
ಸೌಹಾರ್ದ ಲೆಜೆಂಡ್ಸ್ ಟ್ರೋಫಿ 2025: ನವೆಂಬರ್ 22 ಮತ್ತು 23ರಂದು ಕುಂದಾಪುರದಲ್ಲಿ ಭರ್ಜರಿ ಕ್ರಿಕೆಟ್ ಹಬ್ಬ
ಕುಂದಾಪುರ: ಹಿರಿಯರಿಗಾಗಿ ವಿಶೇಷವಾಗಿ ಆಯೋಜಿಸಿರುವ ಕ್ರಿಕೆಟ್ ಟೂರ್ನಮೆಂಟ್ – ಸೌಹಾರ್ದ ಲೆಜೆಂಡ್ಸ್ ಟ್ರೋಫಿ 2025 – ನವೆಂಬರ್ 22 ಮತ್ತು 23ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಚಕ್ರವರ್ತಿ ಕುಂದಾಪುರ ತಂಡದ ಹೆಸರಾಂತ ವಿಕೆಟ್ ಕೀಪರ್ ಕೆ .ಪಿ ಸತೀಶ್ ಅವರ ನೇತೃತ್ವದಲ್ಲಿ ಈ ಟೂರ್ನಿಯನ್ನು ಆಯೋಜಿಸಲಾಗಿದೆ.
ಈ ಎರಡು ದಿನಗಳ ಟೂರ್ನಿಯಲ್ಲಿ ಉತ್ಸಾಹಭರಿತ ಪಂದ್ಯಗಳೊಂದಿಗೆ ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನೂ ನೀಡಲಾಗುತ್ತದೆ.
ವಿಜೇತರಿಗೆ ಭರ್ಜರಿ ಬಹುಮಾನಗಳು:
ಪ್ರಥಮ ಬಹುಮಾನ: ₹1,01,111 ನಗದು ಮತ್ತು ಶಾಶ್ವತ ಫಲಕ
ದ್ವಿತೀಯ ಬಹುಮಾನ: ₹50,555 ನಗದು ಮತ್ತು ಶಾಶ್ವತ ಫಲಕ
ಈ ಟೂರ್ನಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ತಂಡಗಳು ನವೆಂಬರ್ 1ರೊಳಗೆ ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬೇಕು. ನೋಂದಣಿ ಶುಲ್ಕ ₹5,000 ಆಗಿದ್ದು, ಪ್ರವೇಶ ಶುಲ್ಕ ₹15,000 ರೂಪಾಯಿ ನಿಗದಿಪಡಿಸಲಾಗಿದೆ.
ನೋಂದಣಿಗೆ ಸಂಪರ್ಕ: 9008820446
ಈ ಕ್ರಿಕೆಟ್ ಟೂರ್ನಿಯನ್ನು ಸ್ಪೋರ್ಟ್ಸ್ ಕನ್ನಡ Media Live ನಿಂದ ನೇರ ಪ್ರಸಾರ ಮಾಡಲಾಗುತ್ತದೆ, ಇದರಿಂದ ಪ್ರೇಕ್ಷಕರು ತಮ್ಮ ಮನೆಯಲ್ಲೇ ಕುಳಿತು ರಸವತ್ತಾದ ಪಂದ್ಯಾವಳಿಗಳನ್ನು ವೀಕ್ಷಿಸಲು ಅವಕಾಶವಿದೆ.
ಹಿರಿಯ ಕ್ರಿಕೆಟ್ ಪ್ರೇಮಿಗಳಿಗೆ ನೆನಪಿಸಿಕೊಳ್ಳುವಂತಹ ಅವಕಾಶವಾಗಿ ಈ ಸೌಹಾರ್ದ ಲೆಜೆಂಡ್ಸ್ ಟ್ರೋಫಿ 2025 ಪರಿಣಮಿಸಲಿದೆ.
