SportsKannada | ಸ್ಪೋರ್ಟ್ಸ್ ಕನ್ನಡ

ಕುಂದಾಪುರ-ಊರಿನ ಪ್ರತಿಭೆಗಳಿಗೆ ಟಿ.ಸಿ.ಎ ಅವಕಾಶ ಕಲ್ಪಿಸಿದೆ- ಜಿ.ಎಮ್.ಗೊಂಡಾ

“ಕ್ರೀಡೆಯಲ್ಲಿ ವಿಧೇಯತೆ,ಕ್ರೀಡಾಸ್ಪೂರ್ತಿ,ಸಮಯ ಪರಿಪಾಲನೆಗೆ ಮಹತ್ವ ನೀಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ‌.ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಊರಿನ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದೆ” ಎಂದು ಕುಂದಾಪುರ ಬಿ.ಸಿ‌.ಸಿ ಪಿ.ಯು ಕಾಲೇಜಿನ  ಪ್ರಾಂಶುಪಾಲರಾದ ಜಿ.ಎಮ್.ಗೊಂಡಾ ಹೇಳಿದರು.
ಇವರು ಶನಿವಾರ ಬೆಳಿಗ್ಗೆ ಇಲ್ಲಿನ ಗಾಂಧಿಮೈದಾನದಲ್ಲಿ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯುತ್ತಿರುವ 3 ನೇ ದಿನದ ಕುಂದಾಪುರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕ ಭಾಷಣಗೈದ ಟಿ.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ “ಯುವ ಆಟಗಾರರು ತಮ್ಮೂರಿನ ತಂಡವನ್ನೇ ಪ್ರತಿನಿಧಿಸಬೇಕು,ರಾಜ್ಯ ಮಟ್ಟದಲ್ಲಿ ಉಡುಪಿ ಜಿಲ್ಲೆಯ ಹೆಚ್ಚಿನ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ.ಈ ಎಲ್ಲಾ ವಿಚಾರಗಳನ್ನು ಮನಗಂಡು ಟಿ‌.ಸಿ.ಎ ಉಡುಪಿ ಜಿಲ್ಲೆಯ ಸುಮಾರು 1000 ಕ್ಕೂ ಹೆಚ್ಚಿನ ಆಟಗಾರರಿಗೆ ಅವಕಾಶ ಕಲ್ಪಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಟಿ.ಸಿ.ಎ ಪದಾಧಿಕಾರಿಗಳಾದ ರಮೇಶ್ ಕುಂದರ್ ” ಟಿ‌‌.ಸಿ.ಎ  ಅಳಿವಿನಂಚಿನಲ್ಲಿರುವ ಟೆನಿಸ್ಬಾಲ್ ಕ್ರಿಕೆಟ್ ಗೆ ಪುನರುಜ್ಜೀವನ ಕಲ್ಪಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.
ಯುವ ಆಟಗಾರರು ಟಿ‌.ಸಿ.ಎ ಯೋಜನೆಗೆ ಸಂಪೂರ್ಣ ಬೆಂಬಲ ನೀಡಿ ಯಶಸ್ವಿಗೊಳಿಸಬೇಕೆಂದರು.”
ಇಂದು ಬೆಳಿಗ್ಗೆ ಮುಖ್ಯ ಅತಿಥಿಗಳಾಗಿ ಕುಂದಾಪುರ ಬಿಸಿಸಿ ಪಿ.ಯು ಕಾಲೇಜಿನ ಪ್ರಾಂಶುಪಾಲ ಜಿ.ಎಮ್.ಗೊಂಡಾ,ಟಿ‌ಸಿ‌ಎ ನಿರ್ದೇಶಕರಾದ ಯಾದವ್ ನಾಯಕ್ ಕೆಮ್ಮಣ್ಣು, ಸಿದ್ಧಿವಿನಾಯಕ ಹಾರ್ಡ್ ವೇರ್ ನ ಸಂಪತ್ ಕುಮಾರ್ ಶೆಟ್ಟಿ,ಟಿ.ಸಿ.ಎ ಉಪಾಧ್ಯಕ್ಷರಾದ ಸತೀಶ್ ಕೋಟ್ಯಾನ್, ನಾರಾಯಣ್ ಶೆಟ್ಟಿ ಕೋಟೇಶ್ವರ,ಟಿಸಿಎ ನಿರ್ದೇಶಕರಾದ ದಿನೇಶ್ ಗಾಣಿಗ ಬೈಂದೂರು,ಸುರೇಶ್ ಆಚಾರ್ ಕುಂದಾಪುರ,ರಮೇಶ್ ಕುಂದರ್ ಕೋಟ,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ರಂಜಿತ್ ಶೆಟ್ಟಿ,
ಪಂದ್ಯಾಟದ ಆಯೋಜಕರಾದ ಕೆ.ಪಿ ಸತೀಶ್,ಮನೋಜ್ ನಾಯರ್ ಉಪಸ್ಥಿತರಿದ್ದರು.
*ಕ್ವಾಟರ್ ಫೈನಲ್ ಪ್ರವೇಶಿಸಿದ ತಂಡಗಳು*
 ಶುಕ್ರವಾರ ಬಲಿಷ್ಠ ತಂಡಗಳ ರೋಚಕ ಹೋರಾಟಗಳ ಬಳಿಕ ಜಾನ್ಸನ್ ಕುಂದಾಪುರ, ಜೆ.ಸಿ.ಸಿ ಜಾಲಾಡಿ,ಅಂಶು ಕೋಟೇಶ್ವರ ಮತ್ತು ಮಹಾದೇವಿ ಮಲ್ಯಾಡಿ ತಂಡಗಳ ಕ್ವಾರ್ಟರ್ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದೆ.
M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳುತ್ತಿದ್ದು,ವೀಕ್ಷಕ ವಿವರಣೆಕಾರರಾಗಿ ಅಜಯ್ ರಾಜ್ ಮಂಗಳೂರು, ನಾಸಿರ್ ಕೋಟೇಶ್ವರ, ನಿತೀಶ್ ಕೋಟೇಶ್ವರ ಭಾಗವಹಿಸಿದ್ದರು.
Exit mobile version