SportsKannada | ಸ್ಪೋರ್ಟ್ಸ್ ಕನ್ನಡ

ಕುಂದಾಪುರ-ಇಂಪೀರಿಯಲ್ ರೆಸಿಡೆನ್ಸಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಂಭ್ರಮಾಚರಣೆ

75 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕುಂದಾಪುರದ ಪ್ರತಿಷ್ಠಿತ ವಸತಿ ಸಮುಚ್ಚಯ “ಇಂಪೀರಿಯಲ್ ರೆಸಿಡೆನ್ಸಿ” ಯಲ್ಲಿ ಕ್ರೀಡಾ,ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ  ವಿಶೇಷವಾಗಿ ಆಚರಿಸಲಾಯಿತು.
ಆಗಸ್ಟ್ 15 ರಂದು ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿತು.ಇಂಪೀರಿಯಲ್ ರೆಸಿಡೆನ್ಸಿ ಸಮಿತಿಯ ಹಿರಿಯ ಸದಸ್ಯರಾದ ಶ್ರೀ.ಪ್ರಕಾಶ್ ಕಾಮತ್ ಧ್ವಜಾರೋಹಣ ಮಾಡಿದರು.ಈ ಸಂದರ್ಭ ಡಾ.ರಾಜಾರಾಮ್ ಶೆಟ್ಟಿ ಹಾಗೂ ಶಿಖಾ.ಪಿ.ಶೆಟ್ಟಿ ಸ್ವಾತಂತ್ರ್ಯದ ಸಂದೇಶವನ್ನು ನೀಡಿದರು.
ವಸತಿ ಸಮುಚ್ಚಯದ ವಾಸಿಗಳು ಶ್ವೇತ,ಶುಭ್ರ ಸಮವಸ್ತ್ರ ಧರಿಸಿ ರಾಷ್ಟ್ರೀಯ ಗೀತೆಯನ್ನು ಹಾಡಿ ಸ್ವಾತಂತ್ರ್ಯ ಧ್ವಜಕ್ಕೆ ಗೌರವ ಸಲ್ಲಿಸಿದರು ಹಾಗೂ ಸಿಹಿಯನ್ನು ಹಂಚಿದರು.ಇಂಪೀರಿಯಲ್ ರೆಸಿಡೆನ್ಸಿ ಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಕ್ಕಳಿಗಾಗಿ  ಛದ್ಮವೇಷ,ಚಿತ್ರಕಲಾ ಸ್ಪರ್ಧೆ,ಮಹಿಳೆಯರಿಗಾಗಿ ಸಂಗೀತ ಕುರ್ಚಿ ಹಾಗೂ ಪುರುಷರಿಗಾಗಿ ಏರ್ಪಡಿಸಲಾದ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಫೋಟೋ ಗ್ಯಾಲರಿ 
ವಿವಿಧ ಆಟೋಟ ಸ್ಪರ್ಧೆಗಳ ವಿಜೇತರು ವಿವರ
ಷಟಲ್ ಬ್ಯಾಡ್ಮಿಂಟನ್(ಡಬಲ್ಸ್)
ಬಾಲಕಿಯರ ವಿಭಾಗ
ಪ್ರಥಮ-ನಿಶಿಕಾ.ಜಿ ಮತ್ತು ರಿಶಾ.ಆರ್.ಶೆಟ್ಟಿ
ದ್ವಿತೀಯ-ನವ್ಯಾ.ಜಿ ಮತ್ತು ಶಿಖಾ.ಪಿ.ಶೆಟ್ಟಿ
ಬಾಲಕರ ವಿಭಾಗ
ಪ್ರಥಮ-ಜೋವಿಯಲ್ ಕ್ರಾಸ್ತಾ ಮತ್ತು ಸ್ಕಂದ ಶೆಟ್ಟಿ
ದ್ವಿತೀಯ-ತನ್ಮಯ್ ಪಡ್ತಿ ಹಾಗೂ ಸಕ್ಷಮ್ ಕಾಮತ್
ಮಹಿಳೆಯ ವಿಭಾಗ
ಪ್ರಥಮ-ಜೆಸ್ಸೆಲ್ ಕ್ರಾಸ್ತಾ ಮತ್ತು ಡಿಯೋನಾ ಕ್ರಾಸ್ತಾ
ದ್ವಿತೀಯ-ಸೀಮಾ.ಪಿ.ಶೆಟ್ಟಿ ಮತ್ತು ಡಿಯೋರಾ ಕ್ರಾಸ್ತಾ
ಪುರುಷರ ವಿಭಾಗ
ಪ್ರಥಮ-ಧ್ರುವ ಶೆಟ್ಟಿ ಮತ್ತು ವಿಕ್ರಮ್.ಜಿ
ದ್ವಿತೀಯ-ಪ್ರಸನ್ನ ಶೇಟ್ ಮತ್ತು ಸುಜೇಂದ್ರ ಶೆಟ್ಟಿ
ಮಕ್ಕಳಿಗಾಗಿ ಏರ್ಪಡಿಸಿದ್ದ ಛದ್ಮವೇಷ ಸ್ವರ್ಧೆ ವಿಜೇತರು
6 ರ ವಯೋಮಿತಿ
ಪ್ರಥಮ-ತನಿಷ್ ಪಡ್ತಿ
ದ್ವಿತೀಯ-ರಿಶಿಕ್ ಶೆಟ್ಟಿ
ತೃತೀಯ-ತನಿಶ್ ಶೆಟ್ಟಿ
7 ರಿಂದ 11 ರ ವಯೋಮಿತಿ
ಪ್ರಥಮ-ಸ್ಕಂದ ಶೆಟ್ಟಿ
ದ್ವಿತೀಯ-ನವ್ಯಾ.ಜಿ.
