Site icon SportsKannada ಸ್ಪೋರ್ಟ್ಸ್ ಕನ್ನಡ

ಬೆಂಗಳೂರು-ಮೊಗವೀರ ಸಂಘ ಬೆಂಗಳೂರು(ನೋಂ) ಆಯೋಜನೆಯಲ್ಲಿ ಅದ್ಧೂರಿಯ ಕ್ರೀಡಾ ಹಬ್ಬ

ಮೊಗವೀರ ಸಂಘ, ಬೆಂಗಳೂರು (ನೋಂ) ಹಮ್ಮಿಕೊಂಡಿರುವ ಕ್ರೀಡಾಕೂಟದ ಮುಂದುವರಿದ ಭಾಗವಾಗಿ ಫೆಬ್ರವರಿ 20 ರಂದು ನಲವತ್ತು ವರ್ಷ ಮೇಲ್ಪಟ್ಟವರಿಗಾಗಿ ಲೆಜೆಂಡ್ಸ್ ಕಪ್, ಪುರುಷರಿಗಾಗಿ ವಾಲಿಬಾಲ್ ಕಪ್,ಮಹಿಳೆಯರಿಗಾಗಿ ತ್ರೋಬಾಲ್ ಕಪ್  ಆಯೋಜನೆಯಾಗಿದ್ದು ಎಲ್ಲಾ ಪಂದ್ಯಾವಳಿಗಳು ಜೆ.ಪಿ ನಗರದ ವಿ.ಇ.ಟಿ ಮೈದಾನದಲ್ಲಿ ನಡೆಯಲಿದೆ.
 ಫೆಬ್ರವರಿ 26 ಮತ್ತು 27 ರಂದು ಹೆಚ್.ಎಂ.ಟಿ ಮೈದಾನದಲ್ಲಿ ಮೊಗವೀರ ಪ್ರೀಮಿಯರ್ ಲೀಗ್ ನಡೆಯಲಿದ್ದು 16 ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ಪ್ರೀಮಿಯರ್‌ ಲೀಗ್ ಪಂದ್ಯಾವಳಿಯು ಎಂ.ಸ್ಫೋರ್ಟ್ಸ್ ಯು ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ ಎಂದು ಕ್ರೀಡಾಕೂಟದ ಸಂಚಾಲಕರಾದ ಚಂದ್ರಶೇಖರ್ ಎಸ್ ತಿಳಿಸಿದ್ದಾರೆ.
Exit mobile version