SportsKannada | ಸ್ಪೋರ್ಟ್ಸ್ ಕನ್ನಡ

ಎರಡು ಬಾರಿ ವಿಶ್ವ ಚಾಂಪಿಯನ್ ಆದ ವಿಂಡೀಸ್ ತಂಡವನ್ನು ಬಗ್ಗು ಬಡಿದು T20 ವಿಶ್ವಕಪ್‌ನಿಂದ ಹೊರದಬ್ಬಿದ ಐರ್ಲೆಂಡ್‌‌ ಸೂಪರ್ 12 ಹಂತಕ್ಕೆ ತಲುಪಿದೆ..!

ಆಸ್ಟ್ರೇಲಿಯಾದ ಹೋಬಾರ್ಟ್‌ನ ಬೆಲ್ಲೆರಿವ್ ಓವಲ್ ನ  ಅಂಗಳದಲ್ಲಿ ನಡೆದ ಐರ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಐರ್ಲೆಂಡ್ ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆಸೂಪರ್ 12 ಹಂತವನ್ನು ತಲುಪಿದೆ.
ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ಆಗಿ ಮೆರೆದಿದ್ದ ವೆಸ್ಟ್ ಇಂಡೀಸ್ ವಿಶ್ವಕಪ್‌ ಟೂರ್ನಿಯಿಂದಲೆ ಹೊರಬಿದ್ದಿದೆ.ವೆಸ್ಟ್ ಇಂಡೀಸ್ ನೀಡಿದ್ದ 147 ರನ್‌ಗಳ ಗುರಿಯನ್ನು ಐರ್ಲೆಂಡ್ ತಂಡ ಬೆನ್ನತ್ತುವಲ್ಲಿ ಯಶಸ್ವಿಯಾಗಿದ್ದು ಪಾಲ್ ಸ್ಟಿರ್ಲಿಂಗ್ ಅಜೇಯ ಆಟಕ್ಕೆ ವೀಂಡೀಸ್ ನ ವಿಶ್ವಕಪ್ ಗೆಲ್ಲುವ ಕನಸು ನುಚ್ಚು ನೂರಾಗಿದೆ.
ಪಾಲ್ ಸ್ಟಿರ್ಲಿಂಗ್ ಅವರ ಅಜೇಯ ಅರ್ಧಶತಕದ ಮನಮೋಹಕ ಆಟ ಐರ್ಲೆಂಡ್‌ಗೆ ಸುಲಭವಾಗಿ ಗೆಲುವಿನ ನಗೆ ಬಿರುವಂತೆ ಮಾಡಿದೆ…!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಐರ್ಲೆಂಡ್‌ ಗೆಲುವಿಗೆ 147ರನ್ ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ವಿಂಡೀಸ್ ನ ಧೈತ್ಯ ಬೌಲರ್ ಗಳ ಬೆವರಿಳಿಸಿ ಉತ್ತಮ ಆಟದೊಂದಿಗೆ  ಬೆನತ್ತಿದ ಐರ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿ ಆಯಿತು ಸ್ಟಾರ್ ಬ್ಯಾಟರ್ ಪಾಲ್ ಸ್ಟಿರ್ಲಿಂಗ್ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ  ಭರ್ಜರಿ ಆಟವಾಡುವ ಮೂಲಕ ತಂಡದ ಗೆಲುವಿಗೆ ಬುನಾದಿ ಹಾಕಿದರು
ತಂಡದ ನಾಯಕ ಆಂಡ್ರ್ಯೂ ಬಾಲ್ಬಿರ್ನಿ 23 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 3 ಭರ್ಜರಿ ಬೌಂಡರಿ ಸಿಡಿಸುವ ಮೂಲಕ 37ರನ್ ಸಿಡಿಸಿ  ಮೊದಲ ವಿಕೆಟ್‌ಗೆ ಈ ಜೋಡಿ 73ರನ್ ಗಳನ್ನು ಕಲೆಹಾಕಿ ಗೆಲುವಿನ ಗುರಿಯನ್ನು ಸುಲಭ ಮಾಡಿಕೊಟ್ಟರು ನಾಯಕ ಬಾಲ್ಬಿರ್ನಿ ಔಟಾದ ಬಳಿಕ ಪಾಲ್‌ ಸ್ಟಿರ್ಲಿಂಗ್‌ಗೆ ಉತ್ತಮ ಸಾಥ್ ನೀಡಿದ ಲೋರ್ಕನ್ ಟಕ್ಕರ್ 35 ಎಸೆತಗಳಲ್ಲಿ ಅಜೇಯ 45 ರನ್ ಕಲೆಹಾಕುವ ಮೂಲಕ ಮಿಂಚಿದರು. ಇವರ ಇನ್ನಿಂಗ್ಸ್‌ನಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್ ಒಳಗೊಂಡಿತ್ತು.
