SportsKannada | ಸ್ಪೋರ್ಟ್ಸ್ ಕನ್ನಡ

ರಾಹುಲ್ ಭಾಯ್ ಕೊಟ್ಟ ಸಲಹೆಗಳೇ ನನ್ನ ನಾಯಕತ್ವದ ಗೆಲುವಿಗೆ ಸ್ಪೂರ್ತಿ ಆಯಿತು-ಅಜಿಂಕ್ಯ ರಹಾನೆ

ಸೈಲೆಂಟ್ ಅಗಿಯೇ ಕ್ರಿಕೆಟ್ ಅಖಾಡಕ್ಕೆ ಇಳಿದ ರಾಹುಲ್ ದ್ರಾವಿಡ್ ತನ್ನ ಅದ್ಭುತ ಬ್ಯಾಟಿಂಗ್ ಕೌಶಲ್ಯದಿಂದಲೆ ಸೈಲೆಂಟ್ ಅಗಿಯೆ ವಿಶ್ವ ಕ್ರಿಕೆಟ್ ನ ಇತಿಹಾಸದ ಪುಟಗಳಲ್ಲಿ ದಿಗ್ಗಜ ಆಟಗಾರ ಸಾಲಿನಲ್ಲಿ ದೃವ ತಾರೆಯಾಗಿ ಕಾಣಿಸಿಕೊಂಡಿದ್ದಾರೆ,ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ನಂತರವು ದ್ರಾವಿಡ್ ಸೈಲೆಂಟ್ ಅಗಿಯೆ ಭಾರತ ಕ್ರಿಕೆಟ್ ತಂಡದ ಯಶೋಗಾಥೆಯಲ್ಲಿ ತನ್ನ ಪ್ರಬಲಶಕ್ತಿಯನ್ನು ತುಂಬಿ ಯುವ ಆಟಗಾರ ಕಣ್ಮಣಿ ಅಗಿದ್ದಾರೆ ಕನ್ನಡಿಗ ರಾಹುಲ್ ದ್ರಾವಿಡ್,
ಆಸ್ಟ್ರೇಲಿಯಾ ಪ್ರವಾಸಕ್ಕೂ ಮೊದಲು ಭಾರತ ತಂಡದ ಮಾಜಿ ನಾಯಕ ಹಾಗೂ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ ನಿರ್ದೇಶಕ ರಾಹುಲ್‌ ದ್ರಾವಿಡ್‌  ತಾನೆನು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ದ್ರಾವಿಡ್  ನೀಡಿದಂತ ಸಲಹೆಯನ್ನು ಸರಣಿಯ ಕೊನೆಯವರೆಗೂ ಅಸ್ತ್ರವಾಗಿ ಉಪಯೋಗಿಸಿ ಕೊಂಡಿದ್ದನ್ನು ಅಜಿಂಕ್ಯ ರಹಾನೆ ಬಹಿರಂಗವಾಗಿ ಹೇಳಿದ್ದಾರೆ.
ಇತ್ತೀಚೆಗೆ ಹರ್ಷ ಬೋಗ್ಲೆ ಜೋತೆಗಿನ ಸಂಭಾಷಣೆಯಲ್ಲಿ ಈ ವಿಷಯಗಳನ್ನು ರಹಾನೆ ಮುಕ್ತವಾಗಿ ಅವರೆದುರು ಹಂಚಿಕೊಂಡಿದ್ದಾರೆ , ನೆಟ್ಸ್‌ನಲ್ಲಿ ಜಾಸ್ತಿ ಬ್ಯಾಟಿಂಗ್‌ ಮಾಡದಂತೆ ಒತ್ತಡಕ್ಕೆ ಒಳಗಾಗದೆ ಇರು ಹಾಗೂ ನಾಯಕತ್ವದ ಕಡೆ ಹೆಚ್ಚು ಹೆಚ್ಚು ಗಮನ ಹರಿಸುವಂತೆ ರಾಹುಲ್ ದ್ರಾವಿಡ್‌ ಸಲಹೆ ನೀಡಿದ್ದರು ಎಂಬ ಅಂಶವನ್ನು ಬಹಿರಂಗಪಡಿಸಿದರು.
