Site icon SportsKannada ಸ್ಪೋರ್ಟ್ಸ್ ಕನ್ನಡ

ಯಶಸ್ವಿಯಾಗಿ ನಡೆದ ಆಭರಣ CCL ಸೀಸನ್ 4 – ಶ್ರೀ ಲಕ್ಷ್ಮೀ ವೆಂಕಟ್ರಮಣ ಟ್ರೋಫಿ 2026 ಹರಾಜು ಪ್ರಕ್ರಿಯೆ

ಯಶಸ್ವಿಯಾಗಿ ನಡೆದ ಆಭರಣ CCL ಸೀಸನ್ 4 – ಶ್ರೀ ಲಕ್ಷ್ಮೀ ವೆಂಕಟ್ರಮಣ ಟ್ರೋಫಿ 2026 ಹರಾಜು ಪ್ರಕ್ರಿಯೆ

ವಿಜಯ ಕ್ರಿಕೆಟರ್ಸ್ ಸಾಲಿಗ್ರಾಮ ಅವರ ಆಶ್ರಯದಲ್ಲಿ ಆಯೋಜಿಸಲಾದ ಆಭರಣ CCL ಸೀಸನ್ 4 – ಶ್ರೀ ಲಕ್ಷ್ಮೀ ವೆಂಕಟ್ರಮಣ ಟ್ರೋಫಿ 2026 ಗೆ ಕಳೆದ ವಾರ ಅಧಿಕೃತವಾಗಿ ಚಾಲನೆ ದೊರಕಿದ್ದು, ಪಂದ್ಯಾವಳಿಗೆ ಮುನ್ನುಡಿಯಾಗಿ ಶನಿವಾರ ಆಟಗಾರರ ಹರಾಜು (Auction) ಕಾರ್ಯಕ್ರಮವು ಭರ್ಜರಿಯಾಗಿ ನಡೆಯಿತು.  ಚೇಂಪಿಯ  ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಸುಕ್ರತೀಂದ್ರ ಕಲಾ ಮಂದಿರದಲ್ಲಿ ಆಕ್ಷನ್ ಪ್ರಕ್ರಿಯೆ ನಡೆಯಿತು.

ಸುಧೀರ್ ಭಟ್ ಚೇಂಪಿ ಅವರಿಂದ ಪ್ರಾರ್ಥನೆ ನೆರವೇರಿದ ಬಳಿಕ ದೀಪ ಪ್ರಜ್ವಲನೆಯ ಮೂಲಕ ಆಕ್ಷನ್ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ವೇದಮೂರ್ತಿ ಶ್ರೀಕಾಂತ್ ರಂಗನಾಥ್ ಭಟ್ ಚೇಂಪಿ, ಆಡಳಿತ ಮೋಕ್ತೇಸರ ದಿನಕರ್ ಭಗವಂತ್ ಶೆಣೈ ಕುಂದಾಪುರ, ಜಿಎಸ್‌ಬಿ ಸಂಘದ ಅಧ್ಯಕ್ಷ ಗೋವಿಂದರಾಯ ಶಾನಭಾಗ್ ಸಾಲಿಗ್ರಾಮ, ವಿಜಯ್ ಕ್ರಿಕೆಟರ್ಸ್‌ನ ಅಜಯ್ ಶಾನಭಾಗ್ ಹಾಗೂ ಹರೀಶ್ ರಾಧಾಕೃಷ್ಣ ನಾಯಕ್ ಸಾಲಿಗ್ರಾಮ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ವೆಂಕಟೇಶ್ ಭಟ್ ಚೇಂಪಿ ಅವರು ಸಮರ್ಥವಾಗಿ ನಿರ್ವಹಿಸಿದರು.

ಈ ಸೀಸನ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿದ್ದು, ಪ್ರತಿಯೊಂದು ತಂಡವೂ ಅನುಭವೀ ಮಾಲೀಕರು, ಸಹ ಮಾಲೀಕರು ಹಾಗೂ ಪ್ರತಿಷ್ಠಿತ ಐಕಾನ್ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ.

ಭಾಗವಹಿಸುವ ತಂಡಗಳು ಮತ್ತು ಪ್ರಮುಖರು:

ಆಥರ್ವ ಕಿಂಗ್ಸ್ ಧ್ವಜಪುರ
ಮಾಲೀಕ: ಗಣೇಶ್ ನಾಯಕ್
ಸಹ ಮಾಲೀಕ: ವಿಶ್ವನಾಥ ಶಾನಭೋಗ್
ಐಕಾನ್ ಆಟಗಾರ: ಸಂದೀಪ್ ಪೈ

ಭಜರಂಗಿ ಫ್ರೆಂಡ್ಸ್ ಸಾಲಿಗ್ರಾಮ
ಮಾಲೀಕ: ಸುಧೀರ್ ಕಾಮತ್
ಸಹ ಮಾಲೀಕ: ಸುಧೀರ್ ನಾಯಕ್
ಐಕಾನ್ ಆಟಗಾರ: ಪುಂಡಲೀಕ್ ಪೈ

