SportsKannada | ಸ್ಪೋರ್ಟ್ಸ್ ಕನ್ನಡ

ಕೋಲಾರ-ಸ್ಟಾರ್ ವರ್ಟೆಕ್ಸ್ ಕಂಪೆನಿಯಿಂದ ಕೊರೋನಾ ಸಂತೃಸ್ತರಿಗೆ ಸಹಾಯ ಹಸ್ತ .

ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಒಬ್ಬ ಕ್ರೀಡಾ ಪ್ರೋತ್ಸಾಹಕಿ.
ಇಡೀ ದೇಶವೇ ಕೊರೋನ ವೈರಸ್ ನ ಭೀಕರತೆಗೆ ನಲುಗಿ ಹೋಗಿರುವ ಈ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮನಿಗಾನಹಳ್ಳಿಯ ಗಾಯತ್ರಿ ಮುತ್ತಪ್ಪ ಪ್ರಸ್ತುತ ಬೆಂಗಳೂರಿನ ಕೋರಮಂಗಲದಲ್ಲಿರುವ ಸ್ಟಾರ್ ವರ್ಟೆಕ್ಸ್ ಸಾಫ್ಟ್‌ವೇರ್ ಕಂಪೆನಿಯ ಮಾಲಕಿ.ಸುತ್ತ ಮುತ್ತಲಿನ ಪರಿಸರದ ಬಡವರ್ಗದ ಕೂಲಿಕಾರ್ಮಿಕರು, ನೌಕರರು, ಕೊಳಚೆ ಪ್ರದೇಶದ ನಿವಾಸಿಗಳು, ತೆಲಂಗಾಣದಿಂದ ವಲಸೆ ಬಂದ ನಿರಾಶ್ರಿತರು ಹೀಗೆ ಕೊರೋನ ವೈರಸ್ ನ ಲಾಕ್ ಡೌನ್ ನ ಈ ಸಂದರ್ಭದಲ್ಲಿ ಆ ಪ್ರದೇಶದ ಮನೆ ಮನೆಗೆ  ತೆರಳಿ 2 ದಿನದ ಉಪಾಹಾರದ ವ್ಯವಸ್ಥೆ ಹಾಗೂ ದೈನಂದಿನ ದಿನಕ್ಕೆ ಬೇಕಾದ ಆಹಾರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ.
ಶ್ರೀನಿವಾಸಪುರದಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹಿಸುವ ಇವರು 2019 ರಲ್ಲಿ ನಡೆದ
 S.P. L-2019 ನಲ್ಲಿ ಸ್ಟಾರ್ ವರ್ಟೆಕ್ಸ್ ತಂಡದ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.ಕಳೆದ ಬಾರಿ ಬೆಂಗಳೂರಿನ ಪ್ರತಿಷ್ಠಿತ M. B. C. C. ತಂಡದ ಆಲ್ ರೌಂಡರ್ ಸ್ವಸ್ತಿಕ್ ಇದೇ ತಂಡದಲ್ಲಿ ಆಡಿ ಸ್ಫೋಟಕ ಇನ್ನಿಂಗ್ಸ್ ನ ದಾಖಲೆ ಬರೆದಿದ್ದರು.
Exit mobile version