SportsKannada | ಸ್ಪೋರ್ಟ್ಸ್ ಕನ್ನಡ

ಮಂಗಳೂರು ನೆಹರೂ ಮೈದಾನದಲ್ಲಿ ಇಂದಿನಿಂದ ಮಾರುತಿ ಟ್ರೋಫಿ ಅಖಿಲ ಭಾರತ ಮಟ್ಟದ ಕ್ರಿಕೆಟ್ ಪಂದ್ಯಾಟ

ಮಂಗಳೂರು-ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಮಾಜ ಸೇವಾ ನಿರತ ಸಂಸ್ಥೆ ಮಾರುತಿ ಕ್ರಿಕೆಟರ್ಸ್ ಮತ್ತು ಮಾರುತಿ ಯುವಕ ಮಂಡಲ(ರಿ) ಇವರ ಆಶ್ರಯದಲ್ಲಿ ಅಗಲಿದ ಮಿತ್ರರ ಸ್ಮರಣಾರ್ಥ ಹಾಗೂ 35  ನೇ ವಾರ್ಷಿಕೋತ್ಸವದ ಅಂಗವಾಗಿ ಅಖಿಲ ಭಾರತ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಂಡಿದ್ದು,ಇಂದಿನಿಂದ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ಪ್ರಾರಂಭವಾಗಲಿದೆ.
ಬುಧವಾರ ಬೆಳಿಗ್ಗೆಯಿಂದಲೇ ಮಂಗಳೂರು ನೆಹರೂ ಮೈದಾನದಲ್ಲಿ ನಡೆದ ಮೊಗವೀರ ಪ್ರೀಮಿಯರ್ ಲೀಗ್ ಪಂದ್ಯಾಟದಲ್ಲಿ ರಿಯಲ್ ಫೈಟರ್ಸ್ ಮಲ್ಪೆ ಮತ್ತು ಮೊಗವೀರ ಇಲೆವೆನ್ ಉಳ್ಳಾಲ ಫೈನಲ್ ಪ್ರವೇಶಿಸಿದೆ.
ಇಂದು ಫೆಬ್ರವರಿ 17 ಶುಕ್ರವಾರದಿಂದ ರಾಷ್ಟ್ರೀಯ ಮಟ್ಟದ ಪಂದ್ಯಕ್ಕೆ ಚಾಲನೆ ದೊರಕಿದ್ದು,ಒಟ್ಟು 16 ತಂಡಗಳು ಭಾಗವಹಿಸಲಿದೆ.ಮೊದಲ ಪಂದ್ಯದಲ್ಲಿ ರಾಮಾಂಜನೇಯ ಗುಡ್ಡೆಕೊಪ್ಲ-ಆರ್.ಕೆ ಗುಡ್ಡೆಕೊಪ್ಲ ತಂಡವನ್ನು ಮಣಿಸಿತ್ತು.ದ್ವಿತೀಯ ಪಂದ್ಯದಲ್ಲಿ ಜೈಹಿಂದ್ ಶಿವಮೊಗ್ಗ-ಫ್ರೆಂಡ್ಸ್ ಕೋಡಿ ಹಾಗೂ ಮೂರನೇ ಪಂದ್ಯದಲ್ಲಿ ಜಾನ್ಸನ್ ಕುಂದಾಪುರ-ಆಜಾದ್ ಕಲ್ಲಾಪು  ತಂಡವನ್ನು ಎದುರಿಸಲಿದ್ದು ಒಟ್ಟು 8 ಪಂದ್ಯಗಳು ನಡೆಯಲಿದೆ.16 ತಂಡಗಳು ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಸೆಣಸಾಡಲಿದೆ.ಪ್ರತಿ ಬಣದಲ್ಲಿ 4 ತಂಡಗಳಿದ್ದು,ಆ ತಂಡಕ್ಕೆ 2 ಲೀಗ್ ಆಡಲು ಅವಕಾಶವಿದ್ದು,  ಒಂದು ಗ್ರೂಪಿಂದ 2 ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ತೇರ್ಗಡೆಯಾಗಲಿದೆ.ಕ್ವಾರ್ಟರ್ ಫೈನಲ್ ವಿಜೇತ ತಂಡಗಳ ನಡುವೆ ಅದೃಷ್ಟ ಚೀಟಿಯ ಮೂಲಕ ಸೆಮಿಫೈನಲ್ ಮುಖಾಮುಖಿ ನಿರ್ಧರಿಸಲಾಗುತ್ತದೆ.
*ಸಂಜೆ ವರ್ಣರಂಜಿತ ಉದ್ಘಾಟನಾ ಸಮಾರಂಭ ಮತ್ತು ಸಹಾಯಧನ ವಿತರಣಾ ಸಮಾರಂಭ*
ಇಂದು ಸಂಜೆ 6.30 ಸರಿಯಾಗಿ ರಾಷ್ಟ್ರೀಯ ಮಟ್ಟದ ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ ದೊರಕಲಿದೆ.ದ.ಕ ಜಿಲ್ಲೆ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಐ.ಪಿ.ಎಸ್ ಇವರು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ‌.ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಟ್ರೋಫಿ ಅನಾವರಣಗೊಳಿಸಲಿದ್ದು,
ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶಪಾಲ್.ಎ.ಸುವರ್ಣ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್,ಬೆಣ್ಣೆಕುದ್ರು ಕುಲಮಾಸ್ತಿ ಅಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಆನಂದ.ಸಿ.ಕುಂದರ್,ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಜಯಾನಂದ ಅಂಚನ್,ನಿವೃತ್ತ ಸುಪೀರಿಡೆಂಟ್ ಆಫ್ ಪೊಲೀಸ್ ಜಯಂತ್.ವಿ.ಶೆಟ್ಟಿ, ಸಾಯಿನಾಥ್ ಫಿಶರೀಸ್ ನ ಆಡಳಿತ ನಿರ್ದೇಶಕರಾದ ಆನಂದ ಸುವರ್ಣ ಮಲ್ಪೆ,ಮಲ್ಪೆ ಮೀನು ಮಾರಾಟ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಸಾಧು ಸಾಲ್ಯಾನ್,ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಶೀದ್,ಬ್ಲೂ ಲೈನ್ ಫುಡ್ಸ್ ಇಂಡಿಯಾ ಪ್ರೈವೇಟ್ ಲಿ ನ ಆಡಳಿತ ನಿರ್ದೇಶಕರಾದ ಶೌಕತ್ ಶೌರಿ,ದ.ಕ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಮಹಾಬಲ ಮಾರ್ಲ,ಮಾರುತಿ ಕ್ರಿಕೆಟರ್ಸ್ ಉಳ್ಳಾಲದ ಮಾಜಿ ಅಧ್ಯಕ್ಷ ಜನಾಬ್ ಹೆಚ್.ಎಸ್.ನಿಸಾರ್ ಬರಕಾ,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷ ಶರತ್ ಶೆಟ್ಟಿ ಪಡುಬಿದ್ರಿ,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್, ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವ್ಯವಸ್ಥಾಪಕರಾದ ಕೋಟ ರಾಮಕೃಷ್ಣ ಆಚಾರ್ ಮತ್ತು ಮಾರುತಿ ಯುವಕ ಮಂಡಲ(ರಿ)ಅಧ್ಯಕ್ಷ ವರದರಾಜ್ ಬಂಗೇರ ಮತ್ತು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ  ಅಶಕ್ತರಿಗೆ ಸಹಾಯಧನ ವಿತರಣೆ ನಡೆಯಲಿದೆ‌.M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
Exit mobile version