SportsKannada | ಸ್ಪೋರ್ಟ್ಸ್ ಕನ್ನಡ

ಕುಂದಾಪುರ-ಟಿ‌.ಸಿ.ಎ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಸಾಧ್ಯ-ಡಿ.ವೈ.ಎಸ್.ಪಿ ಶ್ರೀಕಾಂತ್

“ಅಳಿವಿನಂಚಿನಲ್ಲಿರುವ ಟೆನಿಸ್ಬಾಲ್ ಕ್ರಿಕೆಟ್ ಉಳಿಸುವ ಪ್ರಯತ್ನ ಟಿ.ಸಿ.ಎ ನಿಂದ ಸಾಧ್ಯವಾಗುತ್ತಿದೆ‌.ಈ ಪ್ರಯತ್ನದ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಲಭ್ಯವಾಗಿದೆ” ಎಂದು ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ್ ಹೇಳಿದರು.
ಇವರು ಶುಕ್ರವಾರ ಬೆಳಿಗ್ಗೆ ಇಲ್ಲಿನ ಗಾಂಧಿಮೈದಾನದಲ್ಲಿ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಕುಂದಾಪುರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕ ಭಾಷಣಗೈದ ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ ಟೆನಿಸ್ಬಾಲ್ ಕ್ರಿಕೆಟ್ ಗತಕಾಲದ ವೈಭವವನ್ನು ಉಳಿಸಿ,ಯುವ ಪ್ರತಿಭೆಗಳಿಗೆ ಉಜ್ವಲ ಭವಿಷ್ಯ ರೂಪಿಸುವ ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡಿದೆ.ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಆಯ್ದ ಆಟಗಾರರನ್ನು ಒಗ್ಗೂಡಿಸಿ ಜಿಲ್ಲಾಮಟ್ಟದ ತಂಡವನ್ನು ಕಟ್ಟಿ,ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಪ್ರತಿನಿಧಿಸುವ ಅವಕಾಶ ಕಲ್ಪಿಸಲಿದೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಬಿ.ಸಿ.ಸಿ ಡಿಗ್ರಿ
ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ್ ಶೆಟ್ಟಿ,ಯುವಜನ ಕ್ರೀಡಾ ಇಲಾಖೆ ಕುಂದಾಪುರದ ಕುಸುಮಾಕರ ಶೆಟ್ಟಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಪೂಜಾರಿ,ಟಿ‌.ಸಿ‌.ಎ ಉಪಾಧ್ಯಕ್ಷರಾದ ನಾರಾಯಣ್ ಶೆಟ್ಟಿ, ಅಮರ್ ನಾಥ್ ಭಟ್,ಟಿ‌.ಸಿ.ಎ ಪದಾಧಿಕಾರಿಗಳಾದ ಸುಧೀರ್ ಶೆಟ್ಟಿ ಮಾರ್ಕೋಡು,ಜಗದೀಶ್ ಕಾಮತ್ ಕಟಪಾಡಿ,ಭೂಷಣ್ ಉಡುಪಿ,ಕ್ರೀಡಾಪ್ರೋತ್ಸಾಹಕರಾದ ಅಬು ಮೊಹಮ್ಮದ್, ಸತೀಶ್ ಕೋಟ್ಯಾನ್,ರಂಜಿತ್ ಶೆಟ್ಟಿ,
 ಮನೋಜ್ ನಾಯರ್,ಕೆ.ಪಿ.ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ವೀಕ್ಷಕ ವಿವರಣೆಕಾರ ಶಿವನಾರಾಯಣ್ ಐತಾಳ್ ಕೋಟ ಕಾರ್ಯಕ್ರಮ ನಿರೂಪಣೆಗೈದರು.
Exit mobile version