SportsKannada | ಸ್ಪೋರ್ಟ್ಸ್ ಕನ್ನಡ

ಶ್ರೇಯಸ್ ಅಯ್ಯರ್‌ಗೆ ಮತ್ತೆ ಕಾಡಿದ ಬೆನ್ನು ನೋವಿನ ಸಮಸ್ಯೆ..?

ಅಹಮದಾಬಾದ್ ನಲ್ಲಿ  ಆಸ್ಟ್ರೇಲಿಯಾ ವಿರುದ್ಧ  ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಆರಂಭಿಕ ಎರಡು ಟೆಸ್ಟ್‌ ಪಂದ್ಯಗಳಿಂದ ಬೆನ್ನು ನೋವಿನ ಸಮಸ್ಯೆಯಿಂದಾಗಿ ಹೊರಗುಳಿದಿದ್ದ  ಭಾರತ ತಂಡದ  ಭರವಸೆಯ ಯುವ ಆಟಗಾರ ಶ್ರೇಯಸ್ ಅಯ್ಯರ್ 4ನೇ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿದ್ದು ಬ್ಯಾಟಿಂಗ್‍ಗೆ ಇಳಿಯದಿರುವುದು ಕ್ರಿಕೆಟ್ ಆಭಿಮಾನಿಗಳಿಗೆ ನಿರಾಸೆಯಾಗಿದೆ.
ನಿಜವಾದ ಕಾರಣ ತಿಳಿಯದೆ ಕ್ರಿಡಾಂಗಣದಲ್ಲಿದ್ದ ಪ್ರೇಕ್ಷಕರು ಭಾರತೀಯರ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರತಿ ವಿಕೆಟ್ ಬಿದ್ದಾಗಲು ಈಗ ಶ್ರೇಯಸ್ ಆಡಲು ಬರಬಹುದು ಎಂದು ಕಾದಿದ್ದು ಬಿಟ್ಟರೆ ಶ್ರೇಯಸ್ ಅಯ್ಯರ್‌ ಕೊನೆಗೂ ಬ್ಯಾಟಿಂಗ್ ಗೆ ಬರದೆ ಪೆವಿಲಿಯನ್ ನಲ್ಲೆ ಉಳಿದರು. ಭಾರತ ಒಂಬತ್ತು ವಿಕೆಟ್ ಗಳನಷ್ಟೆ ಕಳೆದುಕೊಂಡು ತನ್ನ ಮೊದಲ ಇನಿಂಗ್ಸ್ ಮುಗಿಸಿತು.
ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಡಲು ಬಾರದಿರಲು ಕಾರಣವೇನು ಎಂದು ಕಾದು ಕುಳಿತ ಕ್ರಿಕೆಟ್ ಪ್ರೇಮಿಗಳಿಗೆ ಉತ್ತರ ಸಿಕ್ಕಿದೆ.   ನಿಜವಾದ ಕಾರಣವನ್ನು ಬಿಸಿಸಿಐ ಹೊರಹಾಕಿದೆ.
ಶ್ರೇಯಸ್ ಅಯ್ಯರ್ ಅವರು ಎನ್‍ಸಿಎಯಲ್ಲಿ ತರಬೇತಿ ಪಡೆದು 3ನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾದರಾದರೂ ದೊಡ್ಡ ಮೊತ್ತ ದಾಖಲಿಸುವಲ್ಲಿ ವಿಫಲರಾಗಿದ್ದರು. ನಾಲ್ಕನೇ ಟೆಸ್ಟ್‍ನಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವ ಭರವಸೆ ಹೊತ್ತಿದ್ದ ಅಯ್ಯರ್ ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ಎದುರಾಗಿದೆ.
