Site icon SportsKannada ಸ್ಪೋರ್ಟ್ಸ್ ಕನ್ನಡ

ಆರ್.ಎಸ್.ಬಿ ಪ್ರೀಮಿಯರ್ ಲೀಗ್-4 ಟ್ರೋಫಿ ಅನಾವರಣ ಮತ್ತು ಬಿಡ್ಡಿಂಗ್ ಕಾರ್ಯಕ್ರಮ

ಆರ್.ಎಸ್.ಬಿ ಪ್ರೀಮಿಯರ್ ಲೀಗ್-4 ಟ್ರೋಫಿ ಅನಾವರಣ ಮತ್ತು ಬಿಡ್ಡಿಂಗ್ ಕಾರ್ಯಕ್ರಮ

ಉಡುಪಿ : ಆರ್.ಎಸ್.ಬಿ ಯೂತ್ ಹಿರಿಯಡ್ಕ ಇವರ ಆಶ್ರಯದಲ್ಲಿ ಜನವರಿಯಲ್ಲಿ ನಡೆಯಲಿರುವ ಆರ್.ಎಸ್.ಬಿ ಪ್ರೀಮಿಯರ್ ಲೀಗ್-4 ಕ್ರಿಕೆಟ್ ಪಂದ್ಯಾಟದ ಟ್ರೋಫಿ ಅನಾವರಣ ಮತ್ತು ಆಟಗಾರರ ಹರಾಜು ಪ್ರಕ್ರಿಯೆ ಪರ್ಕಳ ಶ್ರೀ ದುರ್ಗಾ ಸಭಾಂಗಣದಲ್ಲಿ ಜರುಗಿತು.

 

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಪರ್ಕಳದ ಅಧ್ಯಕ್ಷರಾದ ಅಶೋಕ್‌ ಕಾಮತ್ ಕೊಡಂಗೆ , ಆರ್.ಎಸ್.ಬಿ. ಸಂಘ ಮಣಿಪಾಲದ ಅಧ್ಯಕ್ಷರಾದ ಶ್ರೀಶ ನಾಯಕ್‌ ಪೆರ್ಣಂಕಿಲ, ಆರ್.ಎಸ್.ಬಿ. ಸಂಘ ಪುನಾರು ಅಧ್ಯಕ್ಷರಾದ ರಂಜಿತ್ ಕೆ.ಎಸ್., ಉದ್ಯಮಿಗಳಾದ ವಿಜೇತ್ ನಾಯಕ್, ರವಿಚಂದ್ರ ಪ್ರಭು, ಪ್ರಸಾದ್ ನಾಯಕ್, ವೈಭವ್, ಆರ್.ಎಸ್.ಬಿ. ಸಂಘ‌ ಮಣಿಪಾಲದ ಪ್ರಧಾನ ಕಾರ್ಯದರ್ಶಿಗಳು ಆಗಿರುವ ನಿತ್ಯಾನಂದ‌ ನಾಯಕ್‌ ಹಾಗೂ ಎಲ್ಲಾ‌ ಹತ್ತು ತಂಡಗಳ ಮಾಲಿಕರು ಹಾಗೂ ಐಕಾನ್ ಆಟಗಾರರು, ಆರ್.ಎಸ್.ಬಿ. ಯೂತ್ ಹಿರಿಯಡಕದ‌ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಪ್ರತುಲ್ ಹಿರಿಯಡಕ ಕಾರ್ಯಕ್ರಮ ನಿರೂಪಿಸಿದರು.

ಆರ್.ಎಸ್.ಬಿ ಪ್ರೀಮಿಯರ್ ಲೀಗ್-4 ಕ್ರಿಕೆಟ್ ಪಂದ್ಯಾಟ ಜನವರಿ 3 ಮತ್ತು 4 ರಂದು ಮಣಿಪಾಲದ ಎಂಡ್ ಪಾಯಿಂಟ್ ಗ್ರೌಂಡ್ ಮೈದಾನದಲ್ಲಿ ನಡೆಯಲಿದ್ದು,ಕರ್ನಾಟಕದ ಜನಪ್ರಿಯ ಕ್ರೀಡಾವಾಹಿನಿ ಸ್ಪೋರ್ಟ್ಸ್ ಕನ್ನಡ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.

Exit mobile version