SportsKannada | ಸ್ಪೋರ್ಟ್ಸ್ ಕನ್ನಡ

ಮಾರುತಿ ಯುವಕ ಮಂಡಲ ವತಿಯಿಂದ ಕೊರೋನಾ ಲಾಕ್ಡೌನ್ ಸಂತ್ರಸ್ತರಿಗೆ ನೆರವು

ಮೊಟ್ಟ ಮೊದಲ ಮಹಿಳಾಮಣಿ ವೀರರಾಣಿ ಅಬ್ಬಕ್ಕಳ ಕರ್ಮಭೂಮಿ ಸುಂದರ ನೆಲ ಉಳ್ಳಾಲ ಇಲ್ಲಿನ ಮಾರುತಿ ಯುವಕ ಮಂಡಲ(ರಿ) ಇದೀಗ ಕೊರೋನ ವೈರಸ್ ನ ಲಾಕ್ ಡೌನ್ ನ ಈ ಸಂದರ್ಭದಲ್ಲಿ ಕೆಲಸ ಇಲ್ಲದೆ ಪರದಾಡುವ ಕಾರ್ಮಿಕ ವರ್ಗ, ಕೂಲಿಯನ್ನೇ ಅವಲಂಬಿಸಿದ್ದ ಕೂಲಿ ಕಾರ್ಮಿಕರು, ಕುಶಲಕರ್ಮಿಗಳು, ಉದ್ಯೋಗರಹಿತರು, ಅಶಕ್ತರಿಗೆ ತಮ್ಮ ತಂಡದ ವತಿಯಿಂದ ಸೇವೆ ಸಲ್ಲಿಸುತ್ತಿರುವ ಇವರು ಈ ವರೆಗೆ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿಗಳನ್ನು ಉಳ್ಳಾಲ ವಲಯದ ಎಲ್ಲಾ ಧರ್ಮದ ಸುಮಾರು 800 ಕುಟುಂಬಗಳಿಗೆ ಮಾರುತಿ ಮಹಿಳಾ ಮಂಡಳಿಯ ಸಹಯೋಗದೊಂದಿಗೆ ನೀಡಿ ಸಹಕರಿಸಿದ್ದಾರೆ.
1985 ರಲ್ಲಿ ಶ್ರೀ ವೀರ ಮಾರುತಿ ಗೇಮ್ಸ್ ಟೀಮ್ ಎಂಬ ಹೆಸರಿನಿಂದ ಆರಂಭಗೊಂಡ ಈ ತಂಡ ಕಾಲಕ್ರಮೇಣ ತನ್ನ ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ ಯೋಜನೆಯಡಿ ಮಾರುತಿ ಯುವಕ ಮಂಡಲ (ರಿ) ಮತ್ತು ಮಾರುತಿ ಕ್ರಿಕೆಟರ್ಸ್ (ರಿ) ಎಂಬ ಹೆಸರಿನಿಂದ ಮುಂದುವರಿದಿದೆ.
ಕ್ರೀಡೆ, ಸಮಾಜ ಸೇವೆ, ಕಲೆ ಸಾಹಿತ್ಯ ಶಿಕ್ಷಣ ಆರೋಗ್ಯ ಕ್ಷೇತ್ರ ಹೀಗೆ ಹತ್ತು ಹಲವು ಯೋಜನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಾ ಇದೆ.
ಸರಕಾರದ ಮನ್ನಣೆ ಸಹಕಾರ ಲಭಿಸಬೇಕಾದರೆ ಯುವಕ ಮಂಡಲ ಎಂಬ ಹೆಸರು ಅನಿವಾರ್ಯ ಎಂದು ಮನಗಂಡು “ಮಾರುತಿ ಯುವಕ ಮಂಡಲ” ಎಂದು ಹೆಸರು ಪಡೆದಿದೆ.
ಧಾರ್ಮಿಕ ಸೇವೆ, ಸಾಂಸ್ಕೃತಿಕ ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣನೀಯರಿಗೆ ಸನ್ಮಾನ.
ಮಾನಸಿಕ ಅಸ್ವಸ್ಥರಿಗೆ, ಅನಾರೋಗ್ಯ ಪೀಡಿತರಿಗೆ, ವಿಕಲಚೇತನರಿಗೆ, ಆಸ್ಪತ್ರೆಯಲ್ಲಿ ದಾಖಲಾಗಿರುವ ಬಡರೋಗಿಗಳ ವೈದ್ಯಕೀಯ ವೆಚ್ಚವನ್ನು ಭರಿಸುವ ಮೂಲಕ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.
