
ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್
ಕಟಪಾಡಿ : ಯುವಕ ಸೇವಾದಳ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ, ಕಟಪಾಡಿ ಇದರ ಆಶ್ರಯದಲ್ಲಿ ವಿಶ್ವಕರ್ಮ ಸಮುದಾಯದವರಿಗಾಗಿ ಆಯೋಜಿಸಲಾದ ನಲವತ್ತು ಗಜಗಳ ಕ್ರಿಕೆಟ್ ಪಂದ್ಯಾಟ ಯುವ ಟ್ರೋಫಿ 2026 ಭರ್ಜರಿ ಯಶಸ್ಸಿನೊಂದಿಗೆ ಸಂಪನ್ನಗೊಂಡಿತು. ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಗಳ ದಿವ್ಯ ಆಶೀರ್ವಾದದೊಂದಿಗೆ ದೇವಸ್ಥಾನದ ವಠಾರದಲ್ಲಿ ನಡೆದ ಈ ಕ್ರೀಡಾಕೂಟವು ಕ್ರೀಡಾಭಿಮಾನಿಗಳ ಮನಸೆಳೆಯಿತು.
ಟೂರ್ನಿಯಲ್ಲಿ ಸುಬ್ರಮಣ್ಯ ಆಚಾರ್ಯ ವಡೆರಹೋಬಳಿ ಅವರ ಮಾರ್ಗದರ್ಶನ ಹಾಗೂ ಅಶ್ವಿನ್ ಆಚಾರ್ಯ ಕುಂಭಾಶಿ ಅವರ ನಾಯಕತ್ವದಲ್ಲಿ ಕಣಕ್ಕಿಳಿದ “ರತನ್ ರಾಕರ್ಸ್” ಕುಂದಾಪುರ ತಂಡ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಹೇಮಂತ್ ಆಚಾರ್ಯ ಅವರ ಸಾರಥ್ಯದಲ್ಲಿ ಆಡಿದ “ಶಿವ ಸಾನಿಧ್ಯ” ಬೆಳ್ಕಳೆ ತಂಡ ಉತ್ತಮ ಪೈಪೋಟಿ ನೀಡಿದರೂ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ಸಮಾರೋಪ ಸಮಾರಂಭದಲ್ಲಿ ಯುವಕ ಸೇವಾದಳದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಇನ್ನಂಜೆ ಹಾಗೂ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಮೊಕ್ತೇಸರ ಮುರಹರಿ ಕೆ. ಆಚಾರ್ಯ ಉಡುಪಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.
ಪಂದ್ಯಾವಳಿಯ ಯಶಸ್ವಿ ಆಯೋಜನೆಯಲ್ಲಿ ಕ್ರೀಡಾ ಕಾರ್ಯದರ್ಶಿ ಸಂದೀಪ್ ಆಚಾರ್ಯ ಇನ್ನಂಜೆ ಪ್ರಮುಖ ಪಾತ್ರವಹಿಸಿದರು. ಪಂದ್ಯಾವಳಿಯಲ್ಲಿ ಅಶ್ವಿನ್ ಆಚಾರ್ಯ “ಶ್ರೇಷ್ಠ ಬ್ಯಾಟ್ಸ್‌ಮನ್”, ಶ್ರೀನಿಧಿ ಆಚಾರ್ಯ ಕೋಣಿ “ಶ್ರೇಷ್ಠ ಬೌಲರ್” ಹಾಗೂ ಹೇಮಂತ್ ಆಚಾರ್ಯ “ಸರಣಿ ಶ್ರೇಷ್ಠ ಆಟಗಾರ” ಪ್ರಶಸ್ತಿಗಳನ್ನು ಪಡೆದುಕೊಂಡರು.
ಕಾರ್ಯಕ್ರಮವನ್ನು ವೆಂಕಟೇಶ್ ಆಚಾರ್ಯ ಅವರು ನಿರೂಪಿಸಿದರು.
