
ಲೆಜೆಂಡ್ಸ್ ಟ್ರೋಫಿ – 2025: ನೇಜಾರು ಮೈದಾನದಲ್ಲಿ ಹಿರಿಯರ ಕ್ರಿಕೆಟ್ ಟೂರ್ನಮೆಂಟ್
ಉಡುಪಿ : ಲೆಜೆಂಡ್ಸ್ ಕ್ರಿಕೆಟರ್ಸ್, ಉಡುಪಿ ವತಿಯಿಂದ ಕ್ರಿಕೆಟಿಗರಾದ ಅಜೀಜ್ ನೇಜಾರು ಮತ್ತು ಮಿಥುನ್ ಉಡುಪಿ ಇವರ ನೇತೃತ್ವದಲ್ಲಿ ಆಯೋಜಿಸಲಾದ ” ಲೆಜೆಂಡ್ಸ್ ಟ್ರೋಫಿ – 2025″ ಕ್ರಿಕೆಟ್ ಟೂರ್ನಮೆಂಟ್ ನೇಜಾರು ಮೈದಾನದಲ್ಲಿ ಯಶಸ್ವಿಯಾಗಿ ನೆರವೇರಿತು. 40+ ಮತ್ತು 45+ ವಿಭಾಗದ 8 ಆಹ್ವಾನಿತ ತಂಡಗಳು ಈ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿವೆ.
ಈ ಟೂರ್ನಮೆಂಟ್‌ನಲ್ಲಿ ವೀರಕೇಸರಿ ಸುರತ್ಕಲ್ ತಂಡ ಶ್ರೇಷ್ಠ ಪ್ರದರ್ಶನ ನೀಡುತ್ತ ವಿನ್ನರ್ಸ್ ಟ್ರೋಫಿ ಮತ್ತು ₹25,000 ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿತು. ತಂಡದ ಪ್ರಮುಖ ಆಟಗಾರರಲ್ಲಿ ಸುರೇಂದ್ರ ತಡಂಬೈಲ್, ರಶೀದ್ ಹೆಜಮಾಡಿ, ರಫೀಕ್ ಪಡುಬಿದ್ರೆ, ಪರ್ವೇಜ್ ಉಳ್ಳಾಲ, ನಾಗು ಮೂಲ್ಕಿ ಹಾಗೂ ಅಸೀಫ್ ಪ್ರಮುಖ ಪಾತ್ರವಹಿಸಿದರು.
ಲೆಜೆಂಡ್ಸ್ ಮಲ್ಪೆ ತಂಡ ಉತ್ತಮ ಹೋರಾಟ ನೀಡುತ್ತ ರನ್ನರ್ಸ್ ಅಪ್ ಟ್ರೋಫಿ ಮತ್ತು ₹15,000 ನಗದು ಬಹುಮಾನವನ್ನು ಪಡೆದುಕೊಂಡಿತು. ಈ ತಂಡದ ಶಂಕರ್ ಶಂಕಿ , ಸತೀಶ್ ಜಿ, ಪ್ರಶಾಂತ್ ಪಡುಕೆರೆ, ಪ್ರಶಾಂತ್ ಶೆಟ್ಟಿ, ಮನೋಹರ್ ಎಕೆ ಹಾಗೂ ದಿನೇಶ್ ಮಲ್ಪೆ ಗಮನಾರ್ಹ ಪ್ರದರ್ಶನ ನೀಡಿದರು.
ವೈಯಕ್ತಿಕ ಪ್ರಶಸ್ತಿಗಳು:
ಮ್ಯಾನ್ ಆಫ್ ದ ಮ್ಯಾಚ್: ರಶೀದ್ ಹೆಜಮಾಡಿ (ಸ್ಮಾರ್ಟ್ ವಾಚ್)
ಬೆಸ್ಟ್ ಬ್ಯಾಟ್ಸಮನ್: ಸತೀಶ್ ಜಿ ಮಲ್ಪೆ (ಬ್ಯಾಟ್)
ಬೆಸ್ಟ್ ಬೌಲರ್: ನಾಗು ಮೂಲ್ಕಿ ವೀರಕೇಸರಿ (ಬ್ಯಾಟ್)
ಬೆಸ್ಟ್ ಫೀಲ್ಡರ್: ಪರ್ವೇಜ್ ಉಳ್ಳಾಲ
ಮೋಸ್ಟ್ ಸಿಕ್ಸರ್ ಆಫ್ ದ ಟೂರ್ನಮೆಂಟ್: ಸತೀಶ್ ಜಿ ಮಲ್ಪೆ
ಮೋಸ್ಟ್ ಬೌಂಡರಿ ಹಿಟ್ಟರ್: ಶಂಕರ್ ಶಂಕಿ, ಬೆಂಗಳೂರು
ಮ್ಯಾನ್ ಆಫ್ ದ ಸೀರೀಸ್: ರಶೀದ್ ಹೆಜಮಾಡಿ (ಬ್ಲೂಟೂತ್ ಸ್ಪೀಕರ್)
ನೇಜಾರು ಮೈದಾನದಲ್ಲಿ ನಡೆದ ಈ ಕ್ರಿಕೆಟ್ ಸಂಭ್ರಮದಲ್ಲಿ ಹಿರಿಯ ಆಟಗಾರರ ಉತ್ಸಾಹ ಮತ್ತು ಕ್ರೀಡಾಸ್ಫೂರ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸ್ಪೋರ್ಟ್ಸ್ ಕನ್ನಡ ಟೂರ್ನಮೆಂಟ್ ನ ಲೈವ್ ಪ್ರಸಾರ ಮಾಡಿತು
