SportsKannada | ಸ್ಪೋರ್ಟ್ಸ್ ಕನ್ನಡ

ಇಂದು ವೆಸ್ಟ್ ಇಂಡೀಸ್ ಮತ್ತು ಭಾರತ ನಡುವೆ ಮೊದಲ ಟಿ20

ಇಂಗ್ಲೆಂಡ್‌ನಲ್ಲಿ ನಡೆದ 2019ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಸೋತ ಬಳಿಕ ಭಾರತ ತಂಡ ತನ್ನ ಮೊದಲ ಪ್ರವಾಸ ಆರಂಭಿಸಿದೆ. ಈಗಾಗಲೇ ವೆಸ್ಟ್ ಇಂಡೀಸ್ ತಲುಪಿರುವ ತಂಡ ನಾಳೆ ವಿಂಡೀಸ್ ವಿರುದ್ದ ಮೊದಲ ಟಿ20 ಪಂದ್ಯವನ್ನಾಡಲಿದೆ.

ಹಲವು ಯುವ ಪ್ರತಿಭೆಗಳನ್ನು ಒಳಗೊಂಡಿರುವ ತಂಡ ಟಿ20,ಏಕದಿನ ಮತ್ತು ಟೆಸ್ಟ್ ಗಳನ್ನು ಗೆದ್ದು ವಿಶ್ವಕಪ್ ಸೋಲನ್ನು ಮರೆಯಲು ತಂಡ ಪ್ರಯತ್ನಿಸಬೇಕಾಗಿದೆ.ಭಾರತ ಪರ ರೋಹಿತ್ ಶರ್ಮಾ ರಾಹುಲ್ ಮತ್ತು ಧವನ್ ಬ್ಯಾಟಿಂಗ್ ನಲ್ಲಿ ಉತ್ತಮ ಲಯದಲ್ಲಿದ್ದಾರೆ ಹಾಗೆ ಬೌಲಿಂಗ್ ನಲ್ಲಿ ಅನುಭವಿ ಭುವಿ ಹಾಗೂ ಖಲೀಲ್ ಅಹಮ್ಮದ್ ಪ್ರಬಲ ಅಸ್ತ್ರ ಆಗಿದ್ದಾರೆ.

ವೆಸ್ಟ್ ಇಂಡೀಸ್ ಕೂಡ ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಭಾರತ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಮರಳಿ ಲಯಕ್ಕೆ ಹಿಂತಿರುಗಬೇಕಾದ ಅವಶ್ಯಕತೆ ಇದೆ.ವಿಂಡೀಸ್ ಪರ ಪೋಲಾರ್ಡ್,ನರೈನ್, ಆಂಡ್ರೆ ರಸೈಲ್ ಮತ್ತು ಕಿಮೋ ಪೌಲ್ ಉತ್ತಮ ಫಾರ್ಮ ನಲ್ಲಿದ್ದು ವೆಸ್ಟ್ ಇಂಡೀಸ್ ಕೂಡ ಉತ್ತಮ ಫಾರ್ಮನಲ್ಲಿದೆ. ವಿಂಡೀಸ್ ಪ್ರವಾಸದಲ್ಲಿರುವ ಭಾರತ 3 ಟಿ20 ಪಂದ್ಯಗಳು, 3 ಏಕದಿನ ಪಂದ್ಯಗಳು ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಟಿ-20 ಪಂದ್ಯಕ್ಕೆ ಟೀಂ ಇಂಡಿಯಾ: ವಿರಾಟ್ ಕೊಹ್ಲಿ ( ನಾಯಕ ) ರೋಹಿತ್ ಶರ್ಮಾ ( ಉಪನಾಯಕ) ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ಸ್ ಅಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್ ( ವಿಕೆಟ್ ಕೀಪರ್ ) ಕೃನಾಲ್ ಪಾಂಡೆ, ಜಡೇಜಾ, ವಾಷಿಂಗ್ಟನ್ ಸುಂದರ್, ರಾಹುಲ್ ಚಾಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಾಹರ್, ನವದೀಪ್ ಸೈನಿ.

ಲೇಖನೆ : ಪ್ರೀತಮ್ ಹೆಬ್ಬಾರ್

Exit mobile version