SportsKannada | ಸ್ಪೋರ್ಟ್ಸ್ ಕನ್ನಡ

ಭರ್ಜರಿ ಯಶಸ್ಸಿನೊಂದಿಗೆ ಮುಕ್ತಾಯಗೊಂಡ ಟೊರ್ಪೆಡೋಸ್ ಮುಕ್ತ ಅಂತರ್ಜಾಲ ಚೆಸ್ ಪಂದ್ಯಾಟ

ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್(ರಿ) ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ (ರಿ)ಉಡುಪಿ ಇದರ ಸಹಯೋಗದೊಂದಿಗೆ
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ)ಕುಂದಾಪುರ ಮುಕ್ತ ಅಂತರ್ಜಾಲ ಚೆಸ್ ಪಂದ್ಯಾಟವು  ದಿನಾಂಕ 03-10-2021 ಆದಿತ್ಯವಾರದಂದು www.tornelo.com ಎಂಬ ಪ್ಲಾಟ್ಫಾರ್ಮ್ ಮುಖೇನ  ನಡೆಯಿತು.
         ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಉಡುಪಿ ಚೆಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಡಾ.ರಾಜಗೋಪಾಲ್ ಶೆಟ್ಟಿ ಮಾತನಾಡಿ “ಬೌದ್ಧಿಕ ಹಾಗೂ ಶಾರೀರಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಚೆಸ್ ಇಂದು ಆನ್ಲೈನ್ ಮುಖೇನ ಸ್ಪರ್ಧೆಗಳನ್ನು ಆಯೋಜಿಸಿ ಹೊಸ ಭಾಷ್ಯವನ್ನು ಬರೆದಿದೆ. ಪ್ರಶಸ್ತಿಗಳ ಹಿಂದೆ ಹೋಗದೆ ಸ್ಪರ್ಧಾ ಮನೋಭಾವವನ್ನು
ರೂಢಿಸಿಕೊಳ್ಳಿ”ಎಂದರು. ಚೆಸ್ ಪಂದ್ಯಾಟದ ಮುಖ್ಯ ತೀರ್ಪುಗಾರರಾದ ವಸಂತ್ ಬಿ.ಎಚ್ ಮಾತಾನಾಡಿ “ಆನ್ಲೈನ್ ಮುಖೇನ  ಸ್ಪರ್ಧೆಯನ್ನು ಹಮ್ಮಿಕೊಂಡು ತಾಲೂಕು , ಜಿಲ್ಲೆಗಷ್ಟೇ ಸೀಮಿತವಾಗಿರಿಸದೆ ಎಲ್ಲಾ ಯುವ ಕ್ರೀಡಾ ಪ್ರತಿಭೆಗಳಿಗೂ ಅವಕಾಶವನ್ನಿತ್ತು ಪ್ರೋತ್ಸಾಹಿಸುವ ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ  ಕೆಲಸ ಕಾರ್ಯಗಳು ನಿಜಕ್ಕೂ ಪ್ರಶಂಸನೀಯ “ಎಂದರು.ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾಗಿರುವ ಗೌತಮ್ ಶೆಟ್ಟಿ,  ಗಣ್ಯರು, ಸ್ಪರ್ಧಿಗಳು ಹಾಗೂ ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
      ಸಭಾ ಕಾರ್ಯಕ್ರಮದ ಬಳಿಕ ನಡೆದ ಚೆಸ್ ಪಂದ್ಯಾವಳಿ ಒಟ್ಟು ಒಂಭತ್ತು ಸುತ್ತು ಗಳಲ್ಲಿ ನಡೆಯಿತು. ಗ್ರಾಂಡ್ ಮಾಸ್ಟರ್ ಆರ್ .ಆರ್ ಲಕ್ಷ್ಮಣ್ , ಅಂತಾರಾಷ್ಟ್ರೀಯ ಮಾಸ್ಟರ್ ಪಿ. ಡಿ. ಎಸ್  ಗಿರಿನಾಥ್, ತಮಿಳುನಾಡಿನ ಹರಿಕೃಷ್ಣನ್.ಎ ಹಾಗೂ ಹಲವಾರು ರಾಜ್ಯ, ರಾಷ್ಟ್ರ ಮಟ್ಟದ ಚೆಸ್ ಆಟಗಾರರು  ಸೇರಿದಂತೆ ಭಾರತದ ಎಲ್ಲೆಡೆಯಿಂದ ಒಟ್ಟು 150ಕ್ಕೂ  ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಸ್ಪರ್ಧೆಗೆ ಮೆರುಗು ತಂದು ಸ್ಪರ್ಧೆಯ ಭರ್ಜರಿ ಯಶಸ್ಸಿಗೆ ಕಾರಣರಾದರು.ಅಂತರ್ಜಾಲ ಮುಖೇನ ಸ್ಪರ್ಧೆಯನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನಡೆಸಿದ ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಶ್ರಮಕ್ಕೆ ವ್ಯಾಪಕ ಪ್ರಶಂಸೆಯೂ  ದೊರೆತಿದೆ.
Exit mobile version