
ಓಶಿಯನ್ ಟ್ರೋಫಿ – 2025: ಅಯೋಧ್ಯಾ ಪಾಂಚಜನ್ಯ ಕೋಟ ತಂಡ ಚಾಂಪಿಯನ್
ಕಟಪಾಡಿ: ಫ್ರೆಂಡ್ಸ್ ಕ್ರಿಕೆಟರ್ಸ್, ಕಾಪು ವತಿಯಿಂದ ಆಯೋಜಿಸಲಾದ “ಓಶಿಯನ್ ಟ್ರೋಫಿ – 2025” ನ್ಯಾಷನಲ್ ಲೆವೆಲ್ ಹಾಗೂ ಪಿನ್ ಕೋಡ್ ಲೆವೆಲ್ ಹೊನಲುಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಪಳ್ಳಿಗುಡ್ಡೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಾವಂತ ಆಟಗಾರರು ಭಾಗವಹಿಸಿದ ಈ ಟೂರ್ನಮೆಂಟ್‌ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಉತ್ಸಾಹಭರಿತ ಪಂದ್ಯಗಳು ಕಣ್ಣಿಗೆ ಕಣ್ತುಂಬಿಕೊಂಡವು.
ಈ ಕ್ರೀಡಾಕೂಟದಲ್ಲಿ ಅಯೋಧ್ಯಾ – ಪಾಂಚಜನ್ಯ ಕೋಟ ತಂಡ ಶ್ರೇಷ್ಠ ಪ್ರದರ್ಶನ ತೋರಿಸಿ ₹4,04,444 ನಗದು ಬಹುಮಾನ ಸಹಿತ ಚಾಂಪಿಯನ್ ಪ್ರಶಸ್ತಿ ಕಸಿದುಕೊಂಡಿತು.
ಬಡಗಹಿತ್ಲು – ಬಪ್ಪನಾಡು, ಮೂಲ್ಕಿ ತಂಡ ಉತ್ತಮ ಹೋರಾಟ ನೀಡಿ ₹2,02,222 ನಗದು ಬಹುಮಾನ ಸಹಿತ ರನ್ನರ್ಸ್ ಟ್ರೋಫಿಗೆ ಪಾತ್ರವಾಯಿತು.
️ ವೈಯಕ್ತಿಕ ಪ್ರಶಸ್ತಿಗಳು:
ಮ್ಯಾನ್ ಆಫ್ ದ ಮ್ಯಾಚ್: ಭರತ್ ಗಿಳಿಯಾರು
ಬೆಸ್ಟ್ ಬ್ಯಾಟ್ಸಮನ್: ಗುರು (ಬಡಗಹಿತ್ಲು)
ಬೆಸ್ಟ್ ಬೌಲರ್: ಭರತ್ ಗಿಳಿಯಾರು
ಬೆಸ್ಟ್ ವಿಕೆಟ್ ಕೀಪರ್ (ಡಿಸ್ಟ್ರಿಕ್ಟ್ ಪೂಲ್): ಯಶು ಮೂಲ್ಕಿ
ಬೆಸ್ಟ್ ವಿಕೆಟ್ ಕೀಪರ್ (ಸ್ಟೇಟ್ ಪೂಲ್): ಸಚಿನ್ ಕೋಟೇಶ್ವರ
ಮ್ಯಾನ್ ಆಫ್ ದ ಸೀರೀಸ್: ರವಿಚಂದ್ರ (BBM) – LED ಟಿವಿ (₹28,000 MRP)
ಈ ಟೂರ್ನಮೆಂಟ್‌ನಲ್ಲಿ ಭರತ್ ಗಿಳಿಯಾರುವವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಕೌಶಲ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಯುವ ಪ್ರತಿಭೆಗಳಿಗೆ ವೇದಿಕೆಯಾದ ಈ ಓಶಿಯನ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಕಟಪಾಡಿ ಪ್ರದೇಶದಲ್ಲಿ ಕ್ರಿಕೆಟ್ ಹಬ್ಬದಂತಿತ್ತು.
