SportsKannada | ಸ್ಪೋರ್ಟ್ಸ್ ಕನ್ನಡ

ಮಂಗಳೂರು-ಕ್ರೀಡಾ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು-ಟೊರ್ಪೆಡೋಸ್ ಗೌತಮ್ ಶೆಟ್ಟಿ

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-2021.
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ ಇವರ ವತಿಯಿಂದ  ಮೇ ತಿಂಗಳ 1-10 ತಾರೀಕಿನವರೆಗೆ ವಿವಿಧ ಕ್ರೀಡಾಕೂಟ ಆಯೋಜಿಸಿದೆ.
ಟೊರ್ಪೆಡೋಸ್ ಲೆಜೆಂಡ್ಸ್ ಕಪ್ ಕ್ರಿಕೆಟ್ ,ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್, ಫಿಡ್ ರೇಟೆಡ್ ಚೆಸ್ ಪಂದ್ಯಾವಳಿ ಮತ್ತು ಬಾಕ್ಸ್ ಕ್ರಿಕೆಟ್.
ಫಿಡ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 1 ಮತ್ತು 2 ರಂದು ಕುಂದಾಪುರದ ಕಡಲತೀರದ ಕೊರವಾಡಿಯಲ್ಲಿ ನಡೆಯಲಿದೆ. ವಿಜೇತ ತಂಡಗಳಿಗೆ ರೂ 2 ಲಕ್ಷ ಬಹುಮಾನ ಮೊತ್ತ ಮತ್ತು ಟ್ರೋಫಿ ನೀಡಲಾಗುವುದು.
ಮೇ ತಿಂಗಳ 1 ಮತ್ತು 2 ರಂದು ಹಳೆಯಂಗಡಿಯ ಟೋರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್ ನಡೆಯಲಿದೆ. 
ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿಯಲ್ಲಿ ಮೇ 3 ರಂದು, ಲೆದರ್ ಬಾಲ್ ಕ್ರಿಕೆಟ್ ಪಂದ್ಯ ಮೇ 3-6 ರ ವರೆಗೆ ನಡೆಯಲಿದೆ.
ಫುಟ್ಬಾಲ್ ಚಾಂಪಿಯನ್ ಶಿಪ್ ಮೇ 6 ಮತ್ತು 7 ರಂದು  ಕೋಟೇಶ್ವರದ ಯುವ ಮೆರಿಡಿಯನ್ ನ ಗ್ರಾಸ್ ಕೋರ್ಟ್ ನಲ್ಲಿ ನಡೆಯಲಿದೆ.
ಮೇ 6 ರಿಂದ 10 ರವರೆಗೆ ಕ್ರಿಕೆಟ್ ಟೆನಿಸ್ ಬಾಲ್ ಪಂದ್ಯ ನಡೆಯಲಿದ್ದು ಕರ್ನಾಟಕದಿಂದ 40 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರಿಗಾಗಿ ಟೊರ್ಪೆಡೋಸ್ ಲೆಜೆಂಡ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ವೈಯಕ್ತಿಕ ನೋಂದಣಿ ಪ್ರಕ್ರಿಯೆಯೊಂದಿಗೆ ತಂಡಗಳನ್ನು ರಚಿಸಲಾಗುತ್ತದೆ. ಪಂದ್ಯದ ನಿಯಮಗಳು ಸಾಂಪ್ರದಾಯಿಕ ಆಟಕ್ಕಿಂತ ಭಿನ್ನವಾಗಿದ್ದು, ತಂಡಗಳ ಸಂಖ್ಯೆಯನ್ನು ಆಧರಿಸಿ ಪಂದ್ಯಾವಳಿಯ ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ.
ಕ್ರೀಡಾ ಪಂದ್ಯಾವಳಿಗಳು ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಪ್ರತಿ ಕ್ರೀಡಾ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ರೂ. 2 ಲಕ್ಷ ಮತ್ತು ರನ್ನರ್ಸ್ ಅಪ್ ತಂಡಕ್ಕೆ ರೂ. 1 ಲಕ್ಷ ಮತ್ತು ಟ್ರೋಫಿ ನೀಡಲಾಗುವುದು.
ಕೋವಿಡ್ ನಿಂದ ತತ್ತರಿಸಿದ ಕ್ರೀಡಾಲೋಕ ಹಾಗೂ ಕ್ರೀಡಾಪಟುಗಳಿಗೆ ಮತ್ತೆ ಚೈತನ್ಯ ಮೂಡಿಸಲು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-2021 ಹಮ್ಮಿಕೊಳ್ಳಲಾಗಿದೆ
ಎಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಗೌತಮ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ಲಬ್ ನ ಪೋಷಕರಾದ ಪ್ರತಿಭಾ ಕುಳಾಯಿ, ಟೇಬಲ್ ಟೆನಿಸ್ ಕೋಚ್ ಅಶ್ವಿನ್ ಕುಮಾರ್ ಮತ್ತು ಬ್ಯಾಡ್ಮಿಂಟನ್ ಕೋಚ್ ಗಣೇಶ್ ಕಾಮತ್ ಉಪಸ್ಥಿತರಿದ್ದರು.
Exit mobile version