ಅಂತಿಮ ಟೆಸ್ಟ್‌ನಲ್ಲಿ ಮೂರನೇ ದಿನದಾಟದ ವೇಳೆ ಶ್ರೇಯಸ್ ಅಯ್ಯರ್‌ಗೆ ಬೆನ್ನು ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಸ್ಕ್ಯಾನ್ ಕೂಡ ಮಾಡಲಾಗಿದ್ದು, ಅವರನ್ನು ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಟೀಮ್ ಇಂಡಿಯಾದ ಭರವಸೆಯ ಆಟಗಾರ ಅಯ್ಯರ್ ಗೆ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ಶತಕ ವೀರ ಶುಭಮನ್ ಗಿಲ್ ಔಟಾಗುತ್ತಿದ್ದಂತೆ ರವೀಂದ್ರಾ ಜಡೇಜಾ ಅವರಿಗೆ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡುವ ಅವಕಾಶ ಕಲ್ಪಿಸಲಾಗಿತ್ತು.
ನಾಲ್ಕನೇ ದಿನದಾಟದ ಆರಂಭದಲ್ಲೇ  ರವೀಂದ್ರ ಜಡೇಜಾ ಔಟಾಗುತ್ತಿದ್ದಂತೆ, ಶ್ರೇಯಸ್ ಅಯ್ಯರ್ ಕ್ರೀಸ್‍ಗಿಳಿಯುತ್ತಾರೆ ಎಂದು ಅಂದಾಜಿಸಲಾಗಿತ್ತಾದರು ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿದ್ದರಿಂದ ವಿಕೆಟ್ ಕೀಪರ್ ಶ್ರೀಕರ್ ಭರತ್ ಮೈದಾನಕ್ಕಿಳಿಯಬೇಕಾಯಿತು
ಶ್ರೇಯಸ್ ಅಯ್ಯರ್ ಅವರ ಬೆನ್ನು ನೋವು ಹೆಚ್ಚಾಗಿದ್ದರಿಂದ ವಿಕೆಟ್ ಕೀಪರ್ ಶ್ರೀಕರ್ ಭರತ್ ಔಟಾದ ನಂತರವೂ ಕ್ರೀಸ್‍ಗೆ  ಅಲ್‍ರೌಂಡರ್ ಅಕ್ಷರ್‍ಪಟೇಲ್ ಅವರು ಕ್ರೀಸ್‍ಗೆ ಇಳಿದಿದ್ದರು ವಿರಾಟ್ ಕೊಯ್ಲಿ ಜೊತೆಗೂಡಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದ ಅಕ್ಷರ್ 79 ರನ್ ಗೆ ಔಟಾಗಿ ಶತಕವಂಚಿತರಾದರು. ಕೊಯ್ಲಿ ಕೂಡ ಸರಿಯಾದ ಜೊತೆಗಾರರಿಲ್ಲದ ಕಾರಣ ಅಂತಿಮ ಹಂತದಲ್ಲಿ ಮನಬಂದಂತೆ ಬ್ಯಾಟ್ ಬಿಸಿ ಔಟಾಗಿ ಕೇವಲ 14 ರನ್ ನಿಂದ ದ್ವಿಶತಕದಿಂದ ವಂಚಿತರಾದರು . ಆದರೂ ಭಾರತ ಆಸ್ಟ್ರೇಲಿಯಾ ಎದುರು ಮೊದಲ ಇನ್ನಿಂಗ್ಸ್ ನಲ್ಲಿ 88 ರನ್ ಗಳ ಲೀಡ್ ಪಡೆದಿದೆ. ಒಂದು ದಿನದ ಆಟ ಬಾಕಿ ಇದ್ದು ಪಂದ್ಯ ಡ್ರಾ ಆಗುವ ಸಾಧ್ಯತೆ ಹೆಚ್ಚಾಗಿದೆ.  ಭಾರತಕ್ಕೆ ಗೆಲ್ಲುವ ಅವಕಾಶವಿದೆ ಎಲ್ಲವನ್ನೂ ಕಾದು ನೋಡಬೇಕಿದೆ
Exit mobile version