SportsKannada | ಸ್ಪೋರ್ಟ್ಸ್ ಕನ್ನಡ

ನವೆಂಬರ್ 28ರಿಂದ ಡಿಸೆಂಬರ್ 1ರ ದಾವಣಗೆರೆಯಲ್ಲಿ ಎಸ್.ಎಸ್.ಶ್ಯಾಮನೂರು ಡೈಮಂಡ್, ಶಿವಗಂಗಾ ಕಪ್-2019

ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಇವರ ಆಶ್ರಯದಲ್ಲಿ, ದಾವಣಗೆರೆ ವಿಧಾನ‌ಸಭಾ ಸದಸ್ಯ ಶ್ಯಾಮನೂರು ಶಿವಶಂಕರಪ್ಪನವರ ಧರ್ಮಪತ್ನಿ ದಿ||ಪಾರ್ವತಮ್ಮ ರವರ ಸವಿನೆನಪಿನ ಅಂಗವಾಗಿ, ಶಿವಗಂಗಾ ಟ್ರಾನ್ಸ್ ಪೋರ್ಟ್ ಮಾಲಿಕ ಶ್ರೀನಿವಾಸ್ ಶಿವಗಂಗಾ ಪ್ರಾಯೋಜಕತ್ವದಲ್ಲಿ, ಮುನ್ಸಿಪಾಲಿಟಿ ಅಧ್ಯಕ್ಷ ದಿನೇಶ್.ಕೆ.ಶೆಟ್ಟಿ, M.L.A ಆಪ್ತಕಾರ್ಯದರ್ಶಿ ಕುರುಡಿ ಗಿರೀಶ್ ರವರ ಸಹಕಾರದೊಂದಿಗೆ ದಾವಣಗೆರೆ ತಂಡದ ಮಾಲೀಕ, ಕ್ರೀಡಾ ಪ್ರೋತ್ಸಾಹಕ ಜಯಪ್ರಕಾಶ್ ಗೌಡರ ದಕ್ಷ ಸಾರಥ್ಯದಲ್ಲಿ, ನಾಯಕ ಹಾಲಪ್ಪ ಸಾರಥಿ ಹಾಗೂ ತಂಡದ ಸಹಕಾರದೊಂದಿಗೆ ದಾವಣಗೆರೆಯ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನವೆಂಬರ್ 28 ರಿಂದ ಡಿಸೆಂಬರ್ 1 ರ ತನಕ 4 ದಿನಗಳ ಹೊನಲು ಬೆಳಕಿನ ಪಂದ್ಯಾಕೂಟ ನಡೆಯಲಿದೆ.

ಸತತ 12 ನೇ ಬಾರಿಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಈ ಪಂದ್ಯಾಕೂಟ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ವಿಜೃಂಭಣೆ ಹಾಗೂ ವ್ಯವಸ್ಥಿತ ಪಂದ್ಯಾಕೂಟವೆಂದು ಪರಿಗಣಿಸಲ್ಪಡುತ್ತಿದೆ.ಕಳೆದ ಒಂದು ತಿಂಗಳಿನಿಂದ ಪಿಚ್ ಹಾಗೂ ಸುಸಜ್ಜಿತ ಕ್ರೀಡಾಂಗಣದ ನಿರ್ಮಾಣಕ್ಕಾಗಿ ದಾವಣಗೆರೆಯ ತಂಡ ಬಹಳಷ್ಟು ಶ್ರಮಿಸುತ್ತಿದೆ.

ಪ್ರಥಮ‌ ಸ್ಥಾನಿ ತಂಡ 3,55,000 ನಗದು,ದ್ವಿತೀಯ 2,25,000 ಹಾಗೂ ತೃತೀಯ ಸ್ಥಾನಿ ತಂಡ 1,25,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ‌. ಜೊತೆಯಾಗಿ ವೈಯಕ್ತಿಕ ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಗುತ್ತಿದೆ.

ಈ ಪಂದ್ಯಾಕೂಟದ ನೇರ ಪ್ರಸಾರವನ್ನು M.Sports ಬಿತ್ತರಿಸಲಿದ್ದು, ವೀಕ್ಷಕ ವಿವರಣೆಕಾರರಾಗಿ ರಾಜ್ಯದ ಪ್ರಸಿದ್ಧ ಕಾಮೆಂಟೇಟರ್ಸ್ ಪ್ರಶಾಂತ್ ಅಂಬಲಪಾಡಿ ಹಾಗೂ ವಿನಯ್ ಉದ್ಯಾವರ ಭಾಗವಹಿಸಲಿದ್ದಾರೆಂದು ಟೂರ್ನಮೆಂಟ್ ನ ಮೀಡಿಯಾ ಪಾರ್ಟ್ನರ್ “ಸ್ಪೋರ್ಟ್ಸ್ ಕನ್ನಡ”ಕ್ಕೆ ತಿಳಿಸಿದ್ದಾರೆ.

ಆರ್.ಕೆ.ಆಚಾರ್ಯ ಕೋಟ

Exit mobile version