ತೃತೀಯ-ಅದೀಪ್.ಜೆ.ಶೆಟ್ಟಿ
11 ರಿಂದ 16 ರ ವಯೋಮಿತಿ
ಪ್ರಥಮ-ರಿಶಾ.ಆರ್.ಶೆಟ್ಟಿ
ದ್ವಿತೀಯ-ರಿಶಾ.ಎನ್.ಶೆಟ್ಟಿ
ತೃತೀಯ-ತನ್ಮಯ್ ಪಡ್ತಿ
ಚಿತ್ರಕಲಾ ಸ್ಪರ್ಧೆ
5 ರ ವಯೋಮಿತಿ
ಪ್ರಥಮ-ತನಿಶ್ ಪಡ್ತಿ
ದ್ವಿತೀಯ-ತನಿಶ್.ಪಿ.ಶೆಟ್ಟಿ
ತೃತೀಯ-ರಿಶಿಕ್ ಶೆಟ್ಟಿ
6 ರಿಂದ 10 ರ ವಯೋಮಿತಿ
ಪ್ರಥಮ-ಸರ್ವದಾ ಶೆಟ್ಟಿ
ದ್ವಿತೀಯ-ನವ್ಯಾ.ಜಿ
ತೃತೀಯ-ಅದ್ವಿಕಾ.ಎ.ವೈದ್ಯ
11 ರಿಂದ 16 ರ ವಯೋಮಿತಿ
ಪ್ರಥಮ-ಶಿಖಾ ಶೆಟ್ಟಿ
ದ್ವಿತೀಯ-ರಿಶಾ.ಆರ್.ಶೆಟ್ಟಿ ಮತ್ತು ರಿಶಾ.ಎನ್.ಶೆಟ್ಟಿ
ತೃತೀಯ-ತನ್ಮಯ್ ಪಡ್ತಿ ಮತ್ತು ಜೆಸ್ಸೆಲ್‌.ಆರ್.ಕ್ರಾಸ್ತಾ.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಪ್ರಶಸ್ತಿ ವಿತರಿಸಲಾಯಿತು.ಈ ಸಂದರ್ಭ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ರಿತ್ವಿಕ್ ಶೆಟ್ಟಿ ಹಾಗೂ ರಿಧಿ ಶೆಟ್ಟಿ ಇವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು ಹಾಗೂ ಚಿತ್ರಕಲೆ ಹಾಗೂ ಛದ್ಮವೇಷ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್ಯ ಇವರನ್ನು
ಸನ್ಮಾನಿಸಲಾಯಿತು.ಡಾ.ರಾಜಾರಾಮ್ ಶೆಟ್ಟಿಯವರು ಕಾರ್ಯಕ್ರಮದ ಪ್ರಮುಖ ರೂವಾರಿಗಳಾದ ಸಮಿತಿಯ ಅಧ್ಯಕ್ಷರು ಆಸ್ಟಿನ್ ವಾಸ್ ಹಾಗೂ ಖಜಾಂಚಿ ವಿಕ್ರಮ್‌‌.ಜಿ ಇವರಿಗೆ ವಿಶೇಷವಾಗಿ  ಧನ್ಯವಾದ ಸಲ್ಲಿಸಿದರು.
Exit mobile version