SportsKannada | ಸ್ಪೋರ್ಟ್ಸ್ ಕನ್ನಡ

ತುಮಕೂರು-ಯುವರತ್ನ ಅಪ್ಪು ಸ್ಮರಣಾರ್ಥ-ತುಮಕೂರು ಚಾಂಪಿಯನ್ಸ್ ಲೀಗ್

ಮೂರು ದಶಕಗಳ ಹಿರಿಯ ಸಂಸ್ಥೆ ರಾಕ್ ಯೂತ್ ಕ್ಲಬ್ ತುಮಕೂರು ಇವರ ವತಿಯಿಂದ,ರಾಕ್ ರಾಜು,ರಾಕ್ ರವಿ,ಅಜ್ಜು,ಮುಜ್ಜು ಇವರೆಲ್ಲರ ಸಾರಥ್ಯದಲ್ಲಿ ಮೂರನೇ ಬಾರಿಗೆ ತುಮಕೂರು ಚಾಂಪಿಯನ್ಸ್ ಲೀಗ್-ಟಿ‌‌.ಸಿ.ಎಲ್-3 ಪಂದ್ಯಾವಳಿ ಆಯೋಜಿಸಲಾಗಿದೆ.
ಡಿಸೆಂಬರ್ 11 ಮತ್ತು 12 ಎರಡು ದಿನಗಳ ಕಾಲ ತುಮಕೂರಿನ ಸರಕಾರಿ ಹೈಸ್ಕೂಲ್ ಫೀಲ್ಡ್ ಮೈದಾನದಲ್ಲಿ,ಹೊಸದಾಗಿ ನಿರ್ಮಾಣಗೊಂಡ ಸಿಮೆಂಟ್ ಪಿಚ್ ನಲ್ಲಿ ಯಶಸ್ವಿ ಮೂರನೇ ಬಾರಿಗೆ ಲೀಗ್ ಕಮ್ ನಾಕೌಟ್ ಮಾದರಿಯ ತುಮಕೂರು ಚಾಂಪಿಯನ್ಸ್ ಲೀಗ್ ಈ ಪಂದ್ಯಾವಳಿ ಅಗಲಿದ ಚಿತ್ರನಟ,ಯುವರತ್ನ ಅಪ್ಪು ಸ್ಮರಣಾರ್ಥವಾಗಿ ಆಯೋಜಿಸಲಾಗಿದೆ.
ಪ್ರಥಮ ಪ್ರಶಸ್ತಿ ರೂಪದಲ್ಲಿ 1 ಲಕ್ಷ ನಗದು,ದ್ವಿತೀಯ ಪ್ರಶಸ್ತಿ 50 ಸಹಸ್ರ ನಗದಿನ ಸಹಿತ ಆಕರ್ಷಕ ಪಾರಿತೋಷಕಗಳನ್ನು ನೀಡಲಾಗುತ್ತಿದೆ.ರಾಜ್ಯದ ಪ್ರತಿಷ್ಠಿತ ತಂಡಗಳ ಪ್ರಸಿದ್ಧ ಆಟಗಾರರು ಐಕಾನ್ ರೂಪದಲ್ಲಿ 8 ತಂಡಗಳನ್ನು ಪ್ರತಿನಿಧಿಸಲಿದ್ದು,ಇತ್ತೀಚೆಗಷ್ಟೇ ನಡೆದ ಆಕ್ಷನ್ ಪ್ರಕ್ರಿಯೆಯಲ್ಲಿ 8 ತಂಡಗಳನ್ನಾಗಿ ವಿಭಾಗಿಸಲಾಗಿದ್ದು ತಂಡಗಳ ವಿವರ ಈ ಕೆಳಗಿನಂತಿದೆ.
1) ಕರ್ನಾಟಕ ರಾಕ್ಸ್
2) ಬೆಳಗುಂಬಾ ರಾಕ್ಸ್
3) ಚಕ್ರವರ್ತಿ
4)ಎಲ್.ಎಲ್.ಸಿ.ಸಿ‌
5)ಭಾರತ್ 11
6)ಆರ್.ಆರ್‌.ಫ್ರೆಂಡ್ಸ್ ಹೆಗ್ಗೆರೆ
7)ಶ್ರೀ ತುಮಕೂರು
8)ನಮೋ ಭಾರತ್
ವೀಕ್ಷಕ ವಿವರಣೆಕಾರರಾಗಿ ಶಿವನಾರಾಯಣ್ ಐತಾಳ್ ಕೋಟ ಹಾಗೂ ರಾಘು ಮಟಪಾಡಿ ಭಾಗವಹಿಸಲಿದ್ದು,
ಪಂದ್ಯಾವಳಿಯ ನೇರ ಪ್ರಸಾರವನ್ನು S.R.B ಯೂ ಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.
Exit mobile version