Site icon SportsKannada ಸ್ಪೋರ್ಟ್ಸ್ ಕನ್ನಡ

ಕ್ರೀಡೆಯಿಂದ ಮಾನಸಿಕ ದೈಹಿಕ ಆರೋಗ್ಯ ವೃದ್ಧಿ-ಶಾಲಿನಿ ರಾಜೇಶ್ ಶೆಟ್ಟಿ

ಕ್ರೀಡೆಯಿಂದ ಮಾನಸಿಕ ದೈಹಿಕ ಆರೋಗ್ಯ ವೃದ್ಧಿ-ಶಾಲಿನಿ ರಾಜೇಶ್ ಶೆಟ್ಟಿ

ಉಡುಪಿ-ಡೈನಮಿಕ್ ಫ್ರೆಂಡ್ಸ್ ಮತ್ತು ಮಹಾಕಾಳಿ ಫ್ರೆಂಡ್ಸ್ ಇವರ ಸಂಯುಕ್ತ ಆಶ್ರಯದಲ್ಲಿ 60 ಕೆ.ಜಿ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಕೂಟ ಮಹಾಲಿಂಗೇಶ್ವರ ಟ್ರೋಫಿ ಇದರ ಉದ್ಘಾಟನಾ ಸಮಾರಂಭ ನವೆಂಬರ್ 23 ರಂದು ಉಡುಪಿ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ಜರುಗಿತು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ,ಅಥ್ಲೆಟಿಕ್ ತರಬೇತುದಾರರಾದ ಶಾಲಿನಿ ರಾಜೇಶ್ ಶೆಟ್ಟಿ ಮಾತನಾಡಿ “ಕ್ರೀಡೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಿಂದ ಮಾನಸಿಕ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ” ಎಂದರು.

ವೇದಿಕೆಯಲ್ಲಿ ಉಡುಪಿ ಡಿ ವೈ ಎಸ್ ಪಿ ಪ್ರಭು ಡಿ.ಟಿ, ಮಹಾಸಭಾ(ರಿ) ಉಡುಪಿ ಜಿಲ್ಲಾ ಶ್ರೀ ಕನಕದಾಸ ಸಮಾಜ ಸೇವಾ ಸಂಘ(ರಿ)ಉಡುಪಿ,ಉದ್ಯಮಿಗಳಾದ ಸಚಿನ್,ರಾಜೇಶ್,ಸಮಾಜ ಸೇವಕರಾದ ಕೃಷ್ಣಮೂರ್ತಿ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.

Exit mobile version