟದ ಜವಾಬ್ದಾರಿಯನ್ನು ತಾಲೂಕು ಉಸ್ತುವಾರಿಗಳಿಗೆ ವಹಿಸುವ ಹಾಗೂ ತಂಡಗಳನ್ನು ರಚಿಸುವ ಬಗೆ ಹಾಗೂ ಪಂದ್ಯಾಕೂಟವನ್ನು ನಡೆಸುವ ರೀತಿಯ ಬಗ್ಗೆ ಚರ್ಚಿಸಲಾಗುವುದು‌.

ಉಡುಪಿ ಜಿಲ್ಲಾ ಅಸೋಸಿಯೇಷನ್ ಅಧ್ಯಕ್ಷರಾದ ಟೊರ್ಪೆಡೋಸ್ ಗೌತಮ್ ಶೆಟ್ಟಿ ಇಂದಿನ ಸಾಮಾನ್ಯ ಸಭೆಗೆ ಹಿರಿಯ ಸದಸ್ಯರುಗಳನ್ನು ಕೂಡಿಕೊಂಡು ಸಭೆಯಲ್ಲಿ ಭಾಗವಹಿಸಿ,ಸೂಕ್ತ ಸಲಹೆ ನೀಡುವಂತೆ ತಿಳಿಸಿದ್ದಾರೆ.

Exit mobile version