SportsKannada | ಸ್ಪೋರ್ಟ್ಸ್ ಕನ್ನಡ

ನ್ಯಾಶ್ ಬೆಂಗಳೂರು ತೆಕ್ಕೆಗೆ ಮಾನ್ಸೂನ್ ರೈನಿ ಕಪ್-2019

ಬೆಂಗಳೂರಿನ : ಜೆ.ಪಿ ಪಾರ್ಕ್ ಮತ್ತಿಕೆರೆಯ ಅಂಗಣದಲ್ಲಿ, ತುಂತುರು ಮಳೆ ಹನಿಯ ಸ್ಪರ್ಶ ಸವರಿ ಒದ್ದೆಯಾಗಿದ್ದ ಪಿಚ್ ನಲ್ಲಿ, ಬಣ್ಣ ಬಣ್ಣದ ಸ್ಲೀವ್ಲೆಸ್ ಧಿರಿಸುಗಳನ್ನು ಧರಿಸಿ, ಎರಡು ದಿನಗಳ ಕಾಲ ಹಗಲಿನಲ್ಲಿ ನಡೆದ “ಮಾನ್ಸೂನ್ ರೈನಿ ಕಪ್-2019” ನಲ್ಲಿ ಬೆಂಗಳೂರಿನ ನ್ಯಾಶ್ ತಂಡ ಜೆ.ಸಿ.ಸಿ ತಂಡವನ್ನು ಸೋಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಲೀಗ್ ಹಂತದ ಕುತೂಹಲಕಾರಿ ಕದನದ ಬಳಿಕ ಶನಿವಾರ,ಶ್ರೀನಿವಾಸಪುರ ಪ್ರಿಮಿಯರ್ ಲೀಗ್ ನ ಮಾಸ್ಟರ್ ಮೈಂಡ್ ಕಾರ್ತಿಕ್ ರೆಡ್ಡಿ ಜಾಕಿ ನೇತೃತ್ವದ ಜೆ.ಸಿ.ಸಿ ತಂಡ ಸ್ಟ್ರೈಕರ್ಸ್ ಬೆಂಗಳೂರು ತಂಡವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿತ್ತು. ದ್ವಿತೀಯ ಸೆಮಿಫೈನಲ್ ನಲ್ಲಿ ನ್ಯಾಶ್ ತಂಡ ಎಸ್.ಝಡ್‌‌.ಸಿ‌.ಸಿ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿದ್ದವು.

ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯಾಶ್ ತಂಡ ಜಾನ್ 18 ರನ್ ಗಳ‌ ಅಮೂಲ್ಯ ಕಾಣಿಕೆಯ ನಡುವೆ ಜೆ.ಸಿ.ಸಿ ಯ ಸಚಿನ್ ಮಹಾದೇವ್ ಹ್ಯಾಟ್ರಿಕ್ ನ ನಡುವೆಯೂ ದಿಟ್ಟವಾಗಿ ಆಡಿ,6 ಓವರ್ ಗಳಲ್ಲಿ 45 ರನ್ ನ ಗುರಿಯನ್ನು ಜೆ‌.ಸಿ.ಸಿ ಗೆ ನೀಡಿತ್ತು. ಸವಾಲಿನ ಮೊತ್ತ ಬೆಂಬತ್ತಿದ ಜೆ.ಸಿ.ಸಿ ತಂಡ ಹಠಾತ್ ಬ್ಯಾಟಿಂಗ್ ಕುಸಿತ ಕಂಡು ಕೇವಲ 23 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು.

ವಿಜೇತ ನ್ಯಾಶ್ ತಂಡ 30,000 ನಗದು,ರನ್ನರ್ಸ್ ತಂಡ 15,000 ನಗದಿನ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.ನ್ಯಾಶ್ ನ ಅಕ್ಷಯ್ ಸಿ.ಕೆ ಹಾಗೂ ಅಪೆಕ್ಸ್ ಕ್ರಮ ವಾಗಿ ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದುಕೊಂಡರೆ,ಜೆ.ಸಿ.ಸಿ ತಂಡದ ನವೀನ್ ರಾಮ್ಸ್ ಅರ್ಹವಾಗಿ ಸರಣಿಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೈ ಕರ್ನಾಟಕದ ಹಿರಿಯ ಆಲ್ ರೌಂಡರ್ಆ ರ್.ಮನೋಹರ್ (H.A.L),ಫ್ರೆಂಡ್ಸ್ ತಂಡದ ಮಾಲೀಕ ರೇಣು ಗೌಡರ ಅನುಜ ಕಿರಣ್ ಗೌಡ, ಡಿ.ವಿ.ಆರ್ ಸೀನಣ್ಣ, ಸಿಂಗಾಪುರ ಪ್ರಭಾ ಗೌಡ ಬೆಂಗಳೂರು ಜೊತೆಯಾಗಿ ಕೋಟ ರಾಮಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭ ಪಂದ್ಯಾಕೂಟವನ್ನುದ್ದೇಶಿ ಮಾತನಾಡಿದ ಮನೋಹರ್ ರವರು “ಮಳೆಯ ನಡುವೆ ಅತ್ಯುತ್ತಮ ಪ್ರದರ್ಶನ ತೋರಿದ ತಂಡಗಳು ಮುಂದಿನ ದಿನಗಳಲ್ಲಿ ಒತ್ತಡದ ಪರಿಸ್ಥಿತಿಗಳನ್ನು ಎದುರಿಸುವ ಕೌಶಲ್ಯವನ್ನು ಮೈ ಗೂಡಿಸಿಕೊಳ್ಳುತ್ತಾರೆ”ಎನ್ನುತ್ತಾ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡು ಇತಿಹಾಸ ಸೃಷ್ಟಿಸುತ್ತಿರುವ “ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ನ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಮೊದಲ ಆವೃತ್ತಿಯ ರೈನಿ ಕಪ್ ಪಂದ್ಯಾಕೂಟದ ಯಶಸ್ಸಿನಲ್ಲಿ M.Sports ನ ಸಚಿನ್ ಮಹಾದೇವ್,SRB ಸ್ಪೋರ್ಟ್ಸ್ ನ ಸಾಗರ್ ಭಂಡಾರಿ,M.K.S ಗ್ರೂಪ್ ನ ಮಾಲೀಕ ನದೀಮ್ ಅಖ್ತರ್, “ಸ್ಪೋರ್ಟ್ಸ್ ಕನ್ನಡ” ಪ್ರಾಯೋಜಕತ್ವದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿತ್ತು.

ಈ ಪಂದ್ಯಾಕೂಟದ ನೇರ ಪ್ರಸಾರವನ್ನು M.Sports ವಿಶ್ವದಾದ್ಯಂತ ಬಿತ್ತರಿಸಿತ್ತು. ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ವಿಶಿಷ್ಟ ಸಂಜ್ಞೆಗಳ ಮೂಲಕ ನಿಖರ ತೀರ್ಪನ್ನು ನೀಡುತ್ತಾ ಕ್ರೀಡಾಭಿಮಾನಿಗಳನ್ನು ರಂಜಿಸಿದರು.

– ಆರ್‌.ಕೆ.ಆಚಾರ್ಯ ಕೋಟ

Exit mobile version