SportsKannada | ಸ್ಪೋರ್ಟ್ಸ್ ಕನ್ನಡ

ಜನನಿ ಹೊಸಕೋಟೆ ತಂಡಕ್ಕೆ ಸ್ನೇಹಲೋಕ M.T.B ದಸರಾ ಕಪ್

ಸ್ನೇಹಲೋಕ ಹೊಸಕೋಟೆ ಇವರ ಆಶ್ರಯದಲ್ಲಿ 5 ನೇ ಬಾರಿಗೆ ಹೊಸಕೋಟೆಯಲ್ಲಿ ನಡೆದ “ಸ್ನೇಹ ಲೋಕ M.T.B ದಸರಾ ಕಪ್ ನ್ನು ಜನನಿ ಹೊಸಕೋಟೆ ತಂಡ ಗೆದ್ದುಕೊಂಡಿತು.

2 ದಿನಗಳ ಕಾಲ ಹಗಲಿನಲ್ಲಿ ನಡೆದ ಪಂದ್ಯಾಕೂಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಲೀಗ್ ಹಂತದ ಕುತೂಹಲಕಾರಿ ಪಂದ್ಯಗಳ ಬಳಿಕ,ಜನನಿ ತಂಡ ಸಿ‌.ಸಿ.ಸಿ ಹೊಸಕೋಟೆ ತಂಡವನ್ನು ಹಾಗೂ ಮೈಟಿ ಬೆಂಗಳೂರು ತಂಡ ಸಾಯಿ ಕ್ರಿಕೆಟರ್ಸ್ ಕೆ.ಆರ್.ಪುರಂ ತಂಡವನ್ನು ಸೋಲಿಸಿ ಫೈನಲ್ ಗೆ ತೇರ್ಗಡೆಗೊಂಡಿದ್ದರು.

ಅಂತಿಮವಾಗಿ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮೈಟಿ ತಂಡವನ್ನು, ಜನನಿಯ ಮಾರ್ಕ್ ಮಹೇಶ್ ಮೇಡನ್ ಓವರ್ ಸಾಹಸದಿಂದ ಅಲ್ಪ ಮೊತ್ತಕ್ಕೆ ಅದುಮಿ,ನೀಡಿದ್ದ ಗುರಿಯನ್ನು ಅನಾಯಾಸವಾಗಿ ಚೇಸ್ ಮಾಡಿ ವಿಜಯಿಯಾಯಿತು.

ಹೊಸಕೋಟೆ ನಗರಪಾಲಿಕೆ ಸದಸ್ಯರು ಹಾಗೂ ಜನನಿ ಚಾರಿಟೇಬಲ್ ಟ್ರಸ್ಟ್ ನ ಮಾಲೀಕರಾದ ಶ್ರೀ ಜಯರಾಜ್ ನೇತೃತ್ವದ ಜನನಿ ತಂಡವನ್ನು 90 ರ ದಶಕದ ಶ್ರೇಷ್ಠ ತಂಡದ ಲೆಗ್ ಸ್ಪಿನ್ ಮಾಂತ್ರಿಕ ಗುರುಬ್ರಹ್ಮದ ಕೃಷ್ಣಮೂರ್ತಿಯವರು ಮುನ್ನಡೆಸಿದ್ದರು ಹಾಗೂ
ಜನನಿ ತಂಡದಲ್ಲಿ ಜೈ ಕರ್ನಾಟಕದ ಆಟಗಾರರು ಪ್ರತಿನಿಧಿಸಿದ್ದರು.

ವಿಜಯಿ ತಂಡ 50,000ನಗದು ಹಾಗೂ ರನ್ನರ್ಸ್ ತಂಡ 25,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.

ಪಂದ್ಯಾಕೂಟದ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಮೈಟಿಯ ಮಂಜು, ಫೈನಲ್ ನ ಪಂದ್ಯಶ್ರೇಷ್ಟ ಹಾಗೂ ಬೆಸ್ಟ್ ಬೌಲರ್ ಮಾರ್ಕ್ ಮಹೇಶ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜನನಿಯ ಮೊಹ್ಸಿನ್ ಪಡೆದುಕೊಂಡರು.

ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಯಾಸೀನ್ ನೇತೃತ್ವದ Y ಸ್ಪೋರ್ಟ್ಸ್ ಬಿತ್ತರಿಸಿದರೆ,ರಾಜ್ಯದ ಪ್ರಸಿದ್ಧ ವೀಕ್ಷಕ ವಿವರಣೆಕಾರ ಪ್ರಶಾಂತ್ ಅಂಬಲಪಾಡಿ ವೀಕ್ಷಕ ವಿವರಣೆಯ ಸಾರಥ್ಯವನ್ನು ವಹಿಸಿದ್ದರು.

ಆರ್.ಕೆ.ಆಚಾರ್ಯ ಕೋಟ

Exit mobile version