SportsKannada | ಸ್ಪೋರ್ಟ್ಸ್ ಕನ್ನಡ

ವಿಶ್ವಮಾನ್ಯತೆಯ ಸಾಧನೆಯ ಪುಟವನ್ನು ಸೇರಿದ ವಿರಾಟ್ ಕೊಹ್ಲಿಯ ವಿಶಿಷ್ಟ ಕಲಾಕೃತಿ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಿತ್ರಪಾಡಿ ಗ್ರಾಮದ ಕಾರ್ತಟ್ಟು ಇಲ್ಲಿನ ಸುಬ್ರಾಯ ಆಚಾರ್ ಹಾಗೂ ಸುಶೀಲ ದಂಪತಿಯ ಹಿರಿಯ ಪುತ್ರರಾದ ನಾಗೇಶ್ ಆಚಾರ್ಯ ಕೋಟ ಎಂಬ ಇವರು ಇತ್ತಿಚಿಗೆ ತೆಂಗಿನ ಗರಿಯಲ್ಲಿ ರಚಿಸಿದ ಭಾರತೀಯ ಕ್ರಿಕೆಟ್‌ ತಾರೆಯಾದ ವಿರಾಟ್ ಕೊಹ್ಲಿಯ ಕಲಾಕೃತಿಯು Exclusive World Records ಹಿರಿಮೆಗೆ ಪಾತ್ರವಾಗಿದೆ.
ಶ್ರೀಯುತ ನಾಗೇಶ್ ಆಚಾರ್ಯ ಇವರು  ಸ್ವಂತ ಮರದ ಕೆತ್ತನೆಯ ಶಿಲ್ಪಕಲಾ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ತನ್ನ ವೃತ್ತಿ ಬದುಕಿನ ಬಿಡುವಿನ ವೇಳೆಯಲ್ಲಿ ಎಳೆಯ ವಯಸ್ಸಿನಲ್ಲಿ ಆಸಕ್ತಿ ಹೊಂದಿದ್ದ ಚಿತ್ರಕಲೆಯನ್ನೇ ನೆಚ್ಚಿನ ಹವ್ಯಾಸವಾಗಿ ಮುಂದುವರಿಸಿಕೊಂಡು ತನ್ನೊಳಗಿನ ಕಲಾ ಕುಸುಮವು  ಹೊಸತನದಿ ಅರಳುವಂತೆ ಪ್ರಯತ್ನಿಸಲು ಆರಂಭಿಸಿದರು. ಮೊದಮೊದಲು ಪೆನ್ಸಲ್ ಆರ್ಟ್ ರಚಿಸುತ್ತಿದ್ದ ಇವರ ಪ್ರತಿಭೆಯು ಮತ್ತಷ್ಟು ಪರಿಪಕ್ವಗೊಳ್ಳುತ್ತ ಪೇಪರ್ ಕಟ್ಟಿಂಗ್ ಆರ್ಟ್ , ಲೀಫ್ ಆರ್ಟ್ ಗಳಾಗಿ ಮುಂದುವರಿದು ಸಾಕಷ್ಟು  ಯಶಸ್ವಿ ಕಲಾಕೃತಿಗಳು ಇವರ ಕರದಿಂದ  ರಚಿತಗೊಂಡಿದೆ. ಅಶ್ವಥ ಎಲೆಯಲ್ಲಿ ಹಲವಾರು ಸಾಧಕರ ಚಿತ್ರವನ್ನು , ದೈವ ದೇವರುಗಳ ಚಿತ್ರಕೆಯನ್ನು ರಚಿಸಿದ್ದಾರೆ. ಬಾಳೆ ಎಲೆಯಲ್ಲಿ ವಿಶೇಷವಾಗಿ ರಚಿತಗೊಂಡ ಗಣಪತಿ ಚಿತ್ರಿಕೆ ಹಾಗೂ ಮೊಳೆ ಹಾಗೂ ದಾರದ ಸಹಾಯದಿಂದ ವಿಶೇಷವಾಗಿ ರಚಿಸಲ್ಪಟ್ಟ ಪುನಿತ್ ರಾಜ್ ಕುಮಾರ್ ಅವರ ಚಿತ್ರಿಕೆ ಜನಮನ್ನಣೆಯನ್ನು ಗಳಿಸಿದೆ. ಇತ್ತೀಚಿಗಷ್ಟೆ ತೆಂಗಿನ ಗರಿಯಲ್ಲಿ ಕೇವಲ 9 ನಿಮಿಷಗಳ ಅವಧಿಯಲ್ಲಿ ರಚಿಸಿದ ಭಾರತೀಯ ಕ್ರಿಕೆಟ್‌ ತಾರೆ ವಿರಾಟ್ ಕೊಹ್ಲಿಯ ಕಲಾಕೃತಿಯನ್ನು  I.S.O ದಿಂದ ಪ್ರಮಾಣೀಕೃತ ಗೊಂಡಿರುವ LB exclusive talent & creation co. ಎಂಬ ಉತ್ತರ ಪ್ರದೇಶದ ಬರೇಲಿಯಾದ ಸಂಸ್ಥೆಯಿಂದ ಆಯ್ಕೆಗೊಳ್ಳುವ   ಪ್ರತಿಷ್ಠಿತ Exclusive World Records ಗೆ ಕಳುಹಿಸಲಾಗಿದ್ದು ,
ಇವರ ಕಲಾಪ್ರತಿಭೆಯ ನೈಪುಣ್ಯತೆಯನ್ನು ಪರಾಮರ್ಶಿಸಿ ಅರ್ಹವಾಗಿ ಇವರಿಂದ ರಚಿತಗೊಂಡ ಕಲಾಕೃತಿಯು exclusive world records ಪಟ್ಟಿಗೆ  ನಾಮಾಂಕಿತಗೊಂಡಿದೆ.
Exit mobile version