Site icon SportsKannada ಸ್ಪೋರ್ಟ್ಸ್ ಕನ್ನಡ

ಬಹರೈನ್ ನ ಇಂಡಿಯನ್ ಕ್ಲಬ್ ಆಶ್ರಯದಲ್ಲಿ ಕುಂದಾಪುರ ಹುಡುಗರು ಆಯೋಜಿಸುವ ಕುಂದಾಪುರ ಟ್ರೋಫಿ-2025

ಬಹರೈನ್ ನ ಇಂಡಿಯನ್ ಕ್ಲಬ್ ಆಶ್ರಯದಲ್ಲಿ ಕುಂದಾಪುರ ಹುಡುಗರು ಆಯೋಜಿಸುವ ಕುಂದಾಪುರ ಟ್ರೋಫಿ-2025


ಬಹರೈನ್ ನ ಇಂಡಿಯನ್ ಕ್ಲಬ್ ನ ಆಶ್ರಯದಲ್ಲಿ ATC (ಅಲವಾಧಿ ಟೌನ್ ಕನ್ಸ್ಟ್ರಕ್ಷನ್ ಕಂ. W.L.L) ಮತ್ತು SCS (ಸೀಶೆಲ್ ಸಿಟಿ ಸರ್ವಿಸಸ್ ಕಂ. W.L.L) ಇವರುಗಳ ಸಹಯೋಗದೊಂದಿಗೆ ಬಹರೈನ್ ನಲ್ಲಿ ಕುಂದಾಪುರ ಟ್ರೋಫಿ-2025 ನಡೆಯಲಿದೆ.

ಕುಂದಾಪುರ ಹುಡುಗರು ಈ ಕ್ರಿಕೆಟ್ ಟೂರ್ನಮೆಂಟನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಇದು ಭಾರತೀಯ ವಲಸಿಗರಿಗೆ ಆಯೋಜಿಸಲಾದ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಪುರುಷರ ವಿಭಾಗ ಹದಿನಾರು ತಂಡಗಳನ್ನು ಒಳಗೊಂಡಿರುತ್ತದೆ. ಮಹಿಳೆಯರ ಕ್ರಿಕೆಟ್ ಟೂರ್ನಿಯಲ್ಲಿ ಏಳು ತಂಡಗಳಿವೆ.

ಪಂದ್ಯಗಳು ಜನವರಿ 31 ರಂದು ಶುಕ್ರವಾರ ನಡೆಯಲಿವೆ.

Exit mobile version