ಕಡಲ್ಕೊರೆತದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಮನೆ ನಿರ್ಮಾಣ
ಬಡ ಹೆಣ್ಣು ಮಕ್ಕಳ ಮದುವೆ
ಪ್ರಕೃತಿ ವಿಕೋಪದಿಂದ ಬಳಲಿದವರಿಗೆ ಸಹಾಯ
ಉಚಿತ ಟ್ಯೂಷನ್, ಕಂಪ್ಯೂಟರ್,   ಆರೋಗ್ಯ ಶಿಬಿರ
ಉಳ್ಳಾಲ ಆಸುಪಾಸಿನ ವಿವಿಧ ಶಾಲೆಗಳಿಗೆ ನೆರವು
ರಕ್ತದಾನ ಶಿಬಿರ ಇಂತಹ ಹಲವು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ.
ಅಷ್ಟೇ ಅಲ್ಲದೆ ಇದು ಕ್ರಿಕೆಟ್ ನ ಬಲಿಷ್ಠ ತಂಡ ಹೊಂದಿದ್ದು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅನೇಕ ಕ್ರೀಡಾಪಟುಗಳನ್ನು ಕೊಟ್ಟ ಹಿರಿಮೆ.
ಸಂಸ್ಥೆಯ ಅನೇಕ ಸದಸ್ಯರು ಫುಟ್ಬಾಲ್ ಆಟಗಾರಾಗಿದ್ದು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆಡಿದ ಕೀರ್ತಿ ಇವರಿಗೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವತಿಯಿಂದ ನಡೆಸಲಾದ ಹಾರ್ಡ್ ಬಾಲ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ ಹಿರಿಮೆ ಈ ತಂಡಕ್ಕೆ. ತಂಡವನ್ನು ಮುನ್ನಡೆಸುವ ಹೆಮ್ಮೆಯ ರೂವಾರಿಗಳಾಗಿ ಸುಧೀರ್ ಉಳ್ಳಾಲ, ಅಶ್ವಥ್, ದಿನೇಶ್ ಕರ್ಕೇರ, ವರದರಾಜ್, ಚರಣ್, ಕಿರಣ್, ವಾಸುದೇವ್, ಪ್ರಕಾಶ್, ಅಮರನಾಥ್, ಹರೀಶ್, ಸಂದೀಪ್,  ಇವರುಗಳು.
ಇಷ್ಟೆಲ್ಲಾ ಸಾಧನೆ ಮಾಡಿದ ಇದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಂಡ ಅನ್ನುವ ಹಿರಿಮೆ ಕೂಡ ಇದೆ.
ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಮಾಡುವ ಉದ್ದೇಶ ಹೊಂದಿರುವ ಈ ತಂಡದ ಕೆಲವು ಯೋಜನೆಗಳು :
ಕ್ಯಾನ್ಸರ್, ಹೃದ್ರೋಗ ಸಂಬಂಧಿ ಕಾಯಿಲೆಯವರಿಗೆ ಸಹಕಾರ
ನೇತ್ರದಾನವನ್ನು ಹೆಚ್ಚು ಪ್ರಚಾರ ಮಾಡುವುದು
ಚಾರಿಟೇಬಲ್ ಟ್ರಸ್ಟ್ ಮಾಡಿ ಸೇವಾ ಕಾರ್ಯಗಳನ್ನು ಕ್ರಮಬದ್ಧವಾಗಿ ಮಾಡುವುದು
ಸಹಕಾರಿ ಸಂಘ ಸ್ಥಾಪಿಸಿ ಯುವ ಮನಸ್ಸುಗಳನ್ನು ಒಗ್ಗೂಡಿಸಿ ಬಲಿಷ್ಠ ತಂಡ ಮಾಡುವುದು.
ಇಷ್ಟೆಲ್ಲಾ ಸಾಧನೆ ಮಾಡಿದ ಈ ಯುವಕ ಮಂಡಲ ಎಲ್ಲಾ ರೀತಿಯ ಸಹಕಾರದಿಂದ ಇನ್ನಷ್ಟು ಸಮಾಜಮುಖಿ ಚಿಂತನೆಗಳೊಂದಿಗೆ ಕೆಲಸ ಮಾಡಿ ಇನ್ನೂ ಹೆಚ್ಚಿನ ಹೆಸರು ಪಡೆಯಲಿ ಇದು ನಮ್ಮ ಹಾರೈಕೆ.
ಕೋಟ ರಾಮಕೃಷ್ಣ ಆಚಾರ್ಯ
Exit mobile version