ಡೆಡ್ಲಿ ಪ್ಯಾಂಥರ್ಸ್
ಮಾಲೀಕ: ಅವ್ನೀತ್ ಮಲ್ಯ
ಸಹ ಮಾಲೀಕ: ಅನಂತ್ ಭಟ್
ಐಕಾನ್ ಆಟಗಾರ: ಗೌತಮ್ ಪೈ

ಫ್ರೆಂಡ್ಸ್ ಹರಿಖಂಡಿಗೆ
ಮಾಲೀಕ: ವಿಹಾನ್ ನಾಯಕ್
ಐಕಾನ್ ಆಟಗಾರ: ಶರತ್ ಪ್ರಭು

ಜಿಎಸ್‌ಬಿ ಫ್ರೆಂಡ್ಸ್ ಕೋಟ
ಮಾಲೀಕ: ನಾಗರಾಜ್ ಪ್ರಭು
ಐಕಾನ್ ಆಟಗಾರ: ವಿವೇಕ್ ನಾಯಕ್

ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್, ಮಣಿಪಾಲ
ಮಾಲೀಕರು: ರಘುವೀರ ಶೆಣೈ, ದಿನೇಶ್ ಶೆಣೈ, ರಮೇಶ್ ಶೆಣೈ
ಐಕಾನ್ ಆಟಗಾರ: ಅಶ್ವಿನ್ ಕಾಮತ್

ಕೊಂಕಣ್ ಎಕ್ಸ್‌ಪ್ರೆಸ್ ಕೋಟೇಶ್ವರ
ಮಾಲೀಕ: ಅನಂತ್ ಪೈ
ಸಹ ಮಾಲೀಕ: ಸತೀಶ್ ಕಾಮತ್
ಐಕಾನ್ ಆಟಗಾರ: ವಿಘ್ನೇಶ್ ಭಟ್

ಟೆರ್ರಾ ಸ್ಪೋರ್ಟ್ಸ್ ಕ್ಲಬ್ ಚೆಂಪಿ
ಮಾಲೀಕರು: ಪ್ರಕಾಶ್ ಭಟ್, ಚಂದ್ರಕಾಂತ್ ಭಟ್
ಐಕಾನ್ ಆಟಗಾರ: ಪ್ರಣವ್ ಭಟ್

ಟಿವಿಎನ್‌’ಸ್ ಸ್ಕ್ವಾಡ್ ಜಿಎಸ್‌ಬಿ ತೆಕ್ಕಟ್ಟೆ
ಮಾಲೀಕ: ಸುಧೀಂದ್ರ ನಾಯಕ್
ನಾಯಕ (Captain): ದೀಪಕ್ ಬೆಳ್ಮಣ್ 

ವೀರಾಂಜನೇಯ ಕ್ರಿಕೆಟರ್ಸ್ ಕಾಪು
ಮಾಲೀಕ: ವೇದವ್ಯಾಸ ಕಾಮತ್
ಸಹ ಮಾಲೀಕ: ವಿನಾಯಕ ನಾಯಕ್
ಐಕಾನ್ ಆಟಗಾರ: ಕೌಶಿಕ್ ಶೆಣೈ

ಮಲ್ಪೆ ಯುನೈಟೆಡ್
ಮಾಲೀಕ: ಸುಬ್ರಹ್ಮಣ್ಯ ಭಂಡಾರ್ಕರ್
ಸಹ ಮಾಲೀಕರು: ಪವನ್ ಕಿಣಿ, ಜಯಂತ್ ನಾಯಕ್
ಐಕಾನ್ ಆಟಗಾರ: ಸುನಿಲ್ ಶೆಣೈ

ರೈಸಿಂಗ್ ಸ್ಟಾರ್ಸ್ ಮಂಗಳೂರು
ಮಾಲೀಕರು: ನಮನ್ ಪೈ, ಶ್ರೀವರ್ ಪೈ, ಆಕಾಂಕ್ಷಾ ಪೈ, ಗೌರಿ ಪೈ
(ತಂಡದ ಪ್ರಮುಖ ನಿರ್ವಹಣೆ: ಪ್ರಜ್ವಲ್ ಶೆಣೈ)

20 ಡಿಸೆಂಬರ್ ಶನಿವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ತಂಡಗಳು ತಮಗೆ ಅಗತ್ಯವಿರುವ ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಪಂದ್ಯಾವಳಿ ಅತ್ಯಂತ ರೋಚಕ ಹಾಗೂ ಸ್ಪರ್ಧಾತ್ಮಕವಾಗುವ ನಿರೀಕ್ಷೆ ಮೂಡಿದೆ. ಆಕ್ಷನ್ ಪ್ರಕ್ರಿಯೆಯನ್ನು ಶಿವನಾರಾಯಣ್ ಐತಾಳ್ ಕೋಟ ಅವರು ಯಶಸ್ವಿಯಾಗಿ ನೆರವೇರಿಸಿದರು. ಆಕ್ಷನ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಭಾಗವಹಿಸಿದವರಿಗಾಗಿ ಸೌಹಾರ್ದಭರಿತ ಭೋಜನ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಫೆಬ್ರವರಿ 1ರಂದು ಈ ಟೂರ್ನಿಯು ಸಾಲಿಗ್ರಾಮದ ಹಳೇಕೋಟೆ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಾವಳಿಗೆ ಪ್ರತಿಷ್ಠಿತ ‘ಅಭರಣ್’ ಸಂಸ್ಥೆ ಶೀರ್ಷಿಕಾ ಪ್ರಾಯೋಜಕರಾಗಿ ಕೈಜೋಡಿಸಿದೆ.

ಅಭರಣ CCL – ಶ್ರೀ ಲಕ್ಷ್ಮೀ ವೆಂಕಟ್ರಮಣ ಟ್ರೋಫಿ 2026 ಜಿಎಸ್‌ಬಿ ಕ್ರಿಕೆಟ್ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಲಿದ್ದು, ಅಭಿಮಾನಿಗಳು ಉತ್ಸಾಹಭರಿತ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ.

Exit mobile version