
ಅರಬ್ಬರ ನಾಡಿನಲ್ಲಿ ಕುಂದಗನ್ನಡಿಗರ ಸಮಾಗಮ
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಯುಎಇ ನಲ್ಲಿ ನೆಲೆಸಿರುವ ಕುಂದಗನ್ನಡಿಗರಿಗಾಗಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ದೆಗಳು ಭಾನುವಾರ ದುಬಾಯಿನ ಜಬಿಲ್ ಪಾರ್ಕ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಅರಬ್ಬ ನಾಡಿನಲ್ಲಿ ನೆಲೆಸಿರುವ ಕುಂದಗನ್ನಡಿಗರು ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಮಾಡಿದ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಶ್ರೀ ಸದಾನ್ ದಾಸ್ ಉಪಾಧ್ಯಕ್ಷರಾದ ಶ್ರೀ ದಿನೇಶ್ ದೇವಾಡಿಗ ಮತ್ತು ಸುಜೀತ್ ಶೆಟ್ಟಿ ಕಾಳವಾರ ಕಾರ್ಯದರ್ಶಿಯಾದ ಶ್ರೀ ಸುಧಾಕರ ಪೂಜಾರಿ ಪಡುಕೋಣೆ , ಸದಸ್ಯರುಗಳಾದ ಶ್ರೀವಾಸು ಕುಮಾರ್ ಶೆಟ್ಟಿ , ಶ್ರೀ ಮಂಜುನಾಥ ದೇವಾಡಿಗ, ಶ್ರೀಸತೀಶ್ ಹಂಗಳೂರು , ಮನೋಜ್ ದೇವಾಡಿಗ , ಶ್ರೀಚಂದ್ರಶೇಖರ ಕೋಡಿ , ವಿಘ್ನೇಶ್ ಕುಂದಾಪುರ ಮತ್ತು ಶ್ರೀಮತಿ ಆಶಾ ಜೊತೆಗಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಸುರೇಶ್ ಡಿ ಹೆಚ್ ಎಲ್ ಮತ್ತು ಬಿ.ಎಂ ಗ್ರೂಫ್ ಚೇರ್ಮೇನ್ ಡಾ.ಕನಕರಾಜ್ ಶ್ರೀಪ್ರವೀಣ್ ಆಚಾರ್ , ಸಮರ್ಥ್ ಶೆಟ್ಟಿ ಉಪಸ್ಥಿತ ಇದ್ದರು.
ಬೆಳಿಗ್ಗೆಯಿಂದ ಸಂಜೆತನಕ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಕುಂದಾಪ್ರಕನ್ನಡಿಗರು ಬಳಹ ಉತ್ಸುಕರಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ತಂದರು.
ಕಾರ್ಯಕ್ರಮವನ್ನು ನಿರ್ವಹಣೆ ಮತ್ತು ನಿರೂಪಣೆಯನ್ನು ಸಂಘದ ಸದಸ್ಯರಾದ ವಿಘ್ನೇಶ್ ಕುಂದಾಪುರ ಮಾಡಿದರು.
