
ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಟ್ರಸ್ಟ್‌ಗೆ ನೂತನ ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ ಆಯ್ಕೆ
ಸುರತ್ಕಲ್: ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಸಮಾಲೋಚನಾ ಸಭೆಯು ಸುರತ್ಕಲ್ ಸೂರಜ್ ಹೋಟೆಲ್‌ನಲ್ಲಿ, ಕ್ಲಬ್‌ನ ಮಹಾಪೋಷಕರಾದ ವಿರಾಜಪೇಟೆ ಪೋಲಿಸ್ ಸಹಾಯಕ ಆಯುಕ್ತ ಎಸ್. ಮಹೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಮಾಜಮುಖಿ ಚಟುವಟಿಕೆಗಳಿಗೆ ಒತ್ತು ನೀಡುವ ಉದ್ದೇಶದಿಂದ ಟ್ರಸ್ಟ್ ನ ಹೊಸ ರಚನೆಗೆ ನಿರ್ಧಾರ ಕೈಗೊಳ್ಳಲಾಯಿತು. ಇದರಡಿ ಮಹಾಪೋಷಕರಾಗಿ ಎಸ್. ಮಹೇಶ್ ಕುಮಾರ್ ಮತ್ತು ಮಹಾಬಲ ಪೂಜಾರಿ ಕಡಂಬೋಡಿ ಅವರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ, ಸದಸ್ಯರಾಗಿ ನಾಗರಾಜ್ ಕಡಂಬೋಡಿ, ಸಂತೋಷ್ ಬೇಕಲ್, ಪುಷ್ಪರಾಜ್ ಶೆಟ್ಟಿ ಮಧ್ಯ, ಕುಶಲ ಮಣಿಯಾಣಿ, ಅನಿಲ್ ಶೆಟ್ಟಿ ಸೂರಿಂಜೆ, ಸಂದೀಪ್ ಪೂಜಾರಿ, ಶಿವಪ್ರಸಾದ್, ರಾಜೇಶ್ ಮುಂಚೂರು, ಜೀವನ್ ಮತ್ತು ದಿಲೀಪ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಆಗಸ್ಟ್ 10ರಂದು ರಕ್ತದಾನ ಶಿಬಿರ ಆಯೋಜನೆ ಮಾಡಲಾಗುವುದು ಎಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಉಪಾಧ್ಯಕ್ಷರು ಮನೋಹರ ಶೆಟ್ಟಿ ಸೂರಿಂಜೆ ಹಾಗೂ ನಾಗರಾಜ್ ಕಡಂಬೋಡಿ, ಕಾರ್ಯದರ್ಶಿ ಕಿರಣ್ ಅಚಾರ್ಯ ಮತ್ತು ಕೋಶಾಧಿಕಾರಿ ಜಗದೀಪ್ ಶೆಟ್ಟಿ ಉಪಸ್ಥಿತರಿದ್ದರು.
