SportsKannada | ಸ್ಪೋರ್ಟ್ಸ್ ಕನ್ನಡ

ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-ರಶ್ಮಿ ಶೆಟ್ಟಿ ಸ್ಮರಣಾರ್ಥ-ಆಲ್ ಇಂಡಿಯಾ ಫಿಡೆ ರೇಟಿಂಗ್ ರಾಪಿಡ್ ಚೆಸ್ ಟೂರ್ನಮೆಂಟ್

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ತನ್ನ ಸುತ್ತಲಿನ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ಉದ್ದೇಶದಿಂದ ಆರಂಭವಾದ ಈ ಸಂಸ್ಥೆ ಕ್ರಿಕೆಟ್, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಕ್ಷೇತ್ರದಲ್ಲಿ ಅಕಾಡೆಮಿ ಸ್ಥಾಪಿಸಿದ ಮೊದಲ ಸಂಸ್ಥೆ ಎಂದರೂ ತಪ್ಪಾಗಲಾರದು.
ಸ್ಥಳೀಯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಯತಕಾಲಿಕ ಪಂದ್ಯಾವಳಿಗಳನ್ನು ನಡೆಸುತ್ತಿರುವ ಸಂಸ್ಥೆಯ  ಅನೇಕ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ. ಟೊರ್ಪೆಡೋಸ್ ಪ್ರೀಮಿಯರ್ ಲೀಗ್ – 2017, ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ನಡೆಸಿದ್ದು ಭಾರತ ಶ್ರೀಲಂಕಾ ಮತ್ತು ಕೊಲ್ಲಿ ರಾಷ್ಟ್ರಗಳ ತಂಡಗಳು ಭಾಗವಹಿಸಿದ್ದವು. ಅಲ್ಲದೆ ವಿಜೇತ ತಂಡಗಳಿಗೆ ರೂ 25 ಲಕ್ಷ ಮೊತ್ತ ನೀಡಲಾಗಿದೆ. ರಾಷ್ಟ್ರೀಯ ಮಟ್ಟದ ಕಾರ್ಪೊರೇಟ್ ಟಿ 20 ಬ್ಯಾಷ್ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆಸಿದೆ.ಮಕ್ಕಳನ್ನು ಪ್ರೇರೇಪಿಸಲು ಮತ್ತು ಸಕ್ರಿಯವಾಗಿ ಬದುಕುವ ಪ್ರಾಮುಖ್ಯತೆಯನ್ನು ಗೌರವಿಸುವ ಉದ್ದೇಶದಿಂದ ಸಂಸ್ಥೆ ನಡೆಸುತ್ತಿದೆ. ಆರೋಗ್ಯಕರ ಜೀವನ ಶೈಲಿ ಮತ್ತು ಸುತ್ತಮುತ್ತಲಿನ ಕ್ರೀಡೆಗಳನ್ನು ಉತ್ತೇಜಿಸುವ, ಗುರುತಿಸುವ, ಕ್ರೀಡಾ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಗೆ ಪ್ರತಿಷ್ಠಿತ ಪ್ರಶಸ್ತಿಗಳು ಒಲಿದಿದೆ.ಅಲ್ಲದೇ
ಈ ಸಂಸ್ಥೆಗೆ 2017 ರಲ್ಲಿ “ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.
ಯಾವುದೇ ಪಂದ್ಯಾವಳಿ ಹಮ್ಮಿಕೊಳ್ಳುವ ಮೊದಲು ಅದು ಚೆನ್ನಾಗಿ ಮೂಡಿ ಬರಬೇಕು ಅನ್ನುವ ಉದ್ದೇಶ ಇಟ್ಟುಕೊಂಡು ಇದೇ ಮೊತ್ತ ಮೊದಲ ಬಾರಿಗೆ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ  ಅಂತರರಾಷ್ಟ್ರೀಯ ಮಟ್ಟದ ರಶ್ಮಿ ಶೆಟ್ಟಿ ಸ್ಮಾರಕ “ಫಿಡೆ ರೇಟಿಂಗ್ ರ‌್ಯಾಪಿಡ್ ಚೆಸ್ ಟೂರ್ನ ಮೆಂಟ್ 2021 – ಮೊದಲ ಟೊರ್ಪೆಡೋಸ್ ಟ್ರೋಫಿ”
ಮೇ ತಿಂಗಳ 1 ಮತ್ತು 2 ರಂದು BAY NEST BEACH RESORT, KORVADY ಕುಂದಾಪುರ ಇಲ್ಲಿ ನಡೆಯಲಿದೆ.
