SportsKannada | ಸ್ಪೋರ್ಟ್ಸ್ ಕನ್ನಡ

ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಮತ್ತು ಥ್ರೋ ಬಾಲ್ ಪಂದ್ಯಾಟ

ಬಾರ್ ಅಸೋಸಿಯೇಷನ್ (ರಿ ) ಉಡುಪಿ ವತಿಯಿಂದ ವಕೀಲರಿಗೆ ಹೊನಲು ಬೆಳಕಿನ ರಾಜ್ಯ ಮಟ್ಟದ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋ ಬಾಲ್ ಪಂದ್ಯಾಟ 13 ಮತ್ತು 14 ರಂದು ಉಡುಪಿಯ ನ್ಯಾಯಾಲಯದ ಆವರಣದಲ್ಲಿ ನಡೆಯಲಿದೆ.

 


ಕಾರ್ಯಕ್ರಮದ ಉದ್ಘಾಟನಾ ಸಮಾರಂಭ 14 ರಂದು ಬೆಳಿಗ್ಗೆ 11 ಗಂಟೆಗೆ ಗೌರವಾನ್ವಿತ ನ್ಯಾಯಾಧೀಶರಾದ ಎಸ್ ಅಬ್ದುಲ್ ನಜೀರ್, ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ನವ ದೆಹಲಿ ಇವರು ನೆರವೇರಿಸಲಿದ್ದಾರೆ.

ಗೌರವಾನ್ವಿತ ನ್ಯಾಯಾಧೀಶರಾದ ಅಶೋಕ್ ನಿಜಗಣ್ಣವರ್ ಹೈಕೋರ್ಟ್, ಕರ್ನಾಟಕ ಮತ್ತು ಆಡಳಿತಾತ್ಮಕ ನ್ಯಾಯಾಧೀಶರು ಉಡುಪಿ ಜಿಲ್ಲೆ.

ಅತಿಥಿಗಳಾಗಿ ಶ್ರೀ ಸಿ ಎಮ್ ಜೋಶಿ
ಜಿಲ್ಲಾ ಅಧಿವೇಶನದ ಪ್ರಧಾನ ನ್ಯಾಯಾಧೀಶರು ಉಡುಪಿ ಜಿಲ್ಲೆ
ಶ್ರೀ ಎಸ್ ಎಲ್ ಭೋಜೇಗೌಡ ಶಾಸಕಾಂಗ ಸದಸ್ಯರು ಮತ್ತು ಕರ್ನಾಟಕ ರಾಜ್ಯ ಬಾರ್ ಅಸೋಸಿಯೇಷನ್ ಸದಸ್ಯರು ಬೆಂಗಳೂರು
ಇವರ ಉಪಸ್ಥಿತಿಯಲ್ಲಿ ಜರುಗಲಿದೆ.
ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ
ಪ್ರಥಮ ಬಹುಮಾನ ರೂ 33333 ಮತ್ತು ಟ್ರೋಫಿ
ದ್ವಿತೀಯ ಬಹುಮಾನ ರೂ 22222 ಮತ್ತು ಟ್ರೋಫಿ
ತೃತೀಯ ಬಹುಮಾನ ರೂ 11111 ಮತ್ತು ಟ್ರೋಫಿ
ಚತುರ್ಥ ಬಹುಮಾನ ರೂ 7777 ಮತ್ತು ಟ್ರೋಫಿ.

ಮಹಿಳಾ ವಿಭಾಗದ ಥ್ರೋ ಬಾಲ್ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ 15555 ಮತ್ತು ಟ್ರೋಫಿ
ದ್ವಿತೀಯ ಬಹುಮಾನ ರೂ 9999 ಮತ್ತು ಟ್ರೋಫಿ
ತೃತೀಯ ಬಹುಮಾನ ರೂ 7777 ಮತ್ತು ಟ್ರೋಫಿ
ಚತುರ್ಥ ಬಹುಮಾನ ರೂ 5555 ಮತ್ತು ಟ್ರೋಫಿ.
ಆಸಕ್ತ ತಂಡಗಳು ರೂ 2000 ನೀಡಿ ತಮ್ಮ ಹೆಸರನ್ನು ನೋಂದಣಿ ಮಾಡಿಸಲು ಕೋರಲಾಗಿದೆ.

ಸಮಾರೋಪ ಸಮಾರಂಭ 15-3-2020 ರಂದು ಸಂಜೆ 7 ಗಂಟೆಗೆ ಕೋಟ ಶ್ರೀನಿವಾಸ ಪೂಜಾರಿ ಮೀನುಗಾರಿಕಾ ಸಚಿವರು ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿದೆ

ಈ ಕಾರ್ಯಕ್ರಮಕ್ಕೆ ತಮ್ಮನ್ನು ಆದರದಿಂದ ಬರಮಾಡಿ ಕೊಳ್ಳುವವರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು
ಬಾರ್ ಅಸೋಸಿಯೇಷನ್ ಉಡುಪಿ.

Exit mobile version