
ಕುಂದಾಪುರ ಗಾಂಧಿ ಮೈದಾನದಲ್ಲಿ ‘ಸೌಹಾರ್ದ ಲೆಜೆಂಡ್ಸ್ ಟ್ರೋಫಿ’ ಆರಂಭ
ಕೆ. ಪಿ. ಸತೀಶ್ ನೇತೃತ್ವದಲ್ಲಿ ಭರ್ಜರಿ ಆಯೋಜನೆ
ಕುಂದಾಪುರ: ಗಾಂಧಿ ಮೈದಾನದಲ್ಲಿ ಇಂದು ಪ್ರತಿಷ್ಠಿತ ‘ಸೌಹಾರ್ದ ಲೆಜೆಂಡ್ಸ್ ಟ್ರೋಫಿ’ ಟೆನಿಸ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್ ಭರ್ಜರಿಯಾಗಿ ಚಾಲನೆ ಪಡೆದುಕೊಂಡಿದೆ. ಚಕ್ರವರ್ತಿ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ವಿಕೆಟ್‌ಕೀಪರ್ ಕೆ. ಪಿ. ಸತೀಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮಕ್ಕೆ ಹಿರಿಯ ಕ್ರಿಕೆಟಿಗರು ಮತ್ತು ಕ್ರೀಡಾಭಿಮಾನಿಗಳು ಹಾಜರಿದ್ದು, ಆಯೋಜಕರಿಗೆ ಶುಭಹಾರೈಸಿದರು. ಟೂರ್ನಮೆಂಟ್ ಉತ್ತಮ ಮಟ್ಟದ ಕ್ರೀಡಾತ್ಮಕ ಸ್ಪರ್ಧೆಗೆ ವೇದಿಕೆಯಾಗಲಿ ಎಂಬ ಆಶಯವನ್ನು ಹಿರಿಯರು ವ್ಯಕ್ತಪಡಿಸಿದರು.
ಮೊದಲ ಸೆಮಿಫೈನಲ್ ನಲ್ಲಿ ಫಿಶರ್ ಮೆನ್ ಮಲ್ಪೆ ತಂಡವು ಬಿ.ಜಿ ಸ್ಪಾರ್ಕ್ ಉಡುಪಿ ತಂಡವನ್ನು ಬಗ್ಗು ಬಡಿದು ಫೈನಲ್ ಪ್ರವೇಶಿಸಿತು.