ಅಂಕೋಲಾ ಮೂಲದ,ಮುಂಬಯಿಯ ಪ್ರಸಿದ್ಧ ಕ್ರೀಡಾ ವಿಶ್ಲೇಷಕ,ಕ್ವಿಜ್ ಮಾಸ್ಟರ್,Dgflick ಇನ್ಷೂರೆನ್ಸ್ ಸಾಫ್ಟ್ ವೇರ್ ಕಂಪೆನಿಯ ಮಾಲೀಕರಾದ ರಂಜನ್ ನಗರ್ಕಟ್ಟೆ ಇವರ ಪ್ರಮುಖ ಪ್ರಾಯೋಜಕತ್ವದಲ್ಲಿ,ಮೇ 2019 ರಲ್ಲಿ ನಿಧನರಾದ ತಾಯಿ ದಿ‌‌.ರಶ್ಮಿ ಶೆಟ್ಟಿ ಸ್ಮರಣಾರ್ಥ ಈ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ.
ರಂಜನ್ ನಗರ್ಕಟ್ಟೆ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಸಂಸ್ಥಾಪಕಾಧ್ಯಕ್ಷ ಗೌತಮ್ ಶೆಟ್ಟಿಯವರ ಅತ್ಯಂತ ಆಪ್ತ ಸ್ನೇಹಿತರಾಗಿದ್ದು,ನಾನಾ ವಿಧದ ಕ್ರೀಡೆಯ ಬಗ್ಗೆ ಆಳವಾದ ಜ್ಞಾನವುಳ್ಳವರು.ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ನಿರಂತರ ಚಟುವಟಿಕೆಗಳಲ್ಲಿ ರಂಜನ್ ನಗರ್ಕಟ್ಟೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು,ಗೌತಮ್ ಶೆಟ್ಟಿಯವರ ಕಾರ್ಯವೈಖರಿ ಬಗ್ಗೆ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮೇ 1 ರಂದು ಬೆಳಗ್ಗೆ 9 ಗಂಟೆಗೆ ಸರಿಯಾಗಿ ನಡೆಯಲಿದೆ.
ಪಂದ್ಯದ ಮೊದಲ ಸುತ್ತಿನ ಆಟ ಬೆಳಿಗ್ಗೆ 10.30 ಕ್ಕೆ ಸರಿಯಾಗಿ ನಡೆಯಲಿದೆ.
ಮುಕ್ತವಾಗಿ ನಡೆಯುವ ಈ ಪಂದ್ಯದಲ್ಲಿ ವಿಜೇತರಿಗೆ
ಮೊದಲ ಬಹುಮಾನ ರೂ. 30,000 ಮತ್ತು ಫಲಕ
ದ್ವಿತೀಯ ಬಹುಮಾನ :ರೂ. 20,000 ಮತ್ತು ಫಲಕ
ತೃತೀಯ ಬಹುಮಾನ :ರೂ. 10,000 ಮತ್ತು ಫಲಕ.
ಅಲ್ಲದೆ 25 ನೇ ಸ್ಥಾನದವರೆಗೆ ಆಡಿದ ಆಟಗಾರರಿಗೆ ಬಹುಮಾನದ ಮೊತ್ತ ನೀಡಲಾಗುವುದು.
7,9,11,13 ಮತ್ತು 15 ವರ್ಷ ವಯಸ್ಸಿನ ಹುಡುಗ ಮತ್ತು ಹುಡುಗಿಯರಿಗೆ ಪ್ರತಿಯೊಂದು ವಿಭಾಗದಲ್ಲಿ ಮೊದಲ ಹತ್ತು ಫಲಕವನ್ನು ನೀಡಲಾಗುವುದು.
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯುತ್ತಮ ಮೊದಲ ಹತ್ತು ಆಟಗಾರರಿಗೆ ಮೊದಲ ಬಹುಮಾನ ರೂ. 2000 ಮತ್ತು ಫಲಕ
ದ್ವಿತೀಯ ರೂ. 1500 ಮತ್ತು ಫಲಕ ತೃತೀಯ ರೂ. 1000 ಮತ್ತು ಫಲಕ ಅಲ್ಲದೆ 4 ರಿಂದ 10 ರವರೆಗೆ ಸ್ಥಾನ ಪಡೆದ ಆಟಗಾರರಿಗೆ ಫಲಕ ನೀಡಲಾಗುವುದು.
