SportsKannada | ಸ್ಪೋರ್ಟ್ಸ್ ಕನ್ನಡ

ಟೊರ್ಪೆಡೋಸ್-ಚಕ್ರವರ್ತಿ ಕುಂದಾಪುರ ಜಂಟಿ ಆಶ್ರಯದಲ್ಲಿ ಅಂತರ್ ಶಾಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್.

 

ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ದಶಕಗಳ ಕಾಲ ಪಾರುಪತ್ಯ ಮೆರೆದ ಕುಂದಾಪುರದ 2
ತಂಡಗಳು ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕುಂದಾಪುರ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್
ಕುಂದಾಪುರ(ಹಳೆಯಂಗಡಿ).

70 ರ ದಶಕದಲ್ಲಿ ಸ್ಥಾಪನೆಯಾದ ಚಕ್ರವರ್ತಿ ಕುಂದಾಪುರ ಇನ್ನೆರಡು ವರ್ಷಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಿದೆ.ಸಮರ್ಥ ನಾಯಕ‌ ಶ್ರೀಪಾದ ಉಪಾಧ್ಯಾಯ ರ ದಕ್ಷ ಸಾರಥ್ಯದಲ್ಲಿ ರಾಜ್ಯಾದ್ಯಂತ ಹಲವಾರು ಪ್ರತಿಷ್ಟಿತ ಟ್ರೋಫಿಗಳನ್ನು ಜಯಿಸಿ ಕುಂದಾಪುರ ಪರಿಸರದ ಅನೇಕ ಯುವ ಪ್ರತಿಭೆಗಳನ್ನು ರಾಜ್ಯಕ್ಕೆಪರಿಚಯಿಸಿದ್ದು, ಅಂತೆಯೇ ಟೊರ್ಪೆಡೋಸ್ ಕುಂದಾಪುರ ತಂಡವೂ ಗೌತಮ್ ಶೆಟ್ಟಿ ಯವರ ಸಾರಥ್ಯದಲ್ಲಿ ಅನೇಕ‌ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಚಕ್ರವರ್ತಿ ಕ್ರಿಕೆಟ್ ಕ್ಲಬ್ ಲೆದರ್ ಬಾಲ್ ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸಿದ್ದು ಶಿಸ್ತಿನ ಆಟಗಾರರಾದ ಪ್ರದೀಪ್ ವಾಜ್ ಪ್ರಮುಖ ಕೋಚ್ ಆಗಿ‌ ಕಾರ್ಯ ನಿರ್ವಹಿಸುತ್ತಿದ್ದು,ಟೊರ್ಪೆಡೋಸ್ ಕ್ರಿಕೆಟ್ ಕೋಚಿಂಗ್ ಅಕಾಡೆಮಿಯಲ್ಲಿ ಪಡುಬಿದ್ರಿ ಫ್ರೆಂಡ್ಸ್ ನ ನಿತಿನ್ ಮೂಲ್ಕಿ ಕೋಚಿಂಗ್ ನೀಡುತ್ತಿದ್ದು ಜೊತೆಯಾಗಿ ಕಪ್ತಾನರು,ಟೊರ್ಪೆಡೋಸ್ ಕ್ಲಬ್ ಸಂಸ್ಥಾಪಕಾಧ್ಯಕ್ಷರಾದ ಗೌತಮ್ ಶೆಟ್ಟಿಯವರು ಕೂಡ ಕ್ರಿಕೆಟ್ ಜೊತೆಗೆ ವಿವಿಧ ಕ್ರೀಡಾ ತರಬೇತಿಯನ್ನು ನೀಡುತ್ತಿದ್ದಾರೆ.

ಈ ಬಾರಿ ಬೇಸಿಗೆ ರಜೆಯ ಸಂದರ್ಭ ಏಪ್ರಿಲ್ 13,14 ರಂದು ಈ ಎರಡು ಪ್ರತಿಷ್ಟಿತ ತಂಡಗಳು ಜಂಟಿಯಾಗಿ ಅಂತರ್ ಶಾಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದಾರೆ.ಕುಂದಾಪುರದ ಗಾಂಧಿಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು ವಿಜೇತ ತಂಡಗಳು ಹಾಗೂ ಸೆಮಿಫೈನಲ್ ಪ್ರವೇಶಿಸಿದ ತಂಡಗಳು ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.

1-1-2003 ನಂತರ ಜನಿಸಿದ ಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.ಪ್ರತಿ ಪಂದ್ಯವು 10 ಓವರ್ ನದ್ದಾಗಿರುತ್ತದೆ.ಆಸಕ್ತ ತಂಡಗಳು  ಎಪ್ರಿಲ್ 10 ರ ಒಳಗೆ ಮೇಲ್ಕಾಣಿಸಿದ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ.

Exit mobile version