ಅಡಿಲೇಡ್‌ ಟೆಸ್ಟ್ ನಲ್ಲಿನ ಭಾರತ ತಂಡದ ಹೀನಾಯ ಸೋಲಿನ ಬಳಿಕ  ನಾಯಕ ವಿರಾಟ್‌ ಕೊಹ್ಲಿ ಪಿತೃತ್ವ ರಜೆಯ ಮೇಲೆ ತವರಿಗೆ ವಾಪಸ್ ಅಗಿದ್ದರು. ಅಗ ಏಣಿಕೆಯಂತೆ  ಅಜಿಂಕ್ಯ ರಹಾನೆ ಹೆಗಲಿಗೆ ನಾಯಕತ್ವದ ಜವಬ್ದಾರಿ ನೀಡಲಾಯಿತು ಉಳಿದಿರುವಂತಹ ಮೂರು ಟೆಸ್ಟ್ ಪಂದ್ಯಗಳಿಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು ರಹಾನೆ ,
 ಮೊದಲ ಟೆಸ್ಟ್‌ ಗೆದ್ದ ಹುಮ್ಮಸ್ಸಿನಲ್ಲಿದ್ದ ಆಸ್ಟ್ರೇಲಿಯನ್ನರು ಇನ್ನೂಳಿದ ಮೂರು ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ನಾವೆ ಎನ್ನುವ ಬಹು ನಿರೀಕ್ಷೆಯಲ್ಲಿದ್ದರು ಕನಸು ಕಂಡಿದ್ದರು ಅದರೆ ನೆಡೆದದ್ದೆ ಬೇರೆ  ಭಾರತ ತಂಡ ಮೆಲ್ಬೋರ್ನ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸಿದರೆ,
ಸಿಡ್ನಿ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರು ಹಾಗೂ ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಮೂರು ವಿಕೆಟ್‌ ಜಯ ಸಾಧಿಸಿತ್ತು ಭಾರತ.
“ದುಬೈನಿಂದ ಆಸ್ಟ್ರೇಲಿಯಾಗೆ ಪ್ರಯಾಣ ಆರಂಭಿಸುವುದಕ್ಕೂ ಮುನ್ನ ರಾಹುಲ್‌ ಭಾಯ್‌ ನನಗೆ ಕರೆ ಮಾಡಿ ಹೇಳಿದ್ದರು.ಅಜೀಂಕೆ ಮೊದಲ ಪಂದ್ಯದ ಬಳಿಕ ನೀವೇ ತಂಡವನ್ನು ಮುನ್ನಡೆಸುವುದೆಂದು ನನಗೆ  ತಿಳಿದಿದೆ, ಒತ್ತಡಕ್ಕೆ ಒಳಗಾಗಬೇಡಿ. ಏನೇ ಆಗಲಿ ತಲೆ ಕೆಡಿಸಿಕೊಳ್ಳಬೇಡಿ, ಧೈರ್ಯದಿಂದ ಕಣಕ್ಕೆ ಇಳಿಯಿರಿ ಮಾನಸಿಕವಾಗಿ ಧೃತಿಗೆಡದೆ ಬಲಿಷ್ಠರಾಗಿರಿ. ನೆಟ್ಸ್‌ನಲ್ಲಿ ತುಂಬಾ ಸಮಯ ಬ್ಯಾಟಿಂಗ್‌ ಮಾಡಿ ದೇಹವನ್ನು ದಣಿಸಿ ಕೊಳ್ಳಬೇಡಿ ಎಂದು ಸಲಹೆ ನೀಡಿದ್ದರು ಎಂದು ರಹಾನೆ ಹೇಳಿದ್ದಾರೆ.
“ರಾಹುಲ್‌ ಭಾಯ್‌ ನನ್ನ ಬ್ಯಾಟಿಂಗ್‌ ಅನ್ನು ತುಂಬಾ ಇಷ್ಟಪಡುತ್ತಾರೆ. ‘ನೆಟ್ಸ್‌ನಲ್ಲಿ ಜಾಸ್ತಿ ಬ್ಯಾಟಿಂಗ್‌ ಮಾಡಬೇಡಿ, ನಿಮ್ಮ ತಯಾರಿ ತುಂಬಾ ಚೆನ್ನಾಗಿದೆ, ನಿಮ್ಮ ಬ್ಯಾಟಿಂಗ್‌ ಕೂಡ ಅಷ್ಟೇ ಚೆನ್ನಾಗಿಯೇ ಇದೆ. ಹಾಗಾಗಿ ಯಾವುದೇ ಒತ್ತಡಕ್ಕೆ ಒಳಗಾಗದೆ ತಂಡವನ್ನು ಹೇಗೆ ಮುನ್ನಡೆಸ ಬೇಕೆಂಬುದರ ಬಗ್ಗೆ ಯೋಚಿಸಿ,ಪ್ರತಿಯೊಬ್ಬ ಆಟಗಾರರನ್ನು ವಿಶ್ವಾಸ ತೆಗೆದುಕೊಂಡು ಅವರಲ್ಲಿ ಧೈರ್ಯತುಂಬಿ, ಪ್ರತಿ ಕ್ಷಣದಲ್ಲೂ ಹುರಿದುಂಬಿಸಿ, ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ,’ ಎಂದು ದ್ರಾವಿಡ್‌ ಹೇಳಿದ್ದರು ಅವರ ಒಂದೊಂದು ಮಾತುಗಳು  ನಿಜಕ್ಕೂ ನಮ್ಮ ತಂಡದ ಗೆಲುವಿಗೆ ಸ್ಫೂರ್ತಿ ಅಯ್ತು ಎಂದು ರಹಾನೆ ತಿಳಿಸಿದರು.
