Site icon SportsKannada ಸ್ಪೋರ್ಟ್ಸ್ ಕನ್ನಡ

ಟಿ.ಎ ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ತಂಡಕ್ಕೆ ಟಿ.ಸಿ.ಎ ಜ್ಯೂನಿಯರ್ ಅಕಾಡೆಮಿ ಶೀಲ್ಡ್

ಟಿ.ಎ ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ತಂಡಕ್ಕೆ ಟಿ.ಸಿ.ಎ ಜ್ಯೂನಿಯರ್ ಅಕಾಡೆಮಿ ಶೀಲ್ಡ್

ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್(ಟಿ.ಸಿ.ಎ) ವತಿಯಿಂದ ಸತತ ಐದು ದಿನಗಳ ಕಾಲ ಉಡುಪಿ ದ.ಕ ಅಂತರ ಶಾಲಾ ಮತ್ತು ಅಂತರ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟ ಜರುಗಿತು.

ಪಂದ್ಯಾಟದಲ್ಲಿ ಒಟ್ಟು 38 ಶಾಲಾ,ಕಾಲೇಜಿನ ತಂಡಗಳು ಭಾಗವಹಿಸಿದ್ದು ಅಂತಿಮವಾಗಿ ಟಿ.ಎ.ಪೈ ಆಂಗ್ಲಮಾಧ್ಯಮ ಹೈಸ್ಕೂಲ್ ಉಡುಪಿ ಶಾಲಾ ತಂಡ-ಡಾ.ಎನ್.ಎಸ್.ಎ.ಎಮ್ ಆಂಗ್ಲ ಮಾಧ್ಯಮ ಶಾಲಾ ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿ ಪಡೆಯಿತು.

ತೃತೀಯ ಬಹುಮಾನ ಎಸ್.ವಿ.ಆಂಗ್ಲಮಾಧ್ಯಮ ಶಾಲೆ ಗಂಗೊಳ್ಳಿ ಹಾಗೂ ಶ್ರೀ ಶಾರದಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಸ್ರೂರು ಪಡೆದುಕೊಂಡರು.

ಫೈನಲ್ ಪಂದ್ಯಶ್ರೇಷ್ಟ ಟಿ.ಎ ಪೈ ಸಾರ್ಥಕ್,ಬೆಸ್ಟ್ ಬ್ಯಾಟರ್ ಜೀವನ್ ಡಾ.ಎನ್.ಎಸ್.ಎ.ಎಮ್ ನಿಟ್ಟೆ,ಬೆಸ್ಟ್ ಬೌಲರ್ ಸಹಾದ್ ಟಿ‌.ಎ ಪೈ ಮತ್ತು ಸರಣಿಶ್ರೇಷ್ಟ ಪ್ರಶಸ್ತಿಯನ್ನು ವರ್ಷಿತ್ ಡಾ.ಎನ್.ಎಸ್.ಎಮ್.ನಿಟ್ಟೆ ಪಡೆದುಕೊಂಡರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಯುವಜನ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ “ಸೋಲನ್ನು ಅವಲೋಕಿಸಿದಾಗ ಗೆಲುವಿನತ್ತ ಹೆಜ್ಜೆ ಇಡಲು ಸಾಧ್ಯ” ಎಂದರು.

ಆಸ್ಟ್ರೇಲಿಯಾ ರೈಸಿಂಗ್ ರೂಸ್ ಅಕಾಡೆಮಿಯ ಸುಧೀರ್ ನಾಯಕ್ ಮಾತನಾಡಿ ಸೋಲಾಗಲಿ ಗೆಲುವಾಗಲಿ ಮೈದಾನದಲ್ಲಿ,ಆಟದಲ್ಲಿ ನಿಮ್ಮ‌ ಒಳಗೊಳ್ಳುವಿಕೆ ಜೀವನದಲ್ಲಿ‌ ನಿಮ್ಮನ್ನು ಯಶಸ್ಸಿನತ್ತ ಮುನ್ನಡೆಸುತ್ತದೆ” ಎಂದರು.

ಟಿ‌.ಸಿ.ಎ ಉಡುಪಿ ಅಧ್ಯಕ್ಷ ಗೌತಮ್ ಶೆಟ್ಟಿ ಮಾತನಾಡಿ “ಬೀಳದೆ ಜೀವನದಲ್ಲಿ ಏಳಲು ಸಾಧ್ಯವಿಲ್ಲ,ಸೋತರೆ ಮಾತ್ರ ಗೆಲುವಿನ ನಿಜವಾದ ಸವಿ ಸವಿಯಬಹುದು.ಕ್ರೀಡೆ ಯುವಕರನ್ನು ಉತ್ತಮ‌ ಪ್ರಜೆಯನ್ನಾಗಿ ಮಾಡುತ್ತದೆ” ಎಂದರು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಉದ್ಯಮಿ ಸಂದೀಪ್ ಶೆಟ್ಟಿ,ಹಿರಿಯ ಆಟಗಾರರು ಹಾಗೂ ಟಿ.ಸಿ.ಎ ಉಡುಪಿ ಪದಾಧಿಕಾರಿಗಳಾದ ಮನೋಜ್ ನಾಯರ್,ನಾರಾಯಣ ಶೆಟ್ಟಿ,ನಾಗೇಶ್ ನಾವಡ,ಶ್ರೀಶ ಹೊಳ್ಳ,ದೇಹದಾರ್ಢ್ಯ ಪಟು ಶ್ರೀನಿವಾಸ ಆನಗಳ್ಳಿ,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್ ಇನ್ನಿತರರು ಉಪಸ್ಥಿತರಿದ್ದರು.

ಕೆ.ಪಿ‌.ಸತೀಶ್ ಕಾರ್ಯಕ್ರಮ ನಿರೂಪಿಸಿದರು.ಸತತ ಐದು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾಟದ ನೇರ ಪ್ರಸಾರ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಂಡಿತು.

Exit mobile version