SportsKannada | ಸ್ಪೋರ್ಟ್ಸ್ ಕನ್ನಡ

ನವೆಂಬರ್ 9,10, ಬಿ.ಎಸ್.ವೈ ಕಪ್-2019, ತಿಪಟೂರು ಪ್ರೀಮಿಯರ್ ಲೀಗ್ ಸೀಸನ್ 2

ಕ್ಲಾಸಿಕ್ ಕ್ರಿಕೆಟರ್ಸ್ ತಿಪಟೂರು ಇವರ ಆಶ್ರಯದಲ್ಲಿ,ರಾಘು ಟಿ.ಎನ್ ಹಾಗೂ ವಾಸು ಪ್ರಕಾಶ್ ಸಾರಥ್ಯದಲ್ಲಿ ನವೆಂಬರ್ 9,10 ರಂದು ಎರಡನೇ ಆವೃತ್ತಿಯ ಬಿ‌.ಎಸ್.ವೈ ಕಪ್ ಪಂದ್ಯಾಕೂಟ ತಿಪಟೂರಿನ ಕಲ್ಪತರು ಸ್ಟೇಡಿಯಂ ನಲ್ಲಿ ಎರಡು ದಿನಗಳ‌ ಕಾಲ ಹಗಲಿನಲ್ಲಿ ನಡೆಯಲಿದೆ.

ತಿಪಟೂರು ಪರಿಸರದ ಒಟ್ಟು 9 ಫ್ರಾಂಚೈಸಿಗಳು ಪ್ರತಿಷ್ಟಿತ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದು,ರಾಜ್ಯದ ಪ್ರಸಿದ್ಧ ನ್ಯಾಶ್, ಫ್ರೆಂಡ್ಸ್, ಜೈ ಕರ್ನಾಟಕ, M.B.C.C,ಮೈಟಿ ಬೆಂಗಳೂರು ಹಾಗೂ ಕರಾವಳಿಯ ತಂಡಗಳಾದ ರಿಯಲ್ ಫೈಟರ್ಸ್ ಹಾಗೂ ಜಾನ್ಸನ್ ಕುಂದಾಪುರ ತಂಡಗಳ ಪ್ರಮುಖ 27 ಆಲ್ ರೌಂಡರ್ ಗಳ ಪೈಕಿ,ತಲಾ ಮೂವರು ಐಕಾನ್ ಆಟಗಾರರ ರೂಪದಲ್ಲಿ ಒಂದೊಂದು ಫ್ರಾಂಚೈಸಿಗಳನ್ನು ಪ್ರತಿನಿಧಿಸಲಿದ್ದು, ಜೊತೆಯಾಗಿ ತುಮಕೂರು,ತಿಪಟೂರು,ಮಧುಗಿರಿ ಹಾಗೂ ಕೊರಟಗೆರೆ ಪರಿಸರದ ಯುವ ಪ್ರತಿಭೆಗಳಿಂದ ಕೂಡಿದ ತಂಡಗಳ ಪ್ರಬಲ ಪೈಪೋಟಿಗೆ ಕಲ್ಪತರು ಅಂಗಣ ಸಾಕ್ಷಿಯಾಗಲು ಸಜ್ಜಾಗಿ‌ ನಿಂತಿದೆ.

ಪ್ರಶಸ್ತಿ ವಿಜೇತ ತಂಡ 2 ಲಕ್ಷ ನಗದು,ರನ್ನರ್ಸ್ ತಂಡ 1 ಲಕ್ಷ ನಗದಿನ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ಇನ್ನಿತರ ವಿಶೇಷ ಪ್ರಶಸ್ತಿಗಳು ವೈಯಕ್ತಿಕ ಶ್ರೇಷ್ಠ ಪ್ರದರ್ಶನ ತೋರಿದ ಆಟಗಾರರಿಗೆ ನೀಡಲಾಗುತ್ತಿದೆ.

ಕೆಲದಿನಗಳ ಹಿಂದೆ ನಡೆದ ಆಕ್ಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ರಾಜ್ಯದ ಹಿರಿಯ ಪ್ರಸಿದ್ಧ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ಪಂದ್ಯಾಕೂಟದ ವೀಕ್ಷಕ ವಿವರಣೆಯ ನೇತೃತ್ವ ವಹಿಸಲಿದ್ದು,M.Sports ನೇರ ಪ್ರಸಾರವನ್ನು ಬಿತ್ತರಿಸಲಿದೆ ಎಂದು ಪಂದ್ಯಾಕೂಟ ವ್ಯವಸ್ಥಾಪಕ ಸಮಿತಿ “ಸ್ಪೋರ್ಟ್ಸ್ ಕನ್ನಡ” ಕ್ಕೆ ತಿಳಿಸಿದ್ದಾರೆ.

ಆರ್.ಕೆ.ಆಚಾರ್ಯ ಕೋಟ

Exit mobile version