ಕಳೆದ ಮೂರು ವಾರಗಳ ಹಿಂದೆ ಟೀಮ್‌ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಅವರದೇ ನೆಲದಲ್ಲಿ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು, ಸತತ ಎರಡನೇ ಬಾರಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಭಾರತದ ಐತಿಹಾಸಿಕ ಸಾಧನೆ ಬೆನ್ನಲ್ಲೆ ತಂಡಕ್ಕೆ ಶಕ್ತಿ ತುಂಬಿ ಸಾಮರ್ಥ್ಯ ಹೆಚ್ಚಿಸಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ಯಾಟಿಂಗ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು.
19 ವಯೋಮಿತಿಯ ಭಾರತ ತಂಡ ಹಾಗೂ ಭಾರತ ‘ಎ’ ತಂಡಗಳಿಗೆ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿದ್ದ ವೆಳೆ, ಹಲವಾರು ಯುವ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದರು. ಟೆಸ್ಟ್ ಸರಣಿಯಲ್ಲಿ ಮಯಾಂಕ್‌ ಅಗರ್ವಾಲ್‌, ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌, ಶುಭಮನ್‌ ಗಿಲ್, ರಿಷಭ್‌ ಪಂತ್‌, ನವದೀಪ್‌ ಸೈನಿ, ಹನುಮ ವಿಹಾರಿ, ಶಾರ್ದುಲ್‌ ಟಾಕೂರ್‌ ಸೇರಿದಂತೆ ಹಲವು ಸ್ಟಾರ್‌ ಆಟಗಾರರು ದಿ ವಾಲ್‌ ಗರಡಿಯಲ್ಲಿ ಪಳಗಿರುವ ಪ್ರತಿಭೆಗಳಾಗಿದ್ದಾರೆ ಅವರ ಮಾರ್ಗ ದರ್ಶನದಲ್ಲಿ ಭಾರತ ತಂಡದ ಬಲಿಷ್ಠ ಆಟಗಾರರಾಗಿ ಬೆಳೆಯುತ್ತಿದ್ದಾರೆ,ಮಾಜಿ ಆಗುತ್ತಿದ್ದ ಹಾಗೆ ಅದೆಷ್ಟೋ ಆಟಗಾರರು ಕಣ್ಮರೆಯಾಗಿ ಹೋಗುತ್ತಾರೆ,ಆದರೆ  ದಿ ವಾಲ್ ಖ್ಯಾತಿಯ ನಮ್ಮ ಕನ್ನಡಿಗ ದ್ರಾವಿಡ್  ತನ್ನ ಅದ್ಭುತ ಆಟದ ಕೌಶಲ್ಯವನ್ನು, ಕ್ರಿಕೆಟ್ ಅಂಗಳದಲ್ಲಿ ಎದುರಾಳಿಗಳನ್ನು ಎದುರಿಸುವ ಸಾಮರ್ಥ್ಯವನ್ನು ,ಪಂದ್ಯದಿಂದ ಪಂದ್ಯಕ್ಕೆ ಶಕ್ತಿಯುತವಾಗಿ ಮುನ್ನಡೆಯುವ ಧೈರ್ಯವಂತಿಕೆಯನ್ನು ಪ್ರತಿಯೊಬ್ಬ ಆಟಗಾರನು ಹೇಗೆ ರೂಪಿಸಿಕೊಳ್ಳ ಬೇಕೆಂದು  ಭಾರತೀಯ ಯುವ ಆಟಗಾರರಿಗೆ ಸಲಹೆ ನೀಡುತ್ತಿರುವುದರ ಪರಿಣಾಮವೆ ಭಾರತ ತಂಡದ ಯುವ ಆಟಗಾರರು ತಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸುವಂತಾಗಿದೆ ತಂಡ ಕೂಡ ಪಂದ್ಯದಿಂದ ಪಂದ್ಯಕ್ಕೆ ಬಲಿಷ್ಟವಾಗಿ ರೂಪುಗೊಳ್ಳುತ್ತಿದೆ ಎಂದರೆ ತಪ್ಪಾಗಲಾರದು ಅದೇನೆ ಇರಲಿ ನಮ್ಮ ರಾಹುಲ್ ದ್ರಾವಿಡ್ ರ ಕ್ರಿಕೆಟ್ ಕಾಳಜಿಯನ್ನು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಮೆಚ್ಚಲೆ ಬೇಕು
    *- ಸುಧೀರ್ ವಿಧಾತ, ಶಿವಮೊಗ್ಗ* ಭಾರತ್ ಕ್ರಿಕೆಟರ್ಸ್ ತಂಡದ ಮಾಜಿ ನಾಯಕ
Exit mobile version