
ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ: “ಟೀಮ್ ಅಮ್ಮನ ನೆರವು”.
ಕಾರ್ಕಳ: ಸಹೃದಯಿ ದಾನಿಗಳ ಸಹಕಾರದೊಂದಿಗೆ,ಹಾಗೂ ವೈಯುಕ್ತಿಕ ನೆಲೆಗಟ್ಟಿನಲ್ಲಿ ಕಳೆದ ಬಹುವರ್ಷಗಳಿಂದ ನಿರಂತರ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ,ಕ್ರೀಡಾ ಹೀಗೇ ಹತ್ತು ಹಲವಾರು ಕ್ಷೇತ್ರಗಳಿಗೆ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ತನ್ನದೇ ರೀತಿಯಲ್ಲಿ ವಿಶೇಷ ಸಹಕಾರಗಳನ್ನು ನೀಡುತ್ತಾ ಬರುತ್ತಿದ್ದು, ಸಮಾಜದ ಅಶಕ್ತರ ಪಾಲಿಗೆ ಆಶಾಕಿರಣವಾಗಿ ಸಂಸ್ಥೆ ಕಾರ್ಯ ಪ್ರವೃತ್ತವಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ 2024- 25 ನೇ ಸಾಲಿನ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 90( 90%)ಕ್ಕಿಂತ ಅಧಿಕ ಅಂಕಗಳನ್ನು ಪಡೆದ ಕಾರ್ಕಳ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಸಂಸ್ಥೆ ನಿರ್ಣಯಿಸಿರುತ್ತದೆ,ಅರ್ಹ ವಿದ್ಯಾರ್ಥಿಗಳು ಇದಕ್ಕೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ, ಅಥವಾ ಅಮ್ಮನ ನೆರವು ಸಂಸ್ಥೆಯ
ಮುಖ್ಯಸ್ಥ ಅವಿನಾಶ್ ಜಿ ಶೆಟ್ಟಿ ಇವರನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ,ಅವರ ಸಂಪರ್ಕ ಸಂಖ್ಯೆ 9844552182 ಆಗಿರುತ್ತದೆ.
