
ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ – ಶಟಲ್ ಬ್ಯಾಡ್ಮಿಂಟನ್ ಕ್ರೀಡಾಭಿಮಾನಿಗಳಿಗೆ ಹಬ್ಬದ ಸಂಭ್ರಮ
ಕ್ರೀಡಾಭಿಮಾನಿಗಳಿಗೆ ಹೊಸ ಅನುಭವ ನೀಡಲು ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (Feather Shuttles) ಭರ್ಜರಿ ಸಿದ್ಧತೆ ನಡೆಸಿದೆ. ಈ ಪ್ರತಿಷ್ಠಿತ ಟೂರ್ನಮೆಂಟ್ ಅಕ್ಟೋಬರ್ 11ರಂದು ಅಜ್ಜರಕಾಡು ಇನ್ ಡೋರ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಸ್ಪರ್ಧೆಯನ್ನು ಇನ್ನಷ್ಟು ರೋಚಕಗೊಳಿಸಲು, ಈ ಬಾರಿ 12 ಫ್ರಾಂಚೈಸಿಗಳೊಂದಿಗೆ ಐಕಾನ್ ಪ್ಲೇಯರ್ ಆಯ್ಕೆಯ ಅವಕಾಶ ಕಲ್ಪಿಸಲಾಗಿದೆ. ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಆಟಗಾರರು ಮಾತ್ರ ಭಾಗವಹಿಸಲು ಅರ್ಹರಾಗಿದ್ದಾರೆ.
ಭಾಗವಹಿಸುವ 12 ಫ್ರಾಂಚೈಸಿಗಳು
1-ರ‌್ಯಾಕೆಟ್ ರೇಂಜರ್ಸ್
2-ಬಿಗ್ ಬೀಟರ್ಸ್ ಅಂಬಲಪಾಡಿ
3-ನ್ಯಾಷನಲ್ ಸ್ಮ್ಯಾಷರ್ಸ್ ತೀರ್ಥಹಳ್ಳಿ
4-ಮತ್ಸ್ಯರಾಜ್ ಗ್ರೂಪ್ ಮಲ್ಪೆ
5-ಕೋಸ್ಟಲ್ ನೈಲ್
6-ಕೋಸ್ಟಲ್ ಸ್ಟಾರ್ಸ್ ಸುರತ್ಕಲ್
7-ಮಾಲ್ಸಿ ಸ್ಟ್ರೈಕರ್ಸ್
8-ಡ್ಯಾರಿಂಗ್ ಜಾಗ್ವರ್ಸ್
9-ಗ್ಯಾಲಕ್ಸಿ ಸ್ಪೋರ್ಟ್ಸ್
10-ಮಟ್ಟು ಅಸೋಷಿಯೇಟ್ಸ್
11-ರಾಯ್ ರಾಕರ್ಸ್
12-ಫೆದರ್ ಫೈಟರ್ಸ್
ಸ್ಪರ್ಧಾ ವಿಭಾಗಗಳು:
ಓಪನ್ ಮೆನ್ಸ್
ಓಪನ್ ವುಮೆನ್ಸ್
30+ ಮೆನ್ಸ್
40+ ಮೆನ್ಸ್
50+ ಮೆನ್ಸ್
ಕ್ಯಾಶ್ ಪ್ರೈಜ್:
ವಿನ್ನರ್ಸ್ – ರೂ. 2 ಲಕ್ಷ
ರನ್ನರ್ಸ್ – ರೂ. 1 ಲಕ್ಷ
ಸ್ಥಳ:
ಅಜ್ಜರಕಾಡು ಇಂಡೋರ್ ಸ್ಟೇಡಿಯಂ (Udupi)
ಪ್ರೇಕ್ಷಕರ ಉತ್ಸಾಹವನ್ನು ಹೆಚ್ಚಿಸಲು ಈ ಟೂರ್ನಮೆಂಟ್ ಅನ್ನು ಸ್ಪೋರ್ಟ್ಸ್ ಕನ್ನಡ ಲೈವ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.
ನೊಂದಣಿ ವಿವರಗಳು:
ನೊಂದಣಿಗೆ QR ಕೋಡ್ ಅಥವಾ GPay / PhonePe ಮೂಲಕ ಪಾವತಿ ಮಾಡಬಹುದು. ಸಂಪರ್ಕ ಸಂಖ್ಯೆ: 9731737199
ಟೂರ್ನಮೆಂಟ್ ಅಧ್ಯಕ್ಷ ಗೌತಮ್ ಶೆಟ್ಟಿ ಅವರು, “ಈ ಟೂರ್ನಮೆಂಟ್ ಮೂಲಕ ಜಿಲ್ಲೆಯ ಪ್ರತಿಭಾನ್ವಿತ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಲು ವೇದಿಕೆ ಸಿಗಲಿದೆ. ಉತ್ತಮ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸಲು ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ” ಎಂದು ತಿಳಿಸಿದ್ದಾರೆ.
ಈ ಪಂದ್ಯಾವಳಿಯಿಂದ ಜಿಲ್ಲೆಯ ಬ್ಯಾಡ್ಮಿಂಟನ್ ಮಟ್ಟವನ್ನು ಇನ್ನಷ್ಟು ಮೇಲಕ್ಕೆತ್ತುವ ನಿರೀಕ್ಷೆ ವ್ಯಕ್ತವಾಗಿದೆ. ಕ್ರೀಡಾಭಿಮಾನಿಗಳು ತಪ್ಪದೆ ಹಾಜರಾಗುವಂತೆ ಆಯೋಜಕರು ಆಹ್ವಾನಿಸಿದ್ದಾರೆ.