60 ವರ್ಷ ವಯಸ್ಸಿಗಿಂತ ಮೇಲಿನ ಅನುಭವಿ ಆಟಗಾರರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ  ಬಹುಮಾನ ಮತ್ತು ಫಲಕ ಅಲ್ಲದೆ ಅತಿ ಕಿರಿಯ ಆಟಗಾರರಿಗೆ ಪ್ರಥಮ ಮತ್ತು ದ್ವಿತೀಯ ಫಲಕ ನೀಡಿ ಗೌರವಿಸಲಾಗುವುದು.
Unrated ಆಟಗಾರರಿಗೆ ಮೊದಲ ಐದು ಬಹುಮಾನ ಮತ್ತು ಫಲಕ ನೀಡಲಾಗುವುದು.
ಪ್ರವೇಶ ಶುಲ್ಕ ರೂ 1000
ಶುಲ್ಕ ಪಾವತಿಸುವ ಬ್ಯಾಂಕ್ ಖಾತೆ ಹೆಸರು :MISS TORPEDOES SPORTS CLUB
ಬ್ಯಾಂಕ್ ಹೆಸರು : UNION BANK
ಖಾತೆ ಸಂಖ್ಯೆ :520101037879810
IFSC CODE: UBINO901776
MICR CODE : 575026044
ಆನ್‌ಲೈನ್ ನ ಮೂಲಕ ನೊಂದಾಯಿಸಲು ವಿಳಾಸ :
www.udupichessassociation.com
ಪಂದ್ಯದ ರೆಗ್ಯುಲೇಶನ್ ಹೀಗಿದೆ
1. ಯಾವುದೇ ರೀತಿಯ GM&IM ಮತ್ತು ವಸತಿ ಸೌಲಭ್ಯವನ್ನು ನೀಡಲಾಗುವುದಿಲ್ಲ.
2. ಕುಂದಾಪುರದ ಶಾಸ್ತ್ರಿ ವೃತ್ತದಿಂದ ಆಟಗಾರರಿಗೆ ಆಟದ ಸ್ಥಳದ ವರೆಗೆ ಕರೆತರುವ ವ್ಯವಸ್ಥೆ ಮಾಡಲಾಗಿದೆ.
3. ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿದೆ
4. ತೀರ್ಪುಗಾರರ ತೀರ್ಪು ಅಂತಿಮ. ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ದಂಡ ವಿದಿಸಲಾಗುವುದು.
5. ಯಾವುದೇ ಕ್ಷಣದಲ್ಲಿ ಕೂಡ ಆಟದಿಂದ ಹಿಂದೆ ಸರಿಯಬಹುದು
6. ಐದು ಜನರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಆ ವ್ಯಕ್ತಿಯು ಯಾರ ಪರ ಮತ್ತು ವಿರೋಧ ಧ್ವನಿ ಎತ್ತುವ ಹಾಗಿಲ್ಲ. ಅಂತಹ ವ್ಯಕ್ತಿಯನ್ನು ಸಮಿತಿಯಿಂದ ಕೂಡಲೇ ಹಿಂತೆಗೆಯಲಾಗುವುದು.
7. ನೋಂದಣಿ ಶುಲ್ಕ ಖಡ್ಡಾಯವಾಗಿ ಪಾವತಿಸಬೇಕು .
8. ಎಲ್ಲ ಆಟಗಾರರು ಜನನ ಪ್ರಮಾಣ ಪತ್ರ  ತರಬೇಕು
9. ಒಂದಕ್ಕಿಂತ ಹೆಚ್ಚು ಬಹುಮಾನಗಳಿಗೆ ಅರ್ಹತೆ ಪಡೆದ ಆಟಗಾರರನ್ನು ಹೆಚ್ಚಿನ ಬಹುಮಾನಕ್ಕೆ ಪರಿಗಣಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ :ಗೌತಮ್ ಶೆಟ್ಟಿ :9845121498
ಬಾಬು ಪೂಜಾರಿ : 9448547958
ಸೌಂದರ್ಯ ಯು.ಕೆ : 9731230323
ಈ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮನ್ನು ಪ್ರೀತಿಯಿಂದ ಬರಮಾಡಿಕೊಳ್ಳುವವರು
ಗೌತಮ್ ಶೆಟ್ಟಿ ಅಧ್ಯಕ್ಷರು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್
ಮತ್ತು ಡಾ. ರಾಜಗೋಪಾಲ್ ಶೆಣೈ
ಅಧ್ಯಕ್ಷರು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್.
Exit mobile version