ಇನ್ನೂ ತಂಡದ ಪರ ನಿರ್ಣಾಯಕ ಪಂದ್ಯದ ಹೀರೋ ಆಗಿ ಮಿಂಚಿದ್ದು ಓಪನರ್ ಪಾಲ್ ಸ್ಟಿರ್ಲಿಂಗ್ ಪಂದ್ಯದ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ತಂಡವನ್ನು ನಿರಾಯಾಸವಾಗಿ ಗೆಲುವಿನ ದಡ ಸೆರಿಸುವಲ್ಲಿ ಯಶಸ್ವಿಯಾದರು. 48 ಎಸೆತಗಳಲ್ಲಿ ಅಜೇಯ ಆರವತ್ತಾರು ರನ್ ಕಲೆಹಾಕಿದ ಪಾಲ್ ಆರು ಬೌಂಡರಿ ಮತ್ತು ಮನಮೋಹಕವಾದ  ಎರಡು ಸಿಕ್ಸರ್ ಸಿಡಿಸುವ ಮೂಲಕ ವಿಂಡೀಸ್ ಬೌಲರ್ ಗಳನ್ನು ಮನಬಂದಂತೆ ಚಚ್ಚಿ ಅಬ್ಬರಿಸಿದರು. ತಂಡದ  ಪ್ರಮುಖ ಮೂವರು ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಮನಮೋಹಕ  ಆಟದಿಂದಾಗಿ ಐರ್ಲೆಂಡ್ 17.3 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 150ರನ್ ಕಲೆಹಾಕಿ ಪಂದ್ಯವನ್ನ ಜಯಿಸುವುದರೊಂದಿಗೆ ಎರಡುಬಾರಿ ಚಾಂಪಿಯನ್ ಆದಂತಹ ವಿಂಡೀಸ್ ತಂಡವನ್ನು ಟೂರ್ನಿಯಿಂದಲೆ ಹೊರದಬ್ಬಿದೆ…!
*ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಸೋಲಿನ ಸುಳಿಗೆ ಸಿಲುಕಿದ  ವೆಸ್ಟ್‌ ಇಂಡೀಸ್*
ಇನ್ನೂ ಪ್ರಮುಖವಾಗಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿತು ಉತ್ತಮ ಆರಂಭ ಪಡೆಯುವಲ್ಲಿ ಎಡವಿ ಆಮೆಗತಿಯಲ್ಲಿ ಬ್ಯಾಟಿಂಗ್ ಮಾಡಿದ ವಿಂಡೀಸ್ ಅಲ್ಪ ಮೊತ್ತ ಕಲೆಹಾಕಿ ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣವಾಗಿತ್ತು.
ವಿಂಡೀಸ್ ನ ಸೋಲಿಗೆ ಕಾರಣವಾಗಿದ್ದು ಮೊದಲಿಗೆ ಆರಂಭಿಕ ಆಟಗಾರನಾಗಿ ಇಳಿದ ಕೈಲ್ ಮೇಯರ್ಸ್ ಕೇವಲ 1ರನ್‌ಗೆ ವಿಕೆಟ್ ಕಳೆದುಕೊಂಡರು ಜಾನ್ಸನ್ ಚಾರ್ಲ್ಸ್ ಕೇವಲ 24ರನ್‌ ಗೆ ಇನ್ನಿಂಗ್ಸ್ ಮುಗಿಸಿದ್ರು. ಎವಿನ್ ಲಿವಿಸ್ ಆಟವು 13ರನ್‌ಗೆ ಕೊನೆಗೊಂಡಿತು. ನಾಯಕ ನಿಕೋಲಸ್ ಪೂರನ್ 11 ಎಸೆತಗಳಲ್ಲಿ 13ರನ್ ಕಲೆಹಾಕಿ ಕೆಟ್ಟ ಆಟದೊಂದಿಗೆ ವಿಂಡೀಸ್ ಪಾಲಿಗೆ ಖಳನಾಯಕನಾಗಿ  ವಿಕೆಟ್ ಒಪ್ಪಿಸುವ ಈ ಮೂಲಕ ಪ್ರಮುಖ ಆಟಗಾರರೆ ವಿಂಡೀಸ್‌ಗೆ ಆಘಾತವನ್ನುಂಟುಮಾಡಿದರು
ಆದರೆ ತಂಡದ ಪರ ಏಕಾಂಗಿ ಹೋರಾಟ ಪ್ರದರ್ಶಿಸಿದ ಬ್ರಾಂಡನ್ ಕಿಂಗ್ 48 ಎಸೆತಗಳಲ್ಲಿ 62ರನ್‌ ಕಲೆಹಾಕಿ ಗೌರವಮೊತ್ತ ತಲುಪುವಂತೆ ಮಾಡಿದರು ಇವರನ್ನು ಬಿಟ್ಟರೆ  ಬೇರೆ ಯಾವೊಬ್ಬ ಬ್ಯಾಟರ್ ಕೂಡ ತಂಡಕ್ಕೆ ನೆರವಾಗಲಿಲ್ಲ. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 146ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು ವಿಂಡೀಸ್. ತಂಡದಲ್ಲಿ
ಸ್ಫೋಟಕ ಆಟಗಾರರನ್ನ ಒಳಗೊಂಡಿದ್ದ ವೆಸ್ಟ್‌ ಇಂಡೀಸ್‌ ಇಷ್ಟು ಕಳಪೆ ಪ್ರದರ್ಶನ ನೀಡಿದರ ಪರಿಣಾಮವೇ ಸೋಲಿನ ಕಹಿ ಉಣ್ಣುವಂತಾಯಿತು.
ಶ್ರೇಷ್ಠ ಬೌಲರ್ ಗಳನ್ನು ಹೊಂದಿದ್ದರು ವಿಂಡೀಸ್ ಬೌಲರ್‌ಗಳು ವಿಕೆಟ್ ಪಡೆಯುವಲ್ಲಿ ಹೆಣಗಾಡಿದ್ದಾರು. ಈ ಮೂಲಕ ಎರಡುಬಾರಿ ವಿಶ್ವ ಚಾಂಪಿಯನ್ ಆಗಿದ್ದ ವಿಂಡೀಸ್ ತಂಡ ವಿಶ್ವಕಪ್ ಚಾಂಪಿಯನ್‌ ಸೂಪರ್ 12 ಹಂತಕ್ಕೂ ತಲುಪದೆ ತವರಿಗೆ ಹಿಂದಿರುಗಬೇಕಾಗಿದ್ದು ಮಾತ್ರ ದುರಂತವೆ ಹೌದು…!?
Exit mobile version