
ದಾಖಲೆಯ ಮೇಲೆ ದಾಖಲೆ ಸಾಧಿಸುತ್ತಿರುವ ಶುಭಮನ್ ಗಿಲ್- ಗೆಲುವಿನ ಹೊಸ್ತಿಲಲ್ಲಿ ಭಾರತ
ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತ ಇಂಗ್ಲೆಂಡ್ ಗೆ 608 ರನ್ ಗಳ ಗುರಿಯನ್ನು ನೀಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ 427 ರನ್ ಗಳಿಸಿದ ನಂತರ ಭಾರತ ಡಿಕ್ಲೇರ್ ಮಾಡಿತು. ಕ್ಯಾಪ್ಟನ್ ಗಿಲ್ ಈ ಇನ್ನಿಂಗ್ಸ್ ನಲ್ಲೂ ಅದ್ಭುತ ಆಟವಾಡಿ ಶತಕ ಬಾರಿಸಿದರು. ದಾಖಲೆಯ ಮೇಲೆ ದಾಖಲೆ ಸಾಧಿಸಿರುವ ಗಿಲ್, ಕ್ರಿಕೆಟ್ ನ ಪಿತಾಮಹ ಎಂದು ಬಣ್ಣಿಸಲಾಗುವ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಮುರಿಯುವ ಉಜ್ವಲ ಅವಕಾಶವನ್ನು ಹೊಂದಿದ್ದಾರೆ.
ಬೃಹತ್ ಗುರಿಯೊಂದಿಗೆ ಮೈದಾನಕ್ಕೆ ಇಳಿದ ಇಂಗ್ಲೆಂಡ್ ತಂಡ, 4ನೇ ದಿನದಾಟದ ಅಂತ್ಯಕ್ಕೆ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿ ಸಂಕಷ್ಟದಲ್ಲಿದೆ. ಇಂದು, ಕೊನೆಯ ದಿನವಾದ ಇಂಗ್ಲೆಂಡ್ ಗೆಲುವಿಗೆ 536 ರನ್ ಗಳಿಸಬೇಕಾಗಿದೆ. ತಂಡದ ಬಳಿ 7 ವಿಕೆಟ್ ಗಳಿವೆ.
