SportsKannada | ಸ್ಪೋರ್ಟ್ಸ್ ಕನ್ನಡ

ಸೃಷ್ಟಿ ಸೀನಿಯರ್ಸ್ ಕಪ್-ರೋಚಕ ಫೈನಲ್-ಫ್ರೆಂಡ್ಸ್ ಬೆಂಗಳೂರನ್ನು ಮಣಿಸಿದ ಆನಂದ್ ಇಲೆವೆನ್ ಗೆ ಪ್ರಶಸ್ತಿ

ಬೆಂಗಳೂರು-ಸೃಷ್ಟಿ ಲೋಕೇಶ್ ಇವರ ಸಾರಥ್ಯದಲ್ಲಿ,
ಅವಿಘ್ನ ಸೃಷ್ಟಿ ಬೆಂಗಳೂರು ತಂಡದ ಆಶ್ರಯದಲ್ಲಿ ಬೆಂಗಳೂರಿನ ಮಾಕಳಿಯಲ್ಲಿ ನಡೆದ”44+ಸೃಷ್ಟಿ ಸೀನಿಯರ್ಸ್ ಕಪ್” ಪಂದ್ಯಾಟದ ಫೈನಲ್ ನಲ್ಲಿ ಆನಂದ್ ಇಲೆವೆನ್ ತಂಡ ಫ್ರೆಂಡ್ಸ್ ಬೆಂಗಳೂರು ವಿರುದ್ಧ 2 ರನ್ ಗಳ ಅಂತರದ ಜಯಗಳಿಸಿ,ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆನಂದ್ ಇಲೆವೆನ್ ನಿಗದಿತ 8 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದ್ದರು.ಗೆಲುವಿನ ಗುರಿಯನ್ನು ಬೆಂಬತ್ತಿದ ಫ್ರೆಂಡ್ಸ್ ಬೆಂಗಳೂರು 8 ಓವರ್ ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 67 ರನ್ ಗಳಿಸಿ ಕೇವಲ 2 ರನ್ ಅಂತರದಲ್ಲಿ ಸೋಲೊಪ್ಪಿಕೊಂಡಿತ್ತು.
ಬೆಂಗಳೂರಿನ ಹಿರಿಯ ತಂಡ ಜೈ ಕರ್ನಾಟಕ ಬೆಂಗಳೂರು,ಫ್ಯೂಚುರಾ ಇಲೆವೆನ್,ಸೃಷ್ಟಿ ಬೆಂಗಳೂರು ಮತ್ತು ನಾಗಾ ಇಲೆವೆನ್ ಕ್ವಾರ್ಟರ್ ಫೈನಲ್ ಹಂತದಲ್ಲಿ ನಿರ್ಗಮಿಸಿದರೆ,ರೋಚಕ ಸೆಮಿಫೈನಲ್ಸ್ ನಲ್ಲಿ ಫ್ರೆಂಡ್ಸ್ ಬೆಂಗಳೂರು ಗುರುಬ್ರಹ್ಮ ತಂಡವನ್ನು ಮತ್ತು ಆನಂದ್ ಇಲೆವೆನ್ ಶ್ರೀ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಪಡೆದಿದ್ದರು.
ಸೆಮಿಫೈನಲ್ ಹಂತದಲ್ಲಿ ವೀರಾವೇಶದ ಹೋರಾಟ ನೀಡಿಯೂ ಸೋಲೊಪ್ಪಿಕೊಂಡ ಗುರುಬ್ರಹ್ಮ ಮತ್ತು ಶ್ರೀ ಬೆಂಗಳೂರು ತಂಡಗಳ ನಡುವೆ ಟಾಸ್ ನಡೆಸಿ,
ಗುರುಬ್ರಹ್ಮ ಬೆಂಗಳೂರು ತೃತೀಯ  ಮತ್ತು ಶ್ರೀ ಬೆಂಗಳೂರು ಚತುರ್ಥ ಸ್ಥಾನ ಪಡೆದರು.
ಆನಂದ್ ಇಲೆವೆನ್ ಶ್ರೀಕಾಂತ್ ಫೈನಲ್ ಪಂದ್ಯ ಶ್ರೇಷ್ಟ ಮತ್ತು ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಶಸ್ತಿ ಪಡೆದರೆ,ಆನಂದ್ ಇಲೆವೆನ್ ಹರೀಶ್ ಬಾಬು ಬೆಸ್ಟ್ ಬೌಲರ್ ಮತ್ತು ಫ್ರೆಂಡ್ಸ್ ಬೆಂಗಳೂರು ತಂಡದ ಗಿರೀಶ್ ಸರಣಿ ಶ್ರೇಷ್ಟ ಗೌರವಕ್ಕೆ ಪಾತ್ರರಾದರು.
ಸಮಾರೋಪ ಸಮಾರಂಭದಲ್ಲಿ ಆರ್.ಡಿ ಇಲೆವೆನ್ ತಂಡದ ಮಾಲೀಕರಾದ ದೇವರಾಜ್ ಮತ್ತು ಹಿರಿಯ ಆಟಗಾರರೆಲ್ಲರೂ ಸೇರಿ ಸೀನಿಯರ್ಸ್ ಕಪ್ ನ ರೂವಾರಿ ಸೃಷ್ಟಿ ಲೋಕೇಶ್ ಇವರನ್ನು ಸನ್ಮಾನಿಸಿದರು.ಈ ವೇಳೆ ಫ್ರೆಂಡ್ಸ್ ಬೆಂಗಳೂರು ಮಾಲೀಕರಾದ ರೇಣು ಗೌಡ,
ಅವಿಘ್ನ ಸೃಷ್ಟಿ ತಂಡದ ವ್ಯವಸ್ಥಾಪಕರಾದ ರವೀಂದ್ರ ತೋಳಾರ್ ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.
ವೀಕ್ಷಕ ವಿವರಣೆಯಲ್ಲಿ ಸಹಕರಿಸಿದ ವಿನಯ್ ಉದ್ಯಾವರ ಧನ್ಯವಾದ ಸಮರ್ಪಿಸಿದರು…
Exit mobile version