SportsKannada | ಸ್ಪೋರ್ಟ್ಸ್ ಕನ್ನಡ

ಟೊರ್ಪೆಡೋಸ್ ಮುಕ್ತ ಅಂತರ್ಜಾಲ ಚೆಸ್ ಪಂದ್ಯಾಟ- ಏಳು ಪ್ರತ್ಯೇಕ ವಿಭಾಗಗಳಲ್ಲಿ ಪ್ರಶಸ್ತಿ ವಿತರಣೆ

ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್(ರಿ) ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ (ರಿ)ಉಡುಪಿ ಇದರ ಸಹಯೋಗದೊಂದಿಗೆ
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ)ಕುಂದಾಪುರ www.tornelo.com ಎಂಬ ಪ್ಲಾಟ್ಫಾರ್ಮ್ ಮುಖೇನ  ಮುಕ್ತ ಅಂತರ್ಜಾಲ ಚೆಸ್ ಪಂದ್ಯಾಟವನ್ನು ದಿನಾಂಕ 03-10-2021 ಆದಿತ್ಯವಾರದಂದು ಆಯೋಜಿಸಿತ್ತು.
ಈ ಸ್ಪರ್ಧೆಯಲ್ಲಿ ಒಟ್ಟು ಬಹುಮಾನ ನಿಧಿ 50,000/- ಆಗಿತ್ತು.ಗ್ರಾಂಡ್ ಮಾಸ್ಟರ್ ಆರ್ .ಆರ್ ಲಕ್ಷ್ಮಣ್ , ಅಂತಾರಾಷ್ಟ್ರೀಯ ಮಾಸ್ಟರ್ ಪಿ. ಡಿ. ಎಸ್  ಗಿರಿನಾಥ್, ತಮಿಳುನಾಡಿನ ಹರಿಕೃಷ್ಣನ್.ಎ ಹಾಗೂ ಹಲವಾರು ರಾಜ್ಯ, ರಾಷ್ಟ್ರ ಮಟ್ಟದ ಚೆಸ್ ಆಟಗಾರರು  ಸೇರಿದಂತೆ ಭಾರತದ ಎಲ್ಲೆಡೆಯಿಂದ ಒಟ್ಟು 150ಕ್ಕೂ  ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಸ್ಪರ್ಧೆಗೆ ಮೆರುಗು ತಂದು ಸ್ಪರ್ಧೆಯ ಭರ್ಜರಿ ಯಶಸ್ಸಿಗೆ ಕಾರಣರಾದರು. ಸ್ಪರ್ಧೆಯಲ್ಲಿ ಮುಖ್ಯ ಬಹುಮಾನವನ್ನು ಜಿ.ಎಂ ಲಕ್ಷ್ಮಣ್ ಆರ್.ಆರ್, ಕೌಸ್ತವ್ ಕುಂಡು,ಸಾತ್ವಿಕ್ ಅಡಿಗ, ಹರಿಕೃಷ್ಣನ್ ಎ.ಆರ್, ಗಿರಿನಾಥ್ ಪಿ. ಡಿ.ಎಸ್, ಹರಿಗಣೇಶ್ .ಟಿ,ಮನಿ ಭಾರತಿ,ರಾಮ್ ಎಸ್ ಕೃಷ್ಣನ್, ಅರ್ಪನ್ ದಾಸ್,ಫೆಮಿಲ್ ಚೆಲ್ಲದುರೈ, ಥೋಲ್ ಕಪ್ಪಿಯಾನ್,ಶಿವ.ಎಸ್,ಗುರು ಪ್ರಕಾಶ್,ಬದ್ರಿ ನಾರಾಯಣ್ ಕುಮಾರನ್,ವಿಶಾಲ್. ವಿ, ಕಾರ್ತಿಕೇಯ. ಪಿ,ಮೆಲ್ವಿನ್ ಕಾರ್ಡೋಝ,ಕವಿನ್,ಶಶಾಂಕ್ ,ಸ್ವಾತಿ ಪ್ರಶಸ್ತಿಗಳನ್ನು ಪಡೆದುಕೊಂಡರೆ ,ಏಳು ವರ್ಷ  ಕೆಳಗಿನ ವಯೋಮಿತಿ ವಿಭಾಗದಲ್ಲಿ ಅರ್ಜುನ್ ಸಿಂಗ್,ರಮೇಶ್ ರೆಡ್ಡಿ, ಧ್ರುವ್ ದಿಲೀಪ್, ಚರಿತ್,ಲಿಯೋ ಜೋಸೆಫ್, ವೇದಾಂತ್ ನಾಯಕ್, ಎನ್ ಮಲಿನ್ ಲೊನಿಕ ಪ್ರಶಸ್ತಿಯನ್ನು ಪಡೆದುಕೊಂಡರು.
ಒಂಭತ್ತು ವರ್ಷ ಕೆಳಗಿನ ವಯೋಮಿತಿ ವಿಭಾಗದಲ್ಲಿ  ಆರಭಿ ಮಧುಕರ್,ರಿತೇಶ್, ಸಾತ್ವಿ,ವಿಶ್ವನಾಥ್, ಪರಿಣಿತ್ ಗೌಡ,ಸರಸ್ ಸಮ್ಮರ್,ಅನ್ವಿತಾ,ವಿಶಾಕ್ ಆಚಾರ್ಯ ಪ್ರಶಸ್ತಿಯನ್ನು ಪಡೆದುಕೊಂಡರು.ಹನ್ನೊಂದು ವರ್ಷ ಕೆಳಗಿನ ವಯೋಮಿತಿ ವಿಭಾಗದಲ್ಲಿ  ಕೌಶಲ್,ಜಾಕೆ ,ಸಂಜಯ್,ಸಾಯಿ ಸರ್ವೇಶ್, ಅನಧಿ ಪಿ,ಅಭಿನೀಥ್ ಭಟ್,ರುದ್ರ ರಾಜೀವ್  ಹಾಗೂ ಹದಿಮೂರು ವರ್ಷ  ಕೆಳಗಿನ ವಯೋಮಿತಿ ವಿಭಾಗದಲ್ಲಿ  ಶ್ರೀಹರಿ, ಶೌನ್,ಹೈದರ್,ಅಶ್ವಥ್,ಪ್ರಣವ್,ಅರವಿಂದ್,ಅಭಿನವ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.ಹದಿನಾರು ವರ್ಷ ಕೆಳಗಿನ ವಯೋಮಿತಿ ವಿಭಾಗದಲ್ಲಿ ಆಶಿಷ್,ಗೌತಮ್,ಕಾನಿಷ್ಕ, ಶ್ರೀಅಂಶ್,ಶ್ರೀಕರ ಪ್ರಭ,ನಿಖಿಲ್ ವಿಕ್ರಂ,ಮೊಹಮ್ಮದ್ ಹಾಗೂ ಉತ್ತಮ ಮಹಿಳಾ ಆಟಗಾರರು ಪ್ರಶಸ್ತಿಯನ್ನು  ಸ್ನೇಹಶ್ರೀ,ಹರ್ಷಿಣಿ, ಶ್ರೀ,ದಿಶಾ,ಕಾವ್ಯಶ್ರೀ ಹಾಗೂ ಅನುಭವಿ ಆಟಗಾರನಾಗಿ  ಶ್ರೀಧರ್ ರೈ ಬಿ ಇವರನ್ನು ಗೌರವಿಸಲಾಯಿತು.
Exit mobile version