SportsKannada | ಸ್ಪೋರ್ಟ್ಸ್ ಕನ್ನಡ

ಅ 29,30,31 ಹಾಗೂ ಸೆ.01 ಕೋಲಾರ ಜಿಲ್ಲೆಯ ಎವರ್ ಗ್ರೀನ್ ಕ್ರಿಕೆಟರ್ಸ್ ಬಂಗಾರ ಪೇಟೆ ತಂಡದ ಆಶ್ರಯದಲ್ಲಿ ವಿಶಿಷ್ಟ ಮಾದರಿಯ ಪಂದ್ಯಾಕೂಟ

ಕೋಲಾರ : ಜಿಲ್ಲೆಯ ಎವರ್ ಗ್ರೀನ್ ಕ್ರಿಕೆಟರ್ಸ್ ಬಂಗಾರ ಪೇಟೆ ತಂಡದ ಆಶ್ರಯದಲ್ಲಿ ವಿಶಿಷ್ಟ ಮಾದರಿಯ ಪಂದ್ಯಾಕೂಟ 29,30,31 ಹಾಗೂ 1 ಹೀಗೆ 4 ದಿನಗಳ ಕಾಲ ಹಗಲಿನಲ್ಲಿ ಕೆ.ಜಿ.ಎಫ್ ಮುಖ್ಯ ರಸ್ತೆಯ ಜ್ಯೂನಿಯರ್ ಕಾಲೇಜ್ ಅಂಗಣದಲ್ಲಿ ನಡೆಯಲಿದೆ.

ಪ್ರಾರಂಭದ 2 ದಿನಗಳ ಪಂದ್ಯಗಳು ಕೋಲಾರ ಜಿಲ್ಲೆಯ 12 ತಂಡಗಳಿಗೆ ಸೀಮಿತವಾದರೆ, ಕೊನೆಯ 2 ದಿನಗಳು ರಾಜ್ಯದ ಪ್ರತಿಷ್ಟಿತ 12 ತಂಡಗಳು ಪ್ರತಿಷ್ಟಿತ ಪಂದ್ಯಾಕೂಟದ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ.

ಈ ಪಂದ್ಯಾಕೂಟದ ವಿಜೇತ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ 1 ಲಕ್ಷ,ತೃತೀಯ ಸ್ಥಾನಿ 25,000 ಹಾಗೂ ಚತುರ್ಥ ಸ್ಥಾನಿ ತಂಡ 20,000 ನಗದಿನ ಜೊತೆಗೆ ವೈಯಕ್ತಿಕ ಪ್ರಶಸ್ತಿಯಾಗಿ ಆಕರ್ಷಕ ಬಹುಮಾನಗಳನ್ನು ನಗದು ಸಹಿತ ಪಡೆಯಲಿದ್ದಾರೆ.

ಬಂಗಾರಪೇಟೆ ಇತಿಹಾಸದಲ್ಲೇ ಸಂಚಲನ ಮೂಡಿಸಲಿರುವ ಈ ಪಂದ್ಯಾಕೂಟ ಗೋವಿಂದರಾಜ್, ನಾಗರಾಜ್, ನಂದೀಶ್ ಹಾಗೂ ಅಕ್ರಮ್ ಖಾನ್ ರ ದಕ್ಷ ಪ್ರಾಯೋಜಕತ್ವದಲ್ಲಿ ಜರುಗಲಿದ್ದು. ವೀಕ್ಷಕ ವಿವರಣೆಯ ನೇತೃತ್ವವನ್ನು ರಾಜ್ಯದ ಶ್ರೇಷ್ಠ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ನಿರ್ವಹಿಸಿದರೆ. ತೀರ್ಪುಗಾರರಾಗಿ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಸಂಗಡಿಗರಿದ್ದರೆ,ಪಂದ್ಯಾಕೂಟದ ನೇರ ಪ್ರಸಾರವನ್ನು ಸಚಿನ್ ಮಹಾದೇವ್ ನೇತೃತ್ವದ M.Sports ರಾಷ್ಟ್ರದಾದ್ಯಂತ ಬಿತ್ತರಿಸಲಿದ್ದು.

ಮೀಡಿಯಾ ಪಾರ್ಟ್ನರ್ ರೂಪದಲ್ಲಿ “ಸ್ಪೋರ್ಟ್ಸ್ ಕನ್ನಡ” ಪಂದ್ಯಾಕೂಟದ ಸಂಪೂರ್ಣ ವರದಿ ಪ್ರಕಟಿಸಲಿದೆ.

